ಸಿಕ್ಸರ್ ಗಳ ಸುರಿಮಳೆಯಾಗಿತ್ತು, ಹೈದ್ರಾಬಾದ್ ತಂಡ ಜಯಭೇರಿ ಭಾರಿಸಿತ್ತು. ಯುವರಾಜ್ ಪಂದ್ಯದಲ್ಲಿ ಮಿಂಚಿನ ಆಟ ಆಡಿ ನಂತರ ಏಕಾಏಕಿ ಕ್ರಿಕೆಟ್ ಸಾಮ್ರಾಟನ ಕಾಲಿಗೆರಗಿ ನಮಸ್ಕರಿಸಿದ್ರು. ಇದು ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡುಲ್ಕರ್ ನಡುವಿನ ಭಾಂದವ್ಯಕ್ಕೆ ಹಿಡಿದ ಕನ್ನಡಿಯಂತಿತ್ತು.
ಸಚಿನ್ ತೆಂಡುಲ್ಕರ್, ವಿಶ್ವ ಕ್ರಿಕೆಟ್ ನ ಅನಭಿಷಕ್ತ ದೊರೆ. ಇವರು ಮಾಜಿಯಾದ್ರೂ ಇಂದಿಗೂ ಕೂಡ ಕೋಟಿ ಕೋಟಿ ಅಭಿಮಾನಿಗಳಿಗೆ, ಆಟಗಾರರಿಗೆ ಸ್ಪೂರ್ತಿಯ ಚಿಲುಮೆ. ಅದರಲ್ಲೂ ಯುವರಾಜ್ ಸಿಂಗ್ ಗೆ ಸಚಿನ್ ತೆಂಡುಲ್ಕರ್ ಅಂದ್ರೆ ದೇವರ ಪ್ರತಿರೂಪ.
ಸಚಿನ್ ತೆಂಡುಲ್ಕರ್ ವೈಜಾಗ್ ನಲ್ಲಿ ಗೆದ್ದ ಹೈದ್ರಾಬಾದ್ ತಂಡಕ್ಕೆ ಶುಭಾಶಯ ಕೋರಲು ಬಂದಾಗ ವಿನಮ್ರತೆಯಿಂದ ಯುವಿ, ಮಾಸ್ಟರ್ ಕಾಲಿಗೆರಗಿ ಆಶೀರ್ವಾದ ಪಡೆದ್ರು.
ಹಿಂದೆ ಸಚಿನ್ ರ ಎರಡು ದಶಕಗಳ ವಿಶ್ವಕಪ್ ಕನಸನ್ನ ನನಸು ಮಾಡಿದ್ರು ಯುವಿ. ಯುವರಾಜ್ ಕ್ಯಾನ್ಸರ್ ಮಹಾಮಾರಿಗೆ ತುತ್ತಾದ ಸಂದರ್ಭದಲ್ಲಿ ಯುವಿಗೆ ಸಚಿನ್ ತೆಂಡುಲ್ಕರ್ ಧೈರ್ಯ ತುಂಬಿದ್ರು.
- ಶ್ರೀ
POPULAR STORIES :
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie