ಮೃಗಾಲಯದಲ್ಲಿ ಜಿಂಕೆ ಹಾಗೂ ಸಾರಂಗ ಸಂತತಿ ನಿರೀಕ್ಷೆಗೂ ಮೀರಿ ಹೆಚ್ಚಳ

0
45

ಮೈಸೂರು ಮೃಗಾಲಯದಲ್ಲಿ ಜಿಂಕೆ ಹಾಗೂ ಸಾರಂಗ ಸಂತತಿ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಕೆಲ ಜಿಂಕೆ ಹಾಗೂ ಸಾರಂಗಗಳನ್ನು ದಾಂಡೇಲಿ ಅಭಯಾರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ.

ಅರಣ್ಯ ಇಲಾಖೆ ಬೇಡಿಕೆಯಂತೆ ಹೆಚ್ಚುವರಿ ಜಿಂಕೆ ಹಾಗೂ ಸಾರಂಗಗಳನ್ನು ಸಾಗಾಣೆ ಮಾಡಲಾಗ್ತಿದೆ. 1 ವಾರದಲ್ಲಿ ಕಾಡಿಗೆ 30ಕ್ಕೂ ಹೆಚ್ಚು ಚಿಂಕೆಗಳನ್ನು ರವಾನೆ ಮಾಡಲಿದ್ದು, ಹಲವು ಅಭಯಾರಣ್ಯಗಳಿಂದ ಜಿಂಕೆಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಬೋರ್ಡ್‌ ಸಭೆಯಲ್ಲಿ ನಿರ್ಧರಿಸಿ, ಮೃಗಾಲಯಕ್ಕೆ ಅಗತ್ಯವಿರುವ ಜಿಂಕೆ ಉಳಿಸಿಕೊಂಡು ಉಳಿದವುಗಳನ್ನು ಕಾಡಿಗೆ ಬಿಡಲಾಗುತ್ತೆ ಎಂದು ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here