ಮಂಡ್ಯ ಸಂಸದೆ ಸುಮಲತಾ ಮೇಲೆ ನೆಟ್ಟಿಗರು ಗರಂ

Date:

ಮಂಡ್ಯ : ಮಳವಳ್ಳಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ‌ ನಡೆದು ಸಾಕಷ್ಟು ಚರ್ವೆಗೆ ಗ್ರಾಸವಾಗಿದೆ . ಇಷ್ಟೇಲ್ಲಾ ಹೇಯ ಕೃತ್ಯ ನಡೆದ್ರೂ ಮಂಡ್ಯಕ್ಕೆ ಸಂಸದೆ ಸುಮಲತಾ ಭೇಟಿ ನೀಡಿಲ್ಲ . ಇದರಿಂದ ಮಂಡ್ಯ ಸಂಸದೆ ಸುಮಲತಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ದ ಕಾಮೆಂಟ್ ಗಳ ಸುರಿಮಳೆಯನ್ನೆ ನೋಡಬಹುದು .

‘ಕಾಣೆಯಾದ ಸುಮಕ್ಕ’ ‘ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳೆ’..!?
ಚುನಾವಣೆ ಸಂದರ್ಭದಲ್ಲಿ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ನೀವು, ಈ ಮಣ್ಣಿನ ಹೆಣ್ಣು ಮಕ್ಕಳಿಗೆ ಕೊಟ್ಟ ಕೊಡುಗೆ ಇದೇನಾ..? ಫೇಸ್ಬುಕ್ ಪೋಸ್ಟ್ಗೆ ಸೀಮಿತವಾದ ಸಂಸದೆ ಸುಮಲತಾ ಅಂಬರೀಶ್ . ಹೀಗೆ ಕಮೆಂಟ್ ಮಾಡುತ್ತಿದ್ದಾರೆ . ಇನ್ನೂ ಈ ಘಟನೆ ನಡೆದ ತಕ್ಷಣ ಘಟನೆಯನ್ನ ಖಂಡಿಸಿ ಪೋಸ್ಟ್ ಹಾಕಿ ಸುಮಲತಾ ಅವರು ಮಂಡ್ಯದಿಂದ ದೂರ ಉಳಿದಿದ್ದಾರೆ .

ಇನ್ನೂ ಅವರ ಪೋಸ್ಟ್ ನಲ್ಲಿ ಸುಮಲತಾ ಅವರು ” ಈ ಅಮಾನುಷ ಕೃತ್ಯ ಎಸಗಿದ ಅಪರಾಧಿಗೆ ಯಾವ ಶಿಕ್ಷೆ ಕೊಟ್ರೂ ಕಡಿಮೆಯೇ . ಪೊಲೀಸ್ ಹಾಗೂ ನ್ಯಾಯಾಂಗ ತೆಗೆದುಕೊಳ್ಳುವ ಕ್ರಮಕ್ಕೆ ನಾನು ಬದ್ಧ . ಈ ವಿಕೃತಿ ನನ್ನ ಮನಸ್ಸನ್ನು ಛಿದ್ರಗೊಳಿಸಿದೆ ” ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ . ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ .

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...