ಹೇಗಿದೆ ಸಿನಿಮಾ..? ಇದು ಬರಿಯ ಹಾರರ್ ಅಲ್ಲ,ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಹಾರರ್..!

Date:

ಶಿವಲಿಂಗ…ಕನ್ನಡದ ಹಾರರ್ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ. ಆದ್ರೆ ಇದು ಬರಿಯ ಹಾರರ್ ಅಲ್ಲ,ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಹಾರರ್..! ಒಂದು ಕೊಲೆಯ ಹಿಂದಿನ ಕಥೆ. ಕಥೆಯೊಳಗೆ ಇನ್ವೆಸ್ಟಿಗೇಶನ್, ದೆವ್ವಭೂತ, ಲವ್ವು ನೋವು, ಸೆಂಟಿಮೆಂಟು ಫ್ಯಾಮಿಲಿ ನಂಟು ಎಲ್ಲಾ ಇದೆ. ಅಲ್ಲಲ್ಲಿ ಬೇಕಾಗಿರ್ಲಿಲ್ಲ ಅನಿಸೋ ಹಾಡುಗಳಿವೆ, ಶಿವಣ್ಣನ ಅಭಿಮಾನಿಗಳಿಗೆ ಸಖತ್ ಖುಷಿ ಕೊಡೋ ಫೈಟ್ ಗಳಿವೆ..! ಹಾರರ್ ಸಿನಿಮಾ ಇಷ್ಟಪಡೋರು ಸಾಕಷ್ಟು ಸಲ ಸೀಟಿನ ತುದಿಗೆ ಬಂದು ಕೂರುವ ಸಾಧ್ಯತೆ ಇದೆ. ಕೆಲವು ಡೈಲಾಗ್ ಗಳು ಚೆನ್ನಾಗಿವೆ, ಕೆಲವು ಅತಿಯಾಗಿವೆ..! ಅಲ್ಲಲ್ಲಿ ದೆವ್ವಭೂತದ ಹಾವಳಿ ಸ್ವಲ್ಪ ಜಾಸ್ತಿ ಅನಿಸಿದರೂ ನಾಯಕಿ ವೇದಿಕಾ ಮಾತ್ರ ಅಭಿನಯದಲ್ಲಿ ಚತುರೆ ಅಂತ ನಿರೂಪಿಸೋಕೆ ಅದೇ ದೆವ್ವಭೂತ ಕಾರಣವಾಗುತ್ತೆ..! ಊರ್ವಶಿಯವರು ಶಿವಣ್ಣನ ಮಮ್ಮಿ, ವಿನಯ್ ಪ್ರಸಾದ್ ನಾಯಕಿಯ ಮಮ್ಮಿ …ಇದರ ಮಧ್ಯದಲ್ಲಿ ಸಾಕಷ್ಟು ಪಾತ್ರಗಳು ಡಮ್ಮಿ..! ಆದ್ರೂ ಕುತೂಹಲ ಮೂಡಿಸೋ ವಿಚಾರದಲ್ಲಿ ಎಲ್ಲೂ ಆಗಲ್ಲ ಕಮ್ಮಿ..! ಸಿನಿಮಾದಲ್ಲಿ ಸಾಧುಕೋಕಿಲ ಇರೋದ್ರಿಂದ ನಗ್ತಾ ನಗ್ತಾ ಹೆದರಿ ಮಜಾ ಮಿಸ್ ಮಾಡಿಕೊಳ್ಳಬೇಡಿ..! ಸಾಧು ಮತ್ತೆ ಸೂಪರ್ ಸಾಧು…! ನಿರ್ದೇಶಕ ಪಿ.ವಾಸು ಆಗಿರೋದ್ರಿಂದ ಅಲ್ಲಲ್ಲಿ ಆಪ್ತಮಿತ್ರ, ಆಪ್ತರಕ್ಷಕ ಹಂಗೇ ರಪ್ ಅಂತ ಪಾಸ್ ಆಗುತ್ತೆ..! ಆರಂಭದಲ್ಲಿ ಚಿತ್ರ ಸ್ವಲ್ಪ ಕುಂಟುತ್ತೆ, ಆದ್ರೆ ಇಂಟರ್ ವೆಲ್ ಟೈಮಿಗೆ ಬುಲೆಟ್ ರೈಲಿಗಿಂತ ಸ್ಪೀಡಾಗುತ್ತೆ..! ಇದೆಲ್ಲದರ ನಡುವೆ ಅಲ್ಲಲ್ಲಿ ಬಿಳಿ ಪಾರಿವಾಳ ಹಾರುತ್ತೆ..! ಸೆಕೆಂಡ್ ಹಾಫ್ ಸೆಕೆಂಡ್ ಸೆಕೆಂಡಿಗೂ ಟ್ವಿಸ್ಟ್ ಕೊಡುತ್ತೆ, ಆದ್ರೆ ಕ್ಲೈಮ್ಯಾಕ್ಸ್ ತನಕ ಓಡುಸ್ಕೊಂಡು ಹೋಗೋ ಶಿವಲಿಂಗ ಕ್ಲೈಮ್ಯಾಕ್ಸಲ್ಲಿ ಒಸಿ ಕೈಕೊಡುತ್ತೆ..! ಕೊಲೆ ಮಾಡಿದ್ದು ಅವ್ರಾ ಇವ್ರಾ..? ಅವ್ನಾ ಇವ್ನಾ ಅಂತ ಹುಳಬಿಟ್ಕೊಳೋ ಟೈಮಿಗೆ, ಮೀಟ್ ಮಿಸ್ಟರ್ ಮರ್ಡರರ್ ಅನ್ನೋ ಕ್ಲೈಮ್ಯಾಕ್ಸು..! ಅಲ್ಲಿಗೆ ದೆವ್ವದ ಇನಿಂಗ್ಸೂ ಕ್ಲೋಸು..! ಕೊಲೆ ಆಗಿದ್ಯಾರು..? ಕೊಲೆ ಮಾಡಿದ್ಯಾರು..? ಕೊಲೆ ಮಾಡ್ಸಿದ್ಯಾರು..? ದೆವ್ವ ಆಗಿದ್ಯಾರು..? ದೆವ್ವ ಹಿಡುಸ್ಕೊಂಡೋರ್ ಯಾರು..? ಕೊಲೆ ಕೇಸ್ ಹೆಂಗೆ ಶಿವಣ್ಣ ಕಂಡುಹಿಡೀತಾರೆ ಅನ್ನೋದು ಗೊತ್ತಾಗ್ಬೇಕು ಅಂದ್ರೆ ‘ಶಿವಲಿಂಗ’ ನೋಡಿ…! #ShivaLinga

12746603_10205194422610403_958842772_n

  • ಕೀರ್ತಿ ಶಂಕರಘಟ್ಟ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...