ಪ್ರೇಮಲೋಕದ ಕಲಾವಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ನೆಚ್ಚಿನ ನಟನಿಗೆ ಅಭಿಮಾನಿಗಳು ಗುಲಾಬಿ ಕೊಟ್ಟು ಶುಭ ಹಾರೈಸಿದ್ದಾರೆ.
ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಪಡ್ಡೆಹುಲಿ’ ಚಿತ್ರತಂಡ ಉಡುಗೊರೆ ರೂಪದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.
ಗುರುದೇಶ್ ಪಾಂಡೆ ನಿರ್ದೇಶನದ ಪಡ್ಡೆಹುಲಿಗೆ ಕೆ. ಮಂಜು ಬಂಡವಾಳ ಹಾಕಿದ್ದಾರೆ.
ಈ ಚಿತ್ರದಲ್ಲಿ ರವಿಚಂದ್ರನ್ ಸಾಹಿತ್ಯಾಭಿಮಾನಿಯಾಗಿ, ಕನ್ನಡ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಓದುವ ಹವ್ಯಾಸವನ್ನು ಕೈ ಬಿಟ್ಟಿರುವ ಯುವ ಜನತೆ , ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಭಿಮಾನಿಗಳು ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ ಕನಿಷ್ಟ ಒಂದು ಪುಸ್ತಕವನ್ನಾದರೂ ಓದುವ ಮೂಲಕ ವಿಶೇಷವಾಗಿ, ಅರ್ಥಪೂರ್ಣವಾಗಿ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಬೇಕು ಎಂದು ಪಡ್ಡೆಹುಲಿ ಚಿತ್ರತಂಡ ಮನೆಮಾಡಿದೆ.