ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.
ಆಂಖೇ – 2 ಸಿನಿಮಾದಲ್ಲಿ ಅಮಿತಾಬ್ ಜೊತೆ ಕಿಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣ್ ಸಿನಿಮಾದಲ್ಲಿ ಅಮಿತಾಬ್ ಜೊತೆಗೆ ಕಿಚ್ಚ ಅಭಿನಯಿಸಿದ್ದರು. ಇದೀಗ ಮತ್ತೊಮ್ಮೆ ಅಮಿತಾಬ್ ಜೊತೆ ನಟಿಸುತ್ತಿರೋದು ಕಿಚ್ಚನ ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಅನೀಸ್ ಬಾಜ್ಮಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 2002ರಲ್ಲಿ ತೆರೆಕಂಡ ಅಂಖೇ ಸಿನಿಮಾ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತ್ತು.