ಶ್ರೀಮಂತನಿಗೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದೊದಗಿದ್ದು ಏಕೆ ಗೊತ್ತಾ?

Date:

ಅವನು ಅಗರ್ಭ ಶ್ರೀಮಂತ…ಆದರೆ, ಆತನಿಗೆ‌ ಒದಗಿ ಬಂದಿದೆ ದೇವಸ್ಥಾನದ ಮುಂದೆ ಕುಳಿತು ಭಿಕ್ಷೆ ಬೇಡುವ ಸ್ಥಿತಿ..! ದೇವಸ್ಥಾನ, ಬಸ್ ನಿಲ್ದಾಣ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಭಿಕ್ಷಾಟನೆ ಮಾಡೋದು ಸಾಮಾನ್ಯ. ಆದರೆ, ಇಲ್ಲಿ ಶ್ರೀಮಂತ ವ್ಯಕ್ತಿ ಭಿಕ್ಷಾಟನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ…! ಇದು ರಷ್ಯಾದ ಶ್ರೀಮಂತ ಎ .ಇವಾಂಗೆಲಿನ್ (24) ಸ್ಥಿತಿ.


ವಿಶ್ವಪರ್ಯಟನೆ ಹೊರಟಿರುವ ಇವರು ಸೆಪ್ಟೆಂಬರ್ 24 ರಂದು ಭಾರತಕ್ಕೆ ಬಂದಿದ್ದಾರೆ. ನಿನ್ನೆ( ಮಂಗಳವಾರ) ಬೆಳಗ್ಗೆ ಚೆನ್ನೈನಿಂದ ಕಾಂಚಿಪುರಂ ಗೆ ಬಂದಿದ್ರು..ಇವತ್ತು ಬೆಳಗ್ಗೆ ಶ್ರೀ‌‌ಕುಮಾರ ಕೊಟ್ಟಂ ದೇವಸ್ಥಾನದ ಬಳಿ ಎಟಿಎಂ ನಿಂದ ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಕಾರ್ಡ್ ಅಲ್ಲಿಯೇ ಸಿಕ್ಕಾಕಿಕೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಅದನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಚೆನ್ನೈ ಗೆ ವಾಪಾಸ್ಸಾಗಲು ಬಿಡಿಗಾಸು ಇಲ್ಲದೇ ಇವಾಂಗೆಲಿನ್ ದೇವಾಲಯದ ಬಳಿ ಭಿಕ್ಷಾಟನೆ ಮಾಡುತ್ತಾರೆ. ಶಿವಕಾಂಚಿ ಪೊಲೀಸರು ಬಂದು ವಿಚಾರಿಸಲಾಗಿ ಇವಾಂಗೆಲಿನ್ ಬಳಿ ಎಲ್ಲಾ ದಾಖಲೆಗಳು ಇದ್ದವು ಆದರೆ, ಹಣ ಮಾತ್ರ ಇರಲಿಲ್ಲ..!
ಹೀಗೆ ಶ್ರೀಮಂತ ವ್ಯಕ್ತಿಗೂ ಭಿಕ್ಷೆ ಬೇಡೋ ಪರಿಸ್ಥಿತಿ ಬಂದಿದ್ದು, ಯಾರ ಟೈಮು ಹೆಂಗಿರುತ್ತೋ ಯಾವನಿಗೆ ಗೊತ್ತು…!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...