ನಿಸರ್ಗದ ಅತ್ಯಂತ ಸುಂದರವಾದ.. ಆ ಸೌಂದರ್ಯಕ್ಕೆ ಬೆಲೆ ಕಟ್ಟಲಾಗದ ಗ್ರಹ ಎಂದರೆ ಅದು ಚಂದ್ರನಲ್ಲದೆ ಮತ್ಯಾವುದೂ ಅಲ್ಲ.. ಕವಿ ದಾರ್ಶನಿಕರೆಲ್ಲರೂ ಚಂದ್ರನ ಸೌಂದರ್ಯದ ಕುರಿತು ಅದೆಷ್ಟೋ ಕವಿತೆಗಳನ್ನು ಗೀಚಿದ್ದಾರೆ.. ಅಮ್ಮ ತನ್ನ ಮಗುವಿಗೆ ತುತ್ತು ನೀಡೋಕು ಮೊದ್ಲು ಚಂದಿರನ ಸೌಂದರ್ಯವನ್ನು ವರ್ಣಿಸುತ್ತಾಳೆ.. ಒಟ್ಟಾರೆಯಾಗಿ ಪ್ರಕೃತಿಗೆ ದೃಷ್ಠಿ ಬೊಟ್ಟು ಚಂದಮಾಮ ಎಂದರೆ ತಪ್ಪಾಗೊಲ್ಲ ಅನ್ಸತ್ತೆ.. ಆದ್ರೆ ಈ ವರ್ಷ ನಮ್ಮ ಚಂದಮಾಮ ಭೂಮಿಗೆ ಅತೀ ಸಮೀಪದಲ್ಲೇ ಘೋಚರಿಸುತ್ತಾನೆ.. ಈ ಒಂದು ಅವಿಸ್ಮರಣೀಯ ದಿನ ಸುಮಾರು 70 ವರ್ಷಗಳ ಹಿಂದೆ ಸಂಭವಿಸಿತ್ತು.. ಅದೇ ದಿನ ಈ ವರ್ಷವೂ ಬರಲಿದೆ.. ಪ್ರಕೃತಿ ಪ್ರೇಮಿಗಳು ಈ ಅವಕಾಶವನ್ನ ಮಿಸ್ ಮಾಡ್ಕೊಳ್ದೇ ಕಾಯ್ತಾ ಇರಿ.. ಅದೆಲ್ಲಾ ಇರ್ಲಿ ಈ ರಮಣಿಯ ದಿನ ಯಾವತ್ತು ಅಂತ ಕೇಳ್ತೀರಾ..? ಇದೇ ನವೆಂಬರ್ 14 ರಂದು ನೋಡಿ..! ಆ ದಿನ ನಮ್ಮ ಚಂದಮಾಮ ಇಂದೆಂದಿಗಿಂತ ಮೂರ್ನಾಲ್ಕು ಪಟ್ಟು ದೊಡ್ಡದಾಗಿ ಕಂಗೊಳಿಸಲಿದ್ದಾನೆ.. ಅಂದರೆ ಶೇ.14ರಷ್ಟು ದೊಡ್ಡದಾಗಿ ಹಾಗೂ ಶೇ.30ಕ್ಕೂ ಹೆಚ್ಚು ಪ್ರಕಾಶಮಾನವಾಗಿ ಬೆಳಗಲಿದ್ದಾನೆ.. ಅದು ಎಷ್ಟರ ಮಟ್ಟಿಗೆ ಅಂದ್ರೆ ಚಂದ್ರ ಮತ್ತು ಭೂಮಿಯ ನಡುವಿನ ಅಂತರ ಅತ್ಯಂತ ಸಮೀಪವಾಗಿರುತ್ತದೆ. ಅರೆ ಇದೇನು ದೊಡ್ಡ ಸುದ್ದಿಯೇನಲ್ವಲ್ಲ ಅಂತ ನಿಮ್ಮ ಭಾವನೆಯಾಗಿದ್ರೂ ಇಂತಹ ಪ್ರಕೃತಿ ವಿಸ್ಮಯಗಳು ಸಂಭವಿಸೋದು ಅದೆಷ್ಟೋ ವರ್ಷಗಳ ನಂತರ ಅನ್ನೋದು ಮಾತ್ರ ಮರೀಬೇಡಿ.. ಅಷ್ಟೆ ಅಲ್ಲ ಈ ಬಾರಿ ನೀವು ಚಂದ್ರನ ಬೃಹಧಾಕಾರದ ದೃಶ್ಯವನ್ನು ನೋಡದೇ ಹೋದರೆ.. ಮತ್ತೊಮ್ಮೆ ಈ ಅವಕಾಶಕ್ಕಾಗಿ ಮುಂದಿನ ನವೆಂಬರ್ 25, 2034ರ ವರೆಗೆ ಕಾಯಬೇಕು..! ಹೀಗಾಗಿ ಇದೇ ತಿಂಗಳ ನವೆಂಬರ್ 14 ರಂದು ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸ್ವಲ್ಪ ಬ್ರೇಕ್ ಕೊಟ್ಟು ನಿಮ್ಮ ಪ್ರಿಯತಮೆಯೊಂದಿಗೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಕಾಲ ಕಳೆಯಿರಿ…
Like us on Facebook The New India Times
POPULAR STORIES :
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!
ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!






