10 ಸಾವಿರದ ಬದಲು 69ಸಾವಿರ ಕೋಟಿ ಸಂಬಳ ಬಂತು..! ಮಾಜಿ ಸರ್ಕಾರಿ ನೌಕರ ಭಾರತದ ಆಗರ್ಭ ಶ್ರೀಮಂತರಾಗಿದ್ದು ಹೇಗೆ ಗೊತ್ತಾ..!

Date:

 

ಅವರ ಹೆಸರು ದಾಸಿರಾಮ್ ಭಿಲ್ಲೋರೆ ಅಂತ. ವಯಸ್ಸು 66. ರೇಲ್ವೇ ಇಲಾಖೆಯಲ್ಲಿ ಕೆಲಸ ಮಾಡಿ ರಿಟೈರ್ಡ್ ಆಗಿದ್ದಾರೆ. ಅವರ ಪಲಾಸ್ ನೇರ್ ಎಂಬ ಗ್ರಾಮದಲ್ಲಿ ತಮ್ಮ 4 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಹಾಯಾಗಿದ್ದಾರೆ. ಆದರೆ ಅವರು ಇದ್ದಕ್ಕಿದ್ದಂತೆ ಒಂದು ದಿನ ದೊಡ್ಡ ಶ್ರೀಮಂತರಾಗಿದ್ದರು. ಏಕೆಂದರೆ ಅವರ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 69,291 ಕೋಟಿ ರೂಪಾಯಿ ಮೊತ್ತದ ಹಣ ಜಮೆ ಆಗಿತ್ತು..! ಆದರೆ ಅದರ ಬಗ್ಗೆ ದಾಸಿರಾಮ್ ರವರಿಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.
ಹೌದು.. ದಾಸಿರಾಮ್ ರವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಖಾತೆಗೆ 69,291 ಕೋಟಿ ರೂಪಾಯಿ ಮೊತ್ತದ ಹಣ ಜಮೆ ಆಗಿತ್ತು. ಒಂದು ದಿನ ಅಷ್ಟು ದೊಡ್ಡ ಮೊತ್ತಕ್ಕೆ ತೆರಿಗೆ ಕಟ್ಟಿ ಎಂದು ಒಂದು ನೋಟಿಸ್ ಬಂದಿತ್ತು. ನೋಟಿಸ್ ಗಮನಿಸಿ ನೇರವಾಗಿ ಬ್ಯಾಂಕ್ ಗೆ ಹೋಗಿ ಖಾತೆ ಕ್ರಮಾಂಕ 10787534782 ನ್ನು ತೆರೆದು ನೋಡಿದಾಗ ಬರೋಬ್ಬರಿ 69291069442629.66 ರೂಪಾಯಿ ಜಮೆಯಾಗಿದ್ದು ತಿಳಿದು ಬಂತು..! ಸುದ್ದಿ ತಿಳಿದು ದಾಸಿರಾಮ್ ಗೆ ಆಶ್ಚರ್ಯದ ಜೊತೆಗೆ ಖುಷಿಯೂ ಆಗಿತ್ತು. ಆದರೆ ಆ ಖುಷಿ ಹೆಚ್ಚಿನ ಸಮಯ ಇರಲಿಲ್ಲ. ಏಕೆಂದರೆ ಅವರ ಖಾತೆಯಲ್ಲಿ ತಾಂತ್ರಿಕ ದೋಷದಿಂದ ಹಣ ಜಮೆಯಾಗಿದ್ದು, ಅದನ್ನು ಸರಿಪಡಿಸುವುದಾಗಿ ಬ್ಯಾಂಕ್ ನ ಅಧಿಕಾರಿಗಳು ತಿಳಿಸಿದರು..!
ಈ ಎಲ್ಲಾ ಸುದ್ದಿಗೆ ಕಾರಣವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು..! 27ನೇ ಡಿಸೆಂಬರ್ 2015ರಂದು 69291 ಕೋಟಿ ಮೊತ್ತದ ಚೆಕ್ ಒಂದು ದಾಸಿರಾಮ್ ರವರ ಅಕೌಂಟ್ ಗೆ ಜಮೆಯಾಗಿತ್ತು. ಬಳಿಕ ಸಮಸ್ಯೆಯನ್ನು ಪರಿಹರಿಸಿದ ಅಧಿಕಾರಿಗಳು ದಾಸಿರಾಮ್ ರ ಅಕೌಂಟ್ ನಲ್ಲಿದ್ದ 2714 ರೂಪಾಯಿ ಹಣವನ್ನು ಮತ್ತೇ ಹಾಕಿದರು. ಅಲ್ಲಿಗೆ ಸಮಸ್ಯೆಗೆ ಅಂತ್ಯ ಹಾಡಲಾಯಿತು.
ದಾಸಿರಾಮ್ ಭೀಲ್ಲೋರೆರವರು ಕೆಲ ದಿನಗಳ ಮಟ್ಟಿಗೆ ಭಾರತದ 7ನೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶೇಷವೆಂದರೆ ಭಾರತದ ಅತಿ ದೊಡ್ಡ ಶ್ರೀಮಂತರಲ್ಲಿ ಸ್ಥಾನ ಪಡೆದಿರುವ ಗೌತಮ್ ಅದಾನಿ, ಬಿರ್ಲಾರಂತವರ ಹತ್ತಿರ ಇರುವ ಹಣಕ್ಕಿಂತಲೂ ಹೆಚ್ಚು ಮೊತ್ತದ ಹಣ ದಾಸಿರಾಮ್ ರ ಬಳಿ ಇತ್ತು. ಫೋರ್ಬ್ಸ್ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿಯವರ ಬಳಿ 20 ಸಾವಿರ ಕೋಟಿ ಮೊತ್ತದ ಹಣವಿದೆ. ಬಳಿಕ ಅಜೀಂ ಪ್ರೇಮ್ ಜಿ, ಶಿವ್ ನಾದಾರ್, ಹಿಂದುಜಾ ಗ್ರೂಪ್ ಗಳು ಮಾತ್ರ ದಾಸಿರಾಮ್ ರವರಿಗಿಂತ ಹೆಚ್ಚು ಮೊತ್ತದ ಹಣವನ್ನು ಹೊಂದಿದ್ದವು. ಆದರೆ ಈ ಎಲ್ಲಾ ಸುದ್ದಿ ಸುಳ್ಳಾಗಿ ದಾಸಿರಾಮ್ ರವರ ಮೇಲೆ ಜಾರಿಯಾಗಿದ್ದ ನೋಟಿಸ್ ಕೂಡಾ ರದ್ದಾಗಿದ್ದು, ಅವರು ಈ ಶ್ರೀಮಂತರಿಗೆ ಅನ್ನ ನೀಡುವ ಕೃಷಿ ಕೆಲಸಕ್ಕೆ ಮತ್ತೇ ಮರಳಿದ್ದಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...