ಸಾವು ಹೇಗೆ ಎದುರಾಗುತ್ತೋ ಗೊತ್ತಿಲ್ಲ..! ಎಂದಿನಂತೆ ಶಾಲೆಗೆ ಹೋದ ವಿದ್ಯಾರ್ಥಿ ಕ್ಲಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಸಾವನ್ನಪ್ಪಿದ್ದಾನೆ..! 7ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಮೃತ.
ದೆಹಲಿಯ ಕರವಾಲ್ ನಗರದ ಶಾಲೆ. ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳು ಆಟ ಆಡೋಕೆ ಬಾ ಅಂತ ಪ್ರಿನ್ಸ್‍ನನ್ನು ಕರೆದಿದ್ದಾರೆ. ಆಗ ಅವನು ಬರಲ್ಲ ಎಂದಾಗ ಇತರೆ ವಿದ್ಯಾರ್ಥಿಗಳು ಹಾಗೂ ಈತನ ನಡುವೆ ಜಗಳವಾಗಿದೆ. ಈ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಿನ್ಸ್ ನನ್ನು ತಳ್ಳಿದ್ದಾನೆ. ಆಗ ತಲೆ ಗೋಡೆಗೆ ಜೋರಾಗಿ ತಗುಲಿದ ಪರಿಣಾಮ ಪ್ರಿನ್ಸ್ ಸಾವನ್ನಪ್ಪಿದ್ದಾನೆ.
ಗೋಡೆಗೆ ತಗಲಿ ಪ್ರಿನ್ಸ್ ಕೆಳಕ್ಕೆ ಬಿದ್ದ ಕೂಡಲೇ ಶಾಲಾ ಆಡಳಿತ ಮಂಡಳಿ ಪ್ರಿನ್ಸ್‍ನನ್ನು ಆಸ್ಪತ್ರೆಗೆ ಸೇರಿಸಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗಲ್ಲಿಲ್ಲ. ಮೃತ ವಿದ್ಯಾರ್ಥಿಯ ದೇಹದ ಮೇಲೆ ಇತರೆ ಯಾವ ಗುರುತುಗಳು ಕಂಡುಬಂದಿಲ್ಲ.