ಸೂಪರ್ ಕಂಪ್ಯೂಟರ್ ತಯಾರಿಯಲ್ಲಿ ಭಾರತ- ಮುಂಗಾರಿಗೆ ಇದು ಸವಾಲೇ???

Date:

ಭಾರತವು ಮುಂಗಾರಿನ ಮುನ್ಸೂಚನೆಯನ್ನು ನಿಖರವಾಗಿ ಊಹಿಸಲು ಸಾಮರ್ಥ್ಯವಿರುವ ಸೂಪರ್ ಕಂಪ್ಯೂಟರ್ ನ ತಯಾರಿಯಲ್ಲಿದೆ.ಇದು ಬಹುಶಃ ಮುಂದಿನ ವರ್ಷದೊಳಗೆ ತಯಾರಾಗುತ್ತದೆ.ಕೆಲವೊಂದು ವರದಿಗಳ ಪ್ರಕಾರ ಹವಾಮಾನ ಇಲಾಖೆಯು 60ಮಿಲಿಯನ್ ಡಾಲರ್ ಗಳ ವೆಚ್ಚದಲ್ಲಿ ಇದನ್ನು ತಯಾರಿಸುತ್ತಿದ್ದು,ಇದರಲ್ಲಿ ಕಾಲಕಾಲಕ್ಕೆ ತಕ್ಕಂತೆ ಹುಯ್ಯುವ ಮಳೆಯ ಬಗ್ಗೆ ನಿಖರವಾಗಿ ತಿಳಿಯಲು ೩ಡಿ ತಂತ್ರಜ್ನಾನವನ್ನು ಬಳಸಲಾಗಿದೆ.ಭಾರತದ ಭೂವಿಜ್ನಾನದ ಕಾರ್ಯದರ್ಶಿಯಾಗಿರುವ ಎಮ್.ರಾಜೀವನ್,ಪ್ರಕಾರ ಈ ಸೂಪರ್ ಕಂಪ್ಯೂಟರ್ ,ಇಲಾಖೆಯಲ್ಲಿ ಈಗಿರುವ ಐ.ಬಿ.ಎಮ್ ನಿಂದ ತಯಾರಾದ ಕಂಪ್ಯೂಟರ್ ವ್ಯವಸ್ಥೆಗಿಂತ 10 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.ಆದರೆ ಯಾವ ಕಂಪನಿಯು ಇದರ ತಯಾರಿಯಲ್ಲಿದೆ ಎಂದು ಮಾತ್ರ ಅವರು ತಿಳಿಸುತ್ತಿಲ್ಲ.
ಭಾರತದ ಕೃಷಿ ಬೆಳೆಯು ಮುಖ್ಯವಾಗಿ ಮುಂಗಾರನ್ನು ಅವಲಂಬಿಸಿರುತ್ತದೆ.ಇದು ಸಾಮಾನ್ಯವಾಗಿ ಜೂನ್ -ಸೆಪ್ಟೆಂಬರ್ ತನಕವಾಗಿದ್ದು ಈ ಮುಂಗಾರು ದೇಶದ ಒಟ್ಟೂ ವಾರ್ಷಿಕ ಮಳೆಯ 2/3ರಷ್ಟು ಭಾಗವನ್ನು ಹೊಂದಿದೆ. ಕೃಷಿ ಅಭಿವೃದ್ಧಿಗೆ ಇದೊಂದು ಉತ್ತಮ ಸಾಧನವಾಗಿದ್ದು ಬೆಳೆಯನ್ನು ಇನ್ನೂ ಶೇಖಡಾ 15 ರಷ್ಟು ಅಭಿವೃದ್ದಿ ಪಡಿಸಬಹುದಾಗಿದೆ.ವಿಶ್ವ ಬ್ಯಾಂಕ್ ವರದಿಯ ಪ್ರಕಾರ ,2015 ರಲ್ಲಿ ಕೃಷಿ ಉತ್ಪನ್ನವು ಒಟ್ಟು ದೇಶೀಯ ಉತ್ಪನ್ನಗಳ(G.D.P)ಶೇಖಡಾ 18 ರಷ್ಟು ಅಭಿವೃದ್ಧಿ ಯಾಗಿತ್ತು.
ನಮ್ಮ ದೇಶದ ಮೊದಲ ಹವಾಮಾನ ವರದಿಯ ವ್ಯವಸ್ಥೆಯನ್ನು ಮೊಟ್ಟಮೊದಲು ಬ್ರಿಟಿಷ್ ಸರಕಾರವು ರೂಪಿಸಿತ್ತು.ಇದು ಉಪಗ್ರಹ,ರಾಡಾರ್ ಹಾಗೂ ವೀಕ್ಷಣಾಲಯಗಳಿಂದ ದೊರಕಿದ ಸಂಖ್ಯಾ ಮಹಿತಿಯ ಜೊತೆ ಸಂಖ್ಯಾಶಾಸ್ತ್ರದ ಮಾದರಿ ಹಾಗೂ ಐತಿಹಾಸಿಕ ಮಾದರಿಯನ್ನು ಹೊಂದಿಸಿಕೊಂಡು ಇದರ ಆಧಾರದ ಮೇಲೆ ವರದಿ ನೀಡುತ್ತಿತ್ತು.ಹವಾಮಾನ ಇಲಾಖೆಯು ಕಳೆದ ಹಲವು ವರ್ಷಗಳಲ್ಲಿ ಮುಂಗಾರಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ಅಸಮರ್ಥವಾಗಿದೆ ಇದಕ್ಕಾಗಿ ಸತತ ಹೋರಾಟ ನಡೆಸುತ್ತಿದೆ.ಇದಕ್ಕೆ 2009 ದೇಶದ ಹಲವು ಭಾಗಗಳಲ್ಲಾದ ತೀವ್ರ ಬರಗಾಲವೇ ಸಾಕ್ಷಿ.ಆಗ ಹವಾಮಾನ ಇಲಾಖೆಯು ಈ ವರ್ಷದ ಮುಂಗಾರು ಬೆಳೆಗಳಿಗೇನು ಹಾನಿ ಮಾಡಲಾಗದು ಎಂದು ವರದಿ ನೀಡಿತ್ತು.ಈ ಎಲ್ಲಾ ಸಮಸ್ಯೆ ನಿವಾರಣೆಗಾಗಿಯೇ ಈ ಸೂಪರ್ ಕಂಪ್ಯೂಟರ್ ತಯಾರಿ.
ಆದರೆ ನೀವ್ ಏನೇ ಹೇಳಿ ಕ್ಷಣ ಕ್ಷಣಕ್ಕೆ ಬದಲಾಗುವ ಈ ಹವಾಮಾನ ನಮಗೊಂದು ಒಗಟೇ ಸರಿ.ಈ ಒಗಟನ್ನು ಬಿಡಿಸುವ ಸಾಮರ್ಥ್ಯ ಆ ಭಗವಂತನಿಗಲ್ಲದೆ ಇನ್ಯಾರಿಂದ ಸಾಧ್ಯ.

  • ಸ್ವರ್ಣಲತ ಭಟ್

POPULAR  STORIES :

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...