ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

0
107

ತುಟಿಗಳ ಮೂಲಕ ಕಿವಿಯನ್ನು ತಲಪುವ ರಹಸ್ಯವೇ ಕಿಸ್ಸಿಂಗ್ ಆಗಿದೆ .ಇದು ಒಬ್ಬ ಫ಼್ರೆನ್ಚ್ ಬರಹಗಾರನ ಕಿಸ್ಸ್ ಬಗ್ಗೆ ನೀಡಿದ ಒಂದು ವ್ಯಾಖ್ಯಾನ.ಇದು 2 ವ್ಯಕ್ತಿಗಳ ನಡುವೆ ನಡೆಯುವ ಅತೀ ವೈಯಕ್ತಿಕ ಕ್ಷಣ.ನಿಜ! ಕಿಸ್ಸಿಂಗ್ ಅಂದಾಕ್ಷಣ ರೊಮ್ಯಂಟಿಕ್ ಜಗತ್ತಿಗೇ ಹೋಗಿಬಿಟ್ರೇನು? ಇದು ಮಮತೆಯ ಮಧುರ ಸಿಂಚನವನ್ನೀಯುವ ಮಗು ಹಾಗೂ ಹೆತ್ತವರೊಡನಿರುವ ಭಾಂದವ್ಯದ ಭಾವನಾತೀತ ಕಿಸ್ಸಿಂಗ್ ಕೂಡ ಆಗಬಹುದಲ್ಲವೆ???ಸರಿ ನಿಮ್ಮಿಷ್ಟ ಯಾವ ಕಿಸ್ಸಿಂಗ್ ಬೇಕಾದ್ರೂ ಅಂದ್ಕೊಳ್ಳಿ ಅದ್ರಿಂದ ಏನೂ ಲಾಸಿಲ್ಲ.ಆದ್ರೆ ಅದ್ರ ಹಿಂದಿರೋ ಲಾಭ ಮಾತ್ರ ನಿಮ್ಗೇ ಗ್ಯಾರಂಟಿ.ಅದು ಹೀಗೆ.

ಕಿಸ್ಸಿಂಗ್ ನಿಂದ ರಕ್ತನಾಳಗಳು ವಿಸ್ತಾರಗೊಂಡು ಬ್ಲಡ್ ಪ್ರೆಶ್ಶರ್ ಅಂದರೆ ರಕ್ತದೊತ್ತಡ ಕಡಿಮೆಯಾಗುತ್ತದೆ,ತಲೆನೋವು,ಹೆಂಗಸರ ಮುಟ್ಟಿಗೆ ಸಂಬಂಧಿತ ತೊಂದರೆ ಕಡಿಮೆಯಾಗುತ್ತದೆ ಹಾಗೂ ಸಂಬಂಧದಲ್ಲಿ ಧೃಢತೆ ಹೆಚ್ಚಿ,ಆತ್ಮ ವಿಶ್ವಾಸ ಜಾಗೃತವಾಗುತ್ತದೆ.ನಿಮ್ಮ ಶರೀರದ ರೋಗ ನಿರೊಧಕ ಶಕ್ತಿ ಹೆಚ್ಚಿಚರ್ಮ ಹಾಗೂ ಮೂಗಿಗೆ ಸಂಬಂಧಿಸಿದ ಅಲರ್ಜಿಯು ಕಡಿಮೆಯಾಗುತ್ತದೆ.

ತಜ್ನರ ಪ್ರಕಾರ ಗಾಢ ವಾದ ಕಿಸ್ಸ್ ಮನುಷ್ಯನ ದೇಹದ 8 ರಿಂದ 16 ಕ್ಯಾಲರಿ ಕೊಬ್ಬನ್ನು ಕರಗಿಸುವಲ್ಲಿ ಸಹಾಯಮಾಡುತ್ತದೆ ಅಂತಾರೆ.ಇದು ನಮ್ಮ ರಕ್ತದಲ್ಲಿ ಎಪಿನೆಫ್ರಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುವುದರಿಂದ ರಕ್ತ ಶುದ್ದೀಕರಣ ವೇಗವಾಗಿ ನಡೆದು ಎಲ್.ಡಿ.ಎಲ್ ಕೊಲೆಸ್ಟ್ರೋಲ್ ಮಿತಿಯಲ್ಲಿ ಇಳಿತವುಂಟಾಗುತ್ತದೆ.

ಮುಖಕ್ಕೆ ಸಂಬಂಧಿಸಿದ ಅನೇಕ ನರಗಳನ್ನು ಪ್ರಚೋದಿಸಿ ಮುಖದ ಸೌಂದರ್ಯಕ್ಕೆ ಕಾರಣವಾಗುತ್ತದೆ.ಬಾಯಲ್ಲಿ ಉತ್ಪಾದನೆಯಾಗುವ ಜೊಲ್ಲುರಸಲ್ಲಿರುವ ದಂತ ಕ್ಷಯಕ್ಕೆ ಕಾರಣವಾಗುವ ಅತೀ ಸೂಕ್ಷ್ಮ ಜೀವಾಣು ಹೊರಟುಹೋಗುತ್ತದೆ.ಆದರೆ ಇದರಿಂದ ಇದು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಗಳು ಹೆಚ್ಚು.ತಾಯಿ ಮಗುವನ್ನು ಸೂಕ್ಷ್ಮವಾಗಿ ಪರೀಕ್ಷೆಗೊಳಪಡಿಸಿದಾಗ ಈ ವಿಷಯ ಧೃಢಪಟ್ಟಿತು.

ಕಿಸ್ಸಿಂಗ್ ನಿಂದ ನಿಮ್ಮ ಮಿದುಳು ಹಾರ್ಮೋನುಗಳಾದ ಸೆರೋಟೊನಿನ್,ಡೊಪಮೈನ್ ಹಾಗೂ ಓಕ್ಸಿಟೋಸಿನ್ ಹಾರ್ಮೋನ್ ನ ಬಿಡುಗಡೆಗೆ ಕಾರಣವಾಗುತ್ತದೆ.ಇದರಿಂದ ಮನುಷ್ಯನ ಭಾವನಾತ್ಮಕ ಸಂಬಂಧ ಹೆಚ್ಚಿ ಸಂತೋಷ ಉಲ್ಲಾಸಕ್ಕೆ ಕಾರಣವಾಗುತ್ತದೆ ಅನ್ನುತ್ತಾರೆ ವಿಜ್ನಾನಿಗಳು.

ಯಾವತ್ತೂ ಸರಿಯಾದ ಕಾರಣ ತಿಳ್ಕೊಂಡು ಸರಿಯಾದ ರೀತಿಯಲ್ಲಿ ಕಿಸ್ಸ್ ಮಾಡಿ.ಇಲ್ಲಾಂದ್ರೆ ಕಿಸ್ಸ್ ಮಾಡಲು ಹೋಗಿ ಮಿಸ್ಸ್ ಆಗ್ಬಿಟ್ಟೀರಿ ಜೋಕೆ!!!!

  • ಸ್ವರ್ಣಲತ ಭಟ್

POPULAR  STORIES :

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

 

LEAVE A REPLY

Please enter your comment!
Please enter your name here