ನಟ ರಕ್ಷಿತ್ ಶೆಟ್ಟಿ ಮತ್ತು ತಮ್ಮ ನಡುವಿನ ಬ್ರೇಕಪ್ ಸುದ್ದಿಯನ್ನು ನಟಿ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮೊದಲ ಬಾರಿಗೆ ತೆಲುಗು ಮಾಧ್ಯಮಗಳ ಮುಂದೆ ರಶ್ಮಿಕಾ ಮಂದಣ್ಣ ಮಾತಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಂಗೆ ಪರಿಚಯವಾಗಿದ್ದು ಕಿರಿಕ್ ಪಾರ್ಟಿ ಚಿತ್ರದ ಮೂಲಕ.
ಈ ಪರಿಚಯ ಪ್ರೀತಿಯಾಗಿ ಬದಲಾಗುವುದಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ. ಕೊನೆಗೆ ನಮ್ಮಿಬ್ಬರ ಪ್ರೀತಿಯ ವಿಷಯವನ್ನು ನಾನೇ ಮೊದಲು ನಮ್ಮ ತಾಯಿ ಅವರ ಬಳಿ ಹೇಳಿಕೊಂಡೆ. ನಮ್ಮಿಬ್ಬರ ಪ್ರೀತಿ ವಿಷಯಕ್ಕೆ ನಮ್ಮ ತಾಯಿ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಲಿಲ್ಲ. ಅವರು ಕೂಡ ಖುಷಿಯಾಗಿಯೇ ಒಪ್ಪಿಕೊಂಡರು ಎಂದು ಹೇಳಿದ್ದಾರೆ.
ಇಬ್ಬರ ಕುಟುಂಬದ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ, ನಮ್ಮಿಬ್ಬರ ನಡುವೆ ಕೆಲವು ಕಾರಣಗಳಿಗೆ ಮನಸ್ತಾಪ ಉಂಟಾಯಿತು. ಈ ಮನಸ್ತಾಪದಿಂದ ಇಬ್ಬರು ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನಿಸಿತು. ಈ ಕಾರಣಕ್ಕೋಸ್ಕರ ನಾನು ಮತ್ತು ರಕ್ಷಿತ್ ಶೆಟ್ಟಿ ಪರಸ್ಪರ ದೂರವಾಗಿದ್ದೇವೆ. ಈ ಬಗ್ಗೆ ಯಾರಿಗೂ ಏನೂ ಯಾರಿಗೂ ಏನೂ ಬೇಸರವಿಲ್ಲ. ಖುಷಿಯಿಂದಲೇ ದೂರವಾಗಿದ್ದೇವೆ ಎಂದಿದ್ದಾರೆ ರಶ್ಮಿಕಾ.