ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ರಿಲೀಸ್ ಗೂ ಮುನ್ನವೇ ಬಾಲಿವುಡ್ ನಲ್ಲಿ ಹವಾ ಸೃಷ್ಟಿಸಿದೆ..! ಟೀಸರ್ ಬಿಡುಗಡೆಯಾದ ಒಂದೇ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿತ್ತು. ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿತ್ತು. ಇದೀಗ ಟೀಸರ್ ಹಿಂದಿ ಚಿತ್ರರಂಗವನ್ನು ಸಹ ಆಕರ್ಷಿಸಿದೆ.
ಸುಮಾರು 5.5 ಕೋಟಿ ರೂ ಹಣ ನೀಡಿ ಹಿಂದಿ ಸ್ಯಾಟಲೈಟ್ ರೈಟ್ಸ್ ಅನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ.
ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ ಜಾಗ್ವಾರ್ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿತ್ತು. ಮೊದಲ ಚಿತ್ರದಲ್ಲೇ ನಿಖಿಲ್ ಸ್ಟಾರ್ ಪಟ್ಟ ಅಲಂಕರಿಸಿ ಬಿಟ್ಟಿದ್ದರು.