ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನನಕ್ಕೆ ಚಿತ್ರರಂಗದ ಕಲಾವಿದರೆಲ್ಲ ಇಂದು ಕಂಠೀರಣ ಸ್ಟೇಡಿಯಂನ ಕಡೆ ಆಗಮಿಸುತ್ತಿದ್ದಾರೆ.. ಈ ನಡುವೆ ಕನ್ನಡದ ಹೆಸರಾಂತ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತ್ರ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಬೇಕ ಬೇಡ್ವ ಎಂಬ ಗೊಂದಲದಲ್ಲಿ ಇದ್ರಂತೆ..ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಇಬ್ಬರ ನಡುವೆ ಉತ್ತಮ ಭಾಂದವ್ಯವಿದೆ.. ಜೊತೆಗೆ ಹುಟ್ಟುಹಬ್ಬ ಒಂದೊಂದು ದಿನ ಅಂತರದಲ್ಲೆ ಇದೆ.. ಸದ್ಯಕ್ಕೆ ಈ ಇಬ್ಬರು ಕೊನೆಯದಾಗಿ ಅಭಿನಯಿಸಿದ ಚಿತ್ರ ಕುರುಕ್ಷೇತ್ರ.. ಅಂಬಿ ಅವರೊಂದಿಗೆ ದಶಕಗಳಿಂದ ಸ್ನೇಹ ಜೀವಿಯಾಗಿರೋ ಕ್ರೇಜಿಸ್ಟಾರ್ ಅವರನ್ನ ಇಂದು ಬರೋದಾ ಬೇಡವಾ ಎಂದು ಮನಸ್ಸು ತುಂಬಾ ಕಾಡಿತಂತೆ..
ಅಂಬರೀಶ್ ಎಂದಿಗೂ ನನ್ನ ಒಳಗೆ ಜೀವಂತವಾಗಿ ಇರುತ್ತಾರೆ.. ಹೀಗಾಗೆ ಅವರನ್ನ ಕೊನೆ ಘಳಿಗೆಯಲ್ಲಿ ಹೀಗೆ ನೋಡಬೇಕಾ ಅಂತ ಮನಸ್ಸು ತುಂಬಾ ಕಾಡಿತ್ತು.. ಆದರು ಅದ್ಯಾಕೋ ಸುಮ್ಮನೆ ಇರಲು ಸಾಧ್ಯವಾಗಿಲ್ಲ.. ಹೀಗಾಗೆ ಇಲ್ಲಿಗೆ ಬಂದುಬಿಟ್ಟೆ ಎಂದಿದ್ದಾರೆ..