ಕನ್ನಡ ಸಿನಿಮಾರಂಗದಲ್ಲಿ ನೆಲೆ ನಿಲ್ಲಲು ಶ್ರಮಿಸುತ್ತಿರುವ ನಟ ರಘು ಭಟ್. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಯುವನಟನ ಮುಂದೆ ಹತ್ತು ಹಲವು ಚಿತ್ರಗಳಿವೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೂರ್ನಾಲ್ಕು ಸಿನಿಮಾಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಈ ಸಿನಿಮಾಗಳು ಗೆಲ್ಲುತ್ತವೆ, ಈ ಗೆಲುವಿನಿಂದಾಗಿ ನನ್ನ ಹತ್ತಾರು ವರ್ಷದ ಪರಿಶ್ರಮ ಸಾರ್ಥಕವಾಗುತ್ತದೆ. ಇನ್ನೂ ಉತ್ತಮ ಸಿನಿಮಾಗಳನ್ನು ನೀಡಲು ಮುಂದಿನ ಚಿತ್ರಗಳ ಗೆಲುವು ಸ್ಪೂರ್ತಿ ಎಂದು ಮನಬಿಚ್ಚಿ ಮಾತನಾಡುತ್ತಾರೆ ರಘು ಭಟ್. ಇವರ ಈ ಆತ್ಮವಿಶ್ವಾಸದ ನುಡಿಗಳ ಹಿಂದೆ ಶ್ರಮವಿದೆ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಭರವಸೆಯಿದೆ.
ರಘುಭಟ್ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟನಾಗಿ ಬೆಳೆಯುತ್ತಿದ್ದು, ಇವರನ್ನು ವಿಶ್ವ ಕನ್ನಡ ಸಂಸ್ಕೃತಿ ವೇದಿಕೆಯವರು ಗುರುತಿಸಿದ್ದಾರೆ. ಸಿಂಗಾಪುರದಲ್ಲಿ ನಡೆದ ‘ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ’ದಲ್ಲಿ ರಘುಭಟ್ ಗೆ ಉದಯೋನ್ಮುಖ ನಟ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.
ರಘು ಭಟ್ ಮೂಲತಃ ಮಂಜೇಶ್ವರದ ಗಡಿನಾಡು ಕನ್ನಡಿಗರು. ಅನೇಕ ಚಲನಚಿತ್ರ ಹಾಗು ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.
ರಾಮ ಕೃಷ್ಣ ಗೋವಿಂದ, ಕೃಷ್ಣಲೀಲೆ, ಕರ್ವ, ನನ್ನ ನಿನ್ನ ಪ್ರೇಮ ಕಥೆ, ಪಾರು ವೈಫ್ ಆಫ್ ದೇವದಾಸ್ ಮತ್ತಿತರ ನಾನಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಧಾರವಾಹಿಗಳಾದ ಸುವರ್ಣ ವಾಹಿನಿಯ ‘ಶ್ರೀಮತಿ ಭಾಗ್ಯ ಲಕ್ಷ್ಮಿ’, ಉದಯವಾಹಿನಿಯ ‘ಚಂದನದ ಗೊಂಬೆ’ಗೂ ಬಣ್ಣಹಚ್ಚಿದ್ದಾರೆ. ಇವರು ಮುಖ್ಯಪಾತ್ರದಲ್ಲಿ ನಟಿಸಿರುವ ಅನ್ವೇಷಿ, ಡ್ರೀಂಗರ್ಲ್, ದಾದಾ ಈಸ್ ಬ್ಯಾಕ್, ರಘುವೀರ, ಚಿತ್ರಾಲಿ, ಲವ್ ಯು ಟೂ ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.
ಈಗಾಗಲೇ ನಟಿಸಿರುವ ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರ ನಿಭಾಯಿಸಿರುವ ರಘು ಭಟ್,ಪಾತ್ರ ಯಾವುದೇ ಇರಲಿ ನಿಭಾಯಿಸಬಲ್ಲೆ, ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಇವರು ಈ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಉದಯೋನ್ಮುಖ ನಟ ಪ್ರಶಸ್ತಿ ಪುರಸ್ಕೃತರಾಗಿರುವುದು ಸ್ವಾಗತಾರ್ಹ, ಅಭಿನಂದನಾರ್ಹ.ಈ ಸಿಂಗಾರ ಸಮ್ಮೇಳನ ಐದು ವರ್ಷಕ್ಕೊಮ್ಮೆ ನೆಡೆಯುವ ಸಮ್ಮೇಳನವಾಗಿದ್ದು, ಈ ಬಾರಿ ಜರುಗಿದ್ದು 20ನೇ ಸಮ್ಮೇಳನ. ಸಮ್ಮೇಳನಕ್ಕೆ ರಘು ಭಟ್ ಅಲ್ಲದೆ, ವಿಕ್ರಮ್ ಸೂರಿ, ನಮಿತಾ ರಾವ್, ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್, ಎಸ್ ಎಲ್ ಬೈರಪ್ಪ, ಪ್ರೋ .ಕೃಷ್ಣೇಗೌಡ್ರು , ಪಬ್ಲಿಕ್ ಟಿವಿ.ರಂಗನಾಥ್ ಸರ್ ಮತ್ತಿತರ ಗಣ್ಯರು ರಾಜ್ಯವನ್ನು ಪ್ರತಿನಿಧಿಸಿದ್ದರು. ವಿಕ್ರಮ್ ಸೂರಿ, ನಮಿತಾ ರಾವ್, ನಿಯೋ ಕಥಕ್, ಗೀತಾ ಸಿನಿಮಾದ ಜೊತೆಯಲಿ ಜೊತೆ ಜೊತೆಯಲಿ ಹಾಡಿಗೆ ಡ್ಯುಯಟ್ ಪ್ರದರ್ಶನ ನೀಡಿದರು. ರಾಜೇಶ್ ಕೃಷ್ಣನ್ ಮತ್ತು ಶಮಿತಾ ಮಲ್ನಾಡ್ ತಮ್ಮ ಕಂಠಸಿರಿ ಮೂಲಕ ಸಮ್ಮೇಳನದ ಸಂಭ್ರಮ ಹೆಚ್ಚಿಸಿದರು.
Like us on Facebook The New India Times
POPULAR STORIES :
ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!