ನಟಿ ಸನ್ನಿ ಲಿಯೋನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಎಂಬುವವರಿಗೆ ಸನ್ನಿಲಿಯೋನ್ ನೆರವಾಗಿದ್ದಾರೆ.
ಪ್ರಭಾಕರ್ ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಇವರಿಗ ನೆರವಿಗೆ ಸನ್ನಿ ಬಂದಿದ್ದಾರೆ. ಈ ಬಗ್ಗೆ ಸನ್ನಿ ಲಿಯೋನ್ ಇನ್ ಸ್ಟಾಗ್ರಾಮ್ ಮತ್ತು ಟ್ವೀಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
“ಕಿಡ್ನಿ ವೈಫಲ್ಯದ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮತ್ತು ಸ್ನೇಹಿತ ಪ್ರಭಾಕರರಿಗೆ ಸಹಾಯ ಮಾಡಲು ನನ್ನ ಪತಿ ಮತ್ತು ನಾನು ಪ್ರಯತ್ನಿಸುತ್ತಿದ್ದೇವೆ. ಅವರು ನಿಸ್ವಾರ್ಥ ವ್ಯಕ್ತಿಯಾಗಿದ್ದು, ಅನೇಕ ವರ್ಷಗಳ ಕಾಲ ನನ್ನ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಬ್ಬ ನಿಷ್ಠವಂತ ಸ್ನೇಹಿತರಾಗಿದ್ದಾರೆ.
ನಾವು ಒಂದು ವರ್ಷದವರೆಗೆ ಅವರ ಡಯಾಲಿಸಿಸ್ ಮತ್ತು ಔಷಧಿಗಳಿಗಾಗಿ ಹಣವನ್ನು ಪಾವತಿಸುತ್ತಿದ್ದೇವೆ. ಆದರೆ ಇದೀಗ ಅವರ ಜೀವ ಉಳಿಯಬೇಕಾದರೆ ಇವರು ಏಕೈಕ ಮಾರ್ಗವೆಂದರೆ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕು. ಆದ್ದರಿಂದ ನಾವು 20 ಲಕ್ಷ ರೂ.ಯನ್ನು ಕಿಡ್ನಿ ಕಸಿ ಮಾಡಿಸಿಕೊಳ್ಳಲು ನೀಡಿದ್ದೇವೆ.
ಪ್ರಭಾಕರ್ ಅವರು ಆದಷ್ಟು ಬೇಗ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಅವರ ಹೆಂಡತಿ ಮತ್ತು ಅವರ ಮಕ್ಕಳಿಗಾಗಿ ಮನೆಗೆ ಹಿಂತಿರುಗಬೇಕು” ಎಂದು ಇನ್ಸ್ ಸ್ಟಾಗ್ರಾಂ ನಲ್ಲಿ ಬರೆದು ಸನ್ನಿ ಲಿಯೋನ್ ಫೋಟೋ ಅಪ್ಲೋಡ್ ಮಾಡಿದ್ದಾರೆ.
My husband and I are trying to help out a crewmember and friend, Prabhakar who is fighting Kidney failure. He is a selfless person and a loyal friend who has been working in my team for… https://t.co/5X4DwVD6tU
— Sunny Leone (@SunnyLeone) August 14, 2018