No menu items!
5.4 C
Munich
Thursday, April 30, 2026

ಕ್ಲೀನ್ ಸ್ವೀಪ್ ಕನಸು ಭಗ್ನ…ಸ್ಮೃತಿ ಮಂದಾನ ಸರಣಿ ಶ್ರೇಷ್ಠ…!

Must read

ಭಾರತ ಮಹಿಳಾ ತಂಡ ದ.ಆಫ್ರಿಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸೋಲುಕಂಡಿದೆ.‌ ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ದ. ಆಫ್ರಿಕಾವನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಭಗ್ನವಾಗಿದೆ.


ಪೊಚೆಫ್ ಸ್ಟ್ರೂಮ್ ನ ಸೆನ್ವಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದ. ಆಫ್ರಿಕಾ ಭಾರತವನ್ನು 7ವಿಕೆಟ್ ಗಳಿಂದ ಸೋಲಿಸಿತು‌.‌
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗಧಿತ. 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲ್ ಔಟ್ ಆಯ್ತು. ಭಾರತದ ಪರ ದೀಪ್ತಿ ಶರ್ಮಾ (79), ಕನ್ನಡತಿ ವೇದ ಕೃಷ್ಣಮೂರ್ತಿ (56) ಅರ್ಧಶತಕಗಳಿಸಿದರು.


ರನ್ ಬೆನ್ನಟ್ಟಿದ ಸೌತ್ ಆಫ್ರಿಕಾ 49.2 ಓವರ್ ಗಳಲ್ಲಿ‌ ಕೇವಲ‌ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆಬೀರಿತು.
ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಈ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದರೂ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article