ಪುಲ್ವಾಮ ದಾಳಿ : ಯೋಧರ ಕುಟುಂಬಕ್ಕೆ ಮುಕೇಶ್ ಅಂಬಾನಿ ಫ್ಯಾಮಿಲಿಯಿಂದ ಸಹಾಯಹಸ್ತ…
ಪುಲ್ವಾಮದಲ್ಲಿ 45 ಸಿಆರ್ ಪಿಎಫ್ ಯೋಧರ ಹತ್ಯಗೆ ಕಾರಣವಾದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ಇಡೀ ದೇಶವೇ ಆಗ್ರಹಿಸಿದೆ.. ಈ ನಡುವೆ ಹುತಾತ್ಮರಾದ ಯೋಧನ ಕುಟುಂಬ ನಿರ್ವಹಣೆ ಹೇಗೆ ಅವರ ಭವಿಷ್ಯವೇನು ಎಂಬ ಪ್ರಶ್ನೆಯು ಮೂಡುತ್ತೆ.. ಹೀಗಾಗೆ ಸರ್ಕಾರ ಸೇರಿದಂತೆ ಗಣ್ಯರು ಸಾರ್ವಜನಿಕರು ಯೋಧರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ…
ಸದ್ಯ ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಫ್ಯಾಮಿಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿದೆ.. ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನ ತಾವೇ ನೀಡುವುದಾಗಿ ತಿಳಿಸಿದ್ದು, ಎಷ್ಟು ಬೇಕಾದ್ರು ಓದಲಿ ಅದಕ್ಕೆ ನಾವೇ ಹಣವನ್ನ ನೀಡುತ್ತೇವೆ ಎಂದಿದ್ದಾರೆ.. ಅಷ್ಟೇ ಅಲ್ಲದೆ ಅವರ ಉದ್ಯೋಗಕ್ಕು ತಾವೇ ಜವಾಬ್ದಾರಿಯನ್ನ ಹೊರುವುದಾಗಿ ತಿಳಿಸಿದೆ..