ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ಬಸ್ ತಂಗುದಾಣವನ್ನ ನಿರ್ಮಿಸಲಾಗ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲೆ ತಂಗುದಾಣ ನಿರ್ಮಿಸಲಾಗುತ್ತಿಲ್ಲ.
ಈಗಾಗಲೇ ಈ ಬಗ್ಗೆ ಸರ್ಕಾರ, ತಜ್ಞರ ಸಮಿತಿಗೆ ಪತ್ರ ಬರೆಯಲಾಗಿದ್ದು, ತಜ್ಞರ ಸಮಿತಿ ಬಂದು ಬಸ್ ತಂಗುದಾಣ ನೋಡಿ ವರದಿ ನೀಡಲಿ. ಬಸ್ ತಂಗುದಾಣ ನಿರ್ಮಿಸುವುದರಲ್ಲಿ ತಪ್ಪಿದೆ ಎಂದು ವರದಿಯಲ್ಲಿ ತಿಳಿಸಿದರೆ ಅದನ್ನ ಬದಲಿಸಲು ನಮ್ಮ ಅಭ್ಯಂತರವಿಲ್ಲ ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.
ಮೈಸೂರು ಪಾರಂಪರಿಕ ನಗರಿಯಾಗಿದ್ದು, ಇದರ ಮಹತ್ವ ಸಾರುವ ದೃಷ್ಟಿಯಿಂದ ಅರಮನೆ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಿಸಲು ತೀರ್ಮಾನಿಸಿದೆ. ಇದನ್ನ ತಪ್ಪಾಗಿ ಅರ್ಥೈಸಿ, ಗುತ್ತಿಗೆದಾರ ಮುಸ್ಲಿಂ ಆಗಿರುವುದರಿಂದ ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಲಾಗಿದೆ. ಈ ಬಗ್ಗೆ ಮೈಸೂರು ಪೊಲೀಸ್ ಕಮಿಷನರ್ ಗೂ ದೂರು ನೀಡಲಾಗಿದ್ದು, ಮೈಸೂರಿನ ಹಲವೆಡೆ ಇದೇ ಮಾದರಿ ತಂಗುದಾಣಗಳಿವೆ. ಅದರ ವಿನ್ಯಾಸದ ಆಧಾರದ ಮೇಲೆ ನಮ್ಮ ಕ್ಷೇತ್ರದಲ್ಲಿ ತಂಗುದಾಣ ನಿರ್ಮಾಣ ಮಾಡಲಾಗ್ತಿದ್ದು, ದಂತಿ ಕನ್ ಸ್ಟ್ರಕ್ಷನ್ ನ ಮಹದೇವ್ ಎಂಬುವರಿಗೆ ಗುತ್ತಿಗೆ ನೀಡಲಾಗಿದೆ. ಇನ್ನ ಸಂಸದರ ಎಚ್ಚರಿಕೆಯ ನಂತರ ಕಳಸ ಅಳವಡಿಸಲಾಗಿದೆ ಎಂಬ ಸುದ್ದಿಗಳು ಹರಿದಾಡ್ತಿದೆ. ಆದ್ರೆ, ಬಸ್ ತಂಗುದಾಣಕ್ಕೆ ಕಳೆದ ವಾರವೇ ಕಳಸ ಅಳವಡಿಸಲಾಗಿದೆ ಎಂದು ಶಾಸಕ ಶಾಸಕ ರಾಮದಾಸ್ ಸ್ಯಾಟಲೈಟ್ ಫೋಟೋ ಬಿಡುಗಡೆ ಮಾಡಿದ್ದಾರೆ.