ಅದು 1982ರ ಸಮಯ. ಅವತ್ತು ಇಡೀ ಕರ್ನಾಟಕ ಮಾತ್ರವಲ್ಲ, ಇಡೀ ಪ್ರಪಂಚವೇ ಭಾರತದತ್ತ ಆಸ್ಥೆಯಿಂದ, ಅಷ್ಟೇ ಅಚ್ಚರಿಯಿಂದ ನೋಡುತ್ತಿತ್ತು. ಅವತ್ತು ಸೇರಿದ್ದ ಲಕ್ಷ-ಲಕ್ಷ ಜನರನ್ನು ಕಂಡು ಸಕರ್ಾರವೇ ಬೆಚ್ಚಿಬಿದ್ದಿತ್ತು. ಅಂಥದ್ದೊಂದು ಮಿಂಚಿನ ಸಂಚಲನಕ್ಕೆ ಕಾರಣವಾಗಿದ್ದು ಅಣ್ಣಾವ್ರು. ಕಣ್ಣು ಹಾಯಿಸಿದ ಕಡೆ ಜನ, ಅದೆಷ್ಟು ಲಕ್ಷವೋ ಲೆಕ್ಕವಿಟ್ಟವರಿಲ್ಲ. ಗುಂಡೂರಾವ್ ನೇತೃತ್ವದ ಸರ್ಕಾರವೇ ತಬ್ಬಿಬ್ಬಾಗಿತ್ತು. ಸುಮ್ಮನೇ ಇದ್ದರೇ ಅನಾಹುತ ಖಾತ್ರಿ ಅಂತ ಕಾಂಪ್ರಮೈಸ್ ಗೆ ಇಳಿದಿತ್ತು. ಲಕ್ಷಾಂತರ ಜನರನ್ನು ಒಂದು ಕಡೆ ಸೇರಿಸುವ ಸಾಮಥ್ರ್ಯವಿದ್ದ ಆ ಅಗಾಧ ಶಕ್ತಿಯ ಹೆಸರು ಡಾ. ರಾಜ್ಕುಮಾರ್. ಅದು ಗೋಕಾಕ್ ಚಳುವಳಿ. ನಾಡಿನ ಜನ ಅದೆಷ್ಟು ಭಾವುಕರೆಂದರೇ ಕೇವಲ ರಾಜ್ಕುಮಾರ್ಗಾಗಿ ಅವರು ಚಳುವಳಿಗೆ ಧುಮುಕಿದ್ದರು. ಅಷ್ಟಕ್ಕೂ ಅವರಿಗೆ ಯಾವ ಚಳುವಳಿಯ ಹುಕಿ ಇರಲಿಲ್ಲ. ಅವರಿಗೆ ಅಣ್ಣಾವ್ರನ್ನ ನೋಡಬೇಕಿತ್ತು. ಅವರನ್ನು ಮನಸಾರೆ ಮಾತಾಡಿಸಬೇಕಿತ್ತು. ಅವಕಾಶ ಸಿಕ್ಕರೇ ಒಂದೇ ಒಂದು ಅಪ್ಪುಗೆಗಾಗಿ ಹಾತೊರೆದಿದ್ದರು.
ಆಗ ಕರ್ನಾಟಕದಲ್ಲಿ ಆರ್. ಗುಂಡೂರಾವ್ ಸರ್ಕಾರವಿತ್ತು. ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಏಕೈಕ ಪ್ರೌಢಭಾಷೆಯನ್ನಾಗಿ ಮಾಡಬೇಕೆಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ವಿನಾಯಕ ಕೃಷ್ಣ ಗೋಕಾಕ್, ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ವರದಿಯನ್ನು ಜಾರಿಗೆ ತರಲು ಸರ್ಕಾರ ನಿರಾಕರಿಸಿತ್ತು. ಆ ಕಾರಣಕ್ಕೆ ಸಾಹಿತಿಗಳು, ಪತ್ರಕರ್ತರು, ಸಂಘಟಕರು ಸೇರಿಕೊಂಡು ಗೋಕಾಕ್ ಚಳುವಳಿಗೆ ಕರೆ ನೀಡಿದರು. ಆದರೆ ಗೋಕಾಕ್ ಚಳುವಳಿಗೆ ಜನರ ಬೆಂಬಲ ಸಿಗಲಿಲ್ಲ. ನೀರಸ ಆರಂಭ ಕಂಡಿತ್ತು. ಸಪ್ಪೆಯಾಗಿದ್ದ ಚಳುವಳಿಯನ್ನು ಕಂಡು ಸರ್ಕಾರ ತಲೆ ಕೆಡಿಸಿಕೊಳ್ಳದೇ ಸುಮ್ಮನಾಯಿತು. ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯರಿಗೆ ಆಗೊಂದು ಉಪಾಯ ಹೊಳೆದಿತ್ತು. ಚಳುವಳಿಗೆ ಜನರನ್ನು ಸೆಳೆಯಲು, ಅವರನ್ನು ಭಾವನಾತ್ಮಕವಾಗಿ ಗೆದ್ದ ವ್ಯಕ್ತಿಯಿಂದ ಮಾತ್ರ ಸಾಧ್ಯ..! ಅಂಥವರು ಚಳುವಳಿಗೆ ಧುಮುಕಿಬಿಟ್ಟರೇ ತಮ್ಮ ಉದ್ದೇಶ ಖಂಡಿತಾ ಈಡೇರುತ್ತದೆ. ಹಾಗಾದ್ರೆ ಅಂಥ ವ್ಯಕ್ತಿ ಯಾರು..? ಒಬ್ಬ ರಾಜ್ ಕುಮಾರ್ ಬಿಟ್ಟರೇ ಇನ್ಯಾರು ಇರಲು ಸಾಧ್ಯ..?. ಯಾವಾಗ ರಾಜ್ ಕುಮಾರ್ ಗೋಕಾಕ್ ಚಳುವಳಿಗೆ ಧುಮುಕಿದರೋ, ಲಕ್ಷ-ಲಕ್ಷ ಜನರು ಚಳುವಳಿಯಲ್ಲಿ ಭಾಗವಹಿಸಿದರು. ಚಳುವಳಿ ಉಗ್ರಸ್ವರೂಪ ಕಾಣುವ ಲಕ್ಷಣ ಗೋಚರಿಸಿದಾಗ ಬೆದರಿದ ಸರ್ಕ್ರ ಹೊಸಭಾಷ್ಯ ನೀತಿಸೂತ್ರ ರಚಿಸಿತ್ತು. ಅಲ್ಲಿಗೇ ಗೋಕಾಕ್ ಚಳುವಳಿ ತಣ್ಣಗಾಗಿತ್ತು. ಇಡೀ ಚಳುವಳಿ ಡಾ. ರಾಜ್ ಕುಮಾರ್ ಕಾರಣಕ್ಕೆ ಯಶಸ್ವಿಯಾಗಿತ್ತು
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!