ದೀಪಿಕಾ ತಾಳಿ ಬೆಲೆ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ.. ಈ ತಾಳಿಯ ವಿಶೇಷತೆ ಏನು ಗೊತ್ತಾ..?
ಬಾಲಿವುಡ್ ಹಾಟ್ ಅಂಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೆ ರಣ್ವೀರ್ ಸಿಂಗ್ ತಾವು ಅಂದುಕೊಂಡತೆ ವಿದೇಶದಲ್ಲಿ ಅದ್ದೂರಿಯಾಗಿ ಮದುವೆಯಾಗಿ ತವರಿಗೆ ವಾಪಸ್ಸಾಗಿದ್ದಾರೆ.. ಸದ್ಯ ಬೆಂಗಳೂರಿಗೆ ಆಗಮಿಸಿರುವ ಈ ಜೋಡಿಯನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.. ಇನ್ನೂ ಜೊತೆಯಾಗಿ ಬಂದ ಜೋಡಿಗಳ ನಡುವೆ ಹೈಲೆಟ್ ಆಗಿದ್ದು ಮಾತ್ರ ದೀಪಿಕಾ ಪಡುಕೋಣೆಯ ತಾಳಿ…
ಇದರ ಬೆಲೆ 20 ಲಕ್ಷವಂತೆ.. ಕರಿಮಣಿ ಹಾಗೆ ಚಿನ್ನ ಎರಡೂ ಸೇರಿರೋ ಈ ತಾಳಿಯಲ್ಲಿ ಏಕರತ್ನಾಭರಣ ಮಂಗಳಸೂತ್ರವಿದೆ.. ವಜ್ರವನ್ನ ಸಹ ಇದರಲ್ಲಿ ಅಳವಡಿಸಲಾಗಿದ್ದು, ಅಪರೂಪದ ಹಾಗೆ ದುಬಾರಿ ವೆಚ್ಚ ತಾಳಿ ಇದಾಗಿದೆ.. ಇದರಲ್ಲಿ ಸಿಂಗಲ್ ಸ್ಟೋನ್ ಡೈಮಂಡ್ ಉತ್ಕೃಷ್ಟ ಮಟ್ಟದಾಗಿದೆ.. ಇದನ್ನ ಸ್ವತಃ ದೀಪಿಕಾಳೆ ಆಯ್ಕೆ ಮಾಡಿದ್ರು.. ಇನ್ನು ಎಂಗೇಜ್ಮೆಂಟ್ ಸಂದರ್ಭದಲ್ಲಿ ರಣ್ಬೀರ್ ತನ್ನ ಪತ್ನಿಗೆ ತೊಡಿಸಿದ್ದ ಉಂಗುರದ ಬೆಲೆ ಬರೋಬ್ಬರಿ 2.7 ಕೋಟಿಯದ್ದಾಗಿತ್ತು..