100ನೇ ಪಂದ್ಯದಲ್ಲಿ‌‌ ಧವನ್ ಶತಕ; ದ. ಆಫ್ರಿಕಾ ಗೆಲುವಿಗೆ ಬೇಕು 290 ರನ್

1
130

ಟೀ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶತಕ (109) ಬಾರಿಸುವ ಮೂಲಕ ತಮ್ಮ 100ನೇ ಏಕದಿನ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗಧಿತ 50ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 289ರನ್ ಗಳನ್ನು ಮಾಡಿದೆ.
ತಂಡದ ಮೊತ್ತ 20 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ (5) ಪೆವಿಲಿಯನ್ ಸೇರಿದರು. ಈ ವೇಳೆ‌ ಬ್ಯಾಟಿಂಗ್ ಗೆ ಇಳಿದ ನಾಯಕ ಕೊಹ್ಲಿ ಶಿಖರ್ ಧವನ್ ಜೊತೆ ಸೇರಿ ಸುಂದರ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 158ರನ್ ಗಳ ಜೊತೆಯಾಟವಾಡಿತು.
ಕಳೆದ ಮೂರು‌‌ ಪಂದ್ಯಗಳಿಂದ ಎರಡು ಶತಕ ಗಳಿಸಿರುವ ಕೊಹ್ಲಿ ಈ ಪಂದ್ಯದಲ್ಲೂ ಶತಕಗಳಿಸುವ ಸೂಚನೆ ನೀಡಿದ್ದರು. 75 ರನ್ ಗಳಿಸಿ ಶತಕದೆಡೆಗೆ ಮುನ್ನುಗ್ಗಿದ್ದರು. ಈ ವೇಳೆ‌ಮೋರಿಸ್ ಎಸೆತದಲ್ಲಿ ಮಿಲ್ಲರ್ ಗೆ ಕ್ಯಾಚ್ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.


ಕೊಹ್ಲಿ ಮೂಡಿಸಿದ ಬೇಸರವನ್ನು 100ನೇ ಏಕದಿನ ಪಂದ್ಯ ಆಡುತ್ತಿರುವ ಧವನ್ ಹೋಗಲಾಡಿಸಿದರು. ಇವರು 13ಏಕದಿನ‌ ಶತಕಗಳಿಸಿ ತಂಡಕ್ಕೆ ನೆರವಾದರು.‌
ಅಜಿಂಕ್ಯಾ ರಹಾನೆ (8), ಶ್ರೇಯಸ್ ಅಯ್ಯರ್ ( 18) , ಹಾರ್ದಿಕ್ ಪಾಂಡ್ಯ (9), ಭುವನೇಶ್ವರ ಕುಮಾರ್ (5) ನಿರೀಕ್ಷಿತ ಆಟ ಆಡುವಲ್ಲಿ ವಿಫಲರಾದರು. ಮಾಜಿ ನಾಯಕ ಧೋನಿ ಅಜೇಯ 42 ರನ್ ಗಳ ಕೊಡುಗೆ ನೀಡಿದರು.

1 COMMENT

LEAVE A REPLY

Please enter your comment!
Please enter your name here