ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

0
43

ಮೈಸೂರು : ಮೈಸೂರು ತಾಲೂಕಿನ ಮಾರ್ಬಳ್ಳಿಯಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದೆ . ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ . ಹಲವು ದಿನಗಳಿಂದ ಚಿರತೆ ಈ ಭಾಗದಲ್ಲಿ ಓಡಾಡುತ್ತಿತ್ತು . ಹೀಗಾಗಿ ಮಾರ್ಬಳ್ಳಿಯಲ್ಲಿ ಜನ ಚಿರತೆ ಕಂಡು ಭಯಭೀತರಾಗಿದ್ದಾರೆ . ಚಿರತೆಯ ಕಾಟದಿಂದ ಜಮೀನುಗಳಿಗೆ ಹೋಗಲೂ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ .

ಇನ್ನೂ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು . ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಅರಣ್ಯ ಇಲಾಖೆ ಸಿಬ್ಬ ಬೋನಿರಿಸಿದ್ದರು . ಆಹಾರ ಹುಡುಕಿಕೊಂಡು ಬಂದು ಚಿರತೆ ಬೋನಿಗೆ ಬಿದ್ದಿದೆ . ಈ ಚಿರತೆ ಸುಮಾರು 3 ರಿಂದ 4 ವರ್ಷದ ಗಂಡು ಚಿರತೆ ಎನ್ನಲಾಗಿದೆ . ಚಿರತೆ ಸೆರೆಯಾದ ನಂತರ ಚಿರತೆಯನ್ನ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ .

LEAVE A REPLY

Please enter your comment!
Please enter your name here