ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಎಸಿಯಾಟಿಕ್ ಸಿಂಹಗಳನ್ನು ನೋಡಲು ಗಿರ್ ಅಭಯಾರಣ್ಯಕ್ಕೆ ಹೋದ ಜಡೇಜಾ ಅಲ್ಲಿ ಪತ್ನಿಯೊಂದಿಗೆ ಸಿಂಹಗಳ ಬಳಿ ನಿಂತು ಫೋಟೋ ತೆಗೆಯಿಸಿಕೊಳ್ಳೋ ಮೂಲಕ ಅರಣ್ಯ ಇಲಾಖೆಯ ಕಾನೂನನ್ನು ಉಲ್ಲಂಘಿಸಿದ್ದಾರೆ ಅನ್ನೋ ಆರೋಪಕ್ಕೆ ಜಡೇಜಾ ಮತ್ತವರ ಪತ್ನಿ ಗುರಿಯಾಗಿದ್ದಾರೆ.
ಸಫಾರಿ ಹೊರಟಾಗ ವ್ಯಾನ್ ನಿಂದ ಕೆಳಗಿಳಿಯುವಂತಿಲ್ಲ. ಆದರೆ ತನ್ನ ಸೆಲೆಬ್ರೆಟಿ ಸ್ಟೇಟಸ್ ನ ಪ್ರಭಾವ ಬಳಸಿ ವ್ಯಾನ್ ನಿಂದ ಕೆಳಗಿಳಿದು ಪತ್ನಿಯೊಂದಿಗೆ ಪೋಟೋ ಗೆ ಫೋಸ್ ನೀಡಿದ್ದಾರೆ. ಸಿಂಹಗಳಿಂದ ಕೇವಲ 30 ಮೀಟರ್ ಅಂತರದಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ಳೋ ಮೂಲಕ ಜಡೇಜಾ ಅರಣ್ಯ ಇಲಾಖೆ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ.
ಅರಣ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಇದು ಅಪರಾಧ. ಇನ್ನು ಈ ವಿವಾದದ ಕುರಿತಂತೆ ಮಾತನಾಡಿರುವ ಗುಜರಾತ್ ಅರಣ್ಯ ಇಲಾಖೆ ಮುಖ್ಯಸ್ಥ ಡಾ. ಅನಿರುದ್ಧ್ ಪ್ರತಾಪ್ ಸಿಂಗ್, ರವೀಂದ್ರ್ ಜಡೇಜಾ ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿದ್ದು, ಈ ಕುರಿತು ವಿಚಾರಣೆ ನಡೆಯಲಿದೆ ಎಂದಷ್ಟೇ ತಿಳಿಸಿದ್ದಾರೆ.
ಮಾನ್ಸೂನ್ ಸೀಸನ್ ಪ್ರಾರಂಭವಾದ ಹಿನ್ನೆಲೆಯಲ್ಲಿ ಗಿರ್ ಅರಣ್ಯ ಪ್ರವೇಶವನ್ನು ಜೂನ್ 15 ರಿಂದ ಅಕ್ಟೋಬರ್ 16 ರವರೆಗೆ ನಿಷೇಧಿಸಲಾಗುತ್ತದೆ. ಅದರಂತೆ ಜಡೇಜಾ ಮತ್ತು ಅವರ ಕುಟುಂಬಸ್ಥರು ಕೊನೆಯ ದಿನ ಜೂನ್ 15 ರಂದು ಗಿರ್ ಅರಣ್ಯಕ್ಕೆ ಭೇಟಿ ನೀಡಿದ್ದ ಸಂಧರ್ಭ ಈ ವಿವಾದ ಸೃಷ್ಟಿಸಿಕೊಂಡಿದ್ದಾರೆ.
- ಶ್ರೀ
POPULAR STORIES :
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ