ಶಿಖರದೆತ್ತರ ನಮ್ಮ ಶಂಕರಣ್ಣ

Date:

ಆ ಹೆಸರಲ್ಲೆ ಒಂದು ಜಾದು ಇತ್ತು, ಅವರ ನಡೆ ನುಡಿಯಲ್ಲಿ ಪಾದರಸದ ಗುಣವಿತ್ತು.. ಸೂಪರ್‍ಕಂಪ್ಯೂಟರ್‍ನ ಹಾಗೆ ಮೈಂಡ್ ಹೊಸ ಅನ್ವೇಷಣೆಯನ್ನ ಬಯಸುತಿತ್ತು.. ಚಿತ್ರರಂಗ ಒಂದು ಕಡೆಯಾದರೆ, ತನ್ನ ಜನರ ಬವಣೆಯನ್ನ ತೀರಿಸೋ ತವಕ ಅದಕ್ಕೂ ಮೀರಿ ನಿಂತಿತ್ತು.. ಇಷ್ಟೆಲ್ಲ ಗುಣ ವಿಶೇಷತೆಗಳನ್ನ ಹೊಂದಿದ್ದ ಕನ್ನಡದ ಏಕೈಕ ಕಲಾವಿದ ಆಟೋರಾಜ್ ಕರಾಟೆಕಿಂಗ್ ಶಂಕರ್‍ನಾಗ್ ಅವ್ರು..

ಆಕ್ಟಿಂಗ್‍ನ ಬಗ್ಗೆ ಯಾರು ಬೆರಳು ಮಾಡಿ ತೋರುವಂತಿಲ್ಲ.. ಡೈರೆಕ್ಷನ್‍ನ ಬಗ್ಗೆ ಮೂಗುಮುರಿದು ನಿಲ್ಲೋರಿರ್ಲಿಲ್ಲ.. ಈತನ ಆಸೆಗೆ ಕನಸುಗಳಿಗೆ ಬೇರೆಯವರು ಮುಟ್ಟಲ್ಲು ಸಾಧ್ಯವಾಗ್ತಿರಲಿಲ್ಲ.. ನಟನೆ ಅಂದ್ರೆ ಜೀವ.. ತನ್ನ ನೆಚ್ಚಿನ ಜನ ಅಂದ್ರೆ ಉಸಿರು ಅಂತ ತಿಳಿದಿದ್ದ ಮಹಾನ್ ವ್ಯಕ್ತಿ ನಮ್ಮ ಶಂಕರ್‍ನಾಗ್ ಅವ್ರು.. ಇಷೆಲ್ಲ ಸಾಧಿಸಿದ್ದು ಚಿಲ್ಲರೆ 35 ವರ್ಷಗಳಲ್ಲಿಯಷ್ಟೆ.. ಇಂತಹ ಕನ್ನಡದ ನಮ್ಮ ಹೆಮ್ಮೆಯ ನಟನ ಹುಟ್ಟುಹಬ್ಬವಿಂದು..
ಇಂದು ನಮ್ಮ ಜೊತೆಗೆ ಇದ್ದಿದ್ರೆ 62ನೇ ವಸಂತವನ್ನ ಅವರೊಂದಿಗೆ ಆಚರಿಸೋ, ಅವರನ್ನ ಕಣ್ಣಾರೆ ನೋಡಿ ಅವರೊಂದಿಗೆ ಬೆಳೆಯೋ ಅವಕಾಶ ಅದೆಷ್ಟು ವ್ಯಕ್ತಿಗಳಿಗೆ ಲಭ್ಯವಾಗ್ತಿತ್ತೋ ಗೊತ್ತಿಲ್ಲ.. ಆದ್ರೇ ಅವರಿಂದು ನಮ್ಮೊಂದಿಗಿಲ್ಲ, ಶಂಕರ್‍ನಾಗ್ ಆಗ ಕಂಡ ಕನಸುಗಳು ಈಗ ಕಾರ್ಯ ರೂಪಕ್ಕೆ ಬರ್ತಿವೆ ಅನ್ನೋದೊಂದು ಸಮಾದಾನವಷ್ಟೆ..

ಇನ್ನೂ ಸಿನಿಮಾದ ವಿಷ್ಯಕ್ಕೆ ಬರೋದಾದ್ರೆ 12 ವರ್ಷದ ಸಿನಿಮಾ ಕೆರಿಯರ್‍ನಲ್ಲಿ 80ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.. 1984ರ ಸುಮಾರಿಗೆ ಒಂದೇ ವರ್ಷದಲ್ಲಿ 14 ಚಿತ್ರಗಳಲ್ಲಿ ಹಾಗೆ 2 ವರ್ಷಗಳಲ್ಲಿ 24 ಸಿನಿಮಾಗಳಿಗೆ ಬಣ್ಣ ಹಚ್ಚಿದ್ಧಾರೆ.. ಅಲ್ಲಿಗೆ ನೀವೆ ಒಮ್ಮೆ ಯೋಚಿಸಿ ನೋಡಿ ಶಂಕರ್‍ನಾಗ್ ಅವ್ರು ಎಷ್ಟು ಪಾಳಿಗಳಲ್ಲಿ ದುಡಿದಿರಬಹುದು ಅಂತ..

ಶಂಕರ್‍ನಾಗ್ ಅವರ ಮೊದಲ ಕಮರ್ಷಿಯಲ್ ಸಿನಿಮಾ `ಸೀತಾ ರಾಮು’.. ಶಂಕರಣ್ಣನನ್ನ ದೇವರಂತೆ ಕಾಣೋಕೆ ಕಾರಣವಾದ ಸಿನಿಮಾ ಆಟೋ ರಾಜ.. ಹೀಗಾಗೆ ಅವರು ಭಾವಚಿತ್ರಗಳು ಇನ್ನೂ ಆಟೋಗಳ ಮೇಲೆ ರಾರಾಜಿಸುತ್ತೆ..
ತಮ್ಮ ಕೊನೆಯ ಗಳಿಗೆಯಲ್ಲೂ ಸಿನಿಮಾ ಕನಸು ಕಂಡವರು ಶಂಕರ್‍ನಾಗ್.. ಸೆಪ್ಟಂಬರ್ 30, 1990ರಲ್ಲಿ ಅನಗೋಡು ಹಳ್ಳಿಯಲ್ಲಿ ಜೋಕುಮಾರಸ್ವಾಮಿ ಚಿತ್ರದ ಚಿತ್ರೀಕರಣಕ್ಕೆ ಧಾರವಾಡಗೆ ಹೋಗುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ವಿಧಿವಶರಾದ್ರು.. ಕೊನೆಯಾದಾಗಿ ತೆರೆ ಕಂಡ ಸಿನಿಮಾ ಸುಂದರಕಾಂಡ..

ನಮ್ಮನ್ನಗಲಿ ಹಲವು ವರ್ಷಗಳೆ ಕಳೆದು ಹೋಗಿವೆ.. ಇವರ ನಂತರ ಹುಟ್ಟಿದ ಯುವಜನತೆ ಕೂಡ ಶಂಕರ್‍ನಾಗ್ ಅವರನ್ನ ಹಾಡಿ ಹೊಗಳುತ್ತಾರೆ.. ಜೊತೆಗೆ ತಮ್ಮ ರೋಲ್ ಮಾಡಲ್ ಮಾಡಿಕೊಂಡು ಬದುಕುತ್ತಿದ್ದಾರೆ.. ಸಂತಂತೆ ಬದುಕುವವರ ನಡುವೆ ಸತ್ತು ಬದುಕಿರೋ ಮಹಾನ್ ಚೇತನಕ್ಕೆ ನಮ್ಮ ಕಡೆಯಿಂದ ಒಂದು ನಮನ.. ಶಂಕ್ರಣ್ಣ ಮತ್ತೆ ಹುಟ್ಟಿ ಬನ್ನಿ..

  • ಅಶೋಕ್ ರಾಜ್

Like us on Facebook  The New India Times

POPULAR  STORIES :

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...