No menu items!
19.4 C
Munich
Saturday, May 2, 2026

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..! ಸೆಂಚ್ಯುರಿ ಸ್ಟಾರ್‍ನ ಸಿನಿಮಾದಲ್ಲಿ ಮಿಂಚಿರೋ ಚೆಲುವೆ ಈಕೆ.!.

Must read

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಹೆಸರಲ್ಲೆ ಒಂದು ಸ್ಪಾರ್ಕ್ ಇದೆ.. ಅಭಿನಯದಲ್ಲಿ ಹಿರಿತನವಿದೆ.. ಜೊತೆಗೆ ಇವ್ರ ಚಿತ್ರಗಳಿಗೆ ಸಿನಿಮಾ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಯಿದೆ.. ಹೀಗಾಗೆ ಪ್ರತಿಯೊಬ್ಬ ನಿರ್ಮಾಪಕ ನಿರ್ದೇಶಕನಿಗೂ ಈ ಸೆಂಚ್ಯುರಿ ಸ್ಟಾರ್‍ನೊಂದಿಗೆ ಸಿನಿಮಾವನ್ನ ಮಾಡಬೇಕೆನ್ನುವ ಆಸೆ ಇದೆ..
ಹೀಗಾಗೆ ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೆ ಭಾರತೀಯ ಸಿನಿಮಾ ರಂಗದಲ್ಲೆ ಶಿವಣ್ಣನ ಕೈಲಿರೋ ಅಷ್ಟು ಚಿತ್ರಗಳು ಮತ್ಯಾವುದೆ ನಟನ ಕೈಲಿಲ್ಲ.. ಯಾಕಂದ್ರೆ ತಿಂಗಳಿಗೊಂದ್ ಈ ಇವ್ರ ಸಿನಿಮಾಗಳು ಅನೌನ್ಸ್ ಆಗ್ತಾನೆ ಇರುತ್ತೆ.. ಜೊತೆಗೆ ಅದ್ರ ಅಪ್‍ಡೆಟ್‍ಗಳು ಕೂಡ ದೊಡ್ಡ ಮಟ್ಟಿಗೆ ಸೌಂಡ್ ಮಾಡಿ ಬಿಡುತ್ತೆ.. ಹೀಗಾಗೆ ಈಗ ಹೆಚ್ಚು ಸುದ್ದಿಯಾಗ್ತಿರೋ ಚಿತ್ರವೆ ಖದರ್..
ಹೌದು ಇದು ಈ ಹಿಂದೆಯೇ ಹೆಸರಿಡಲಾದ ಈ ಶಿವಲಿಂಗನ ಸಿನಿಮಾ.. ಚಿತ್ರದ ಟೈಟಲ್‍ಗೆ ತಕ್ಕಹಾಗೆ ಇಂತಹದ್ದೆ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇನ್ನೂ ಈ ಖದರ್ ನಾಯಕನಿಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ…
ಹೌದು ಇದೇ ಮೊದಲ ಬಾರಿಗೆ ಸೆಂಚ್ಯುರಿ ಸ್ಟಾರ್‍ನ ಜೊತೆಗೆ ಸ್ಕ್ರೀನ್‍ಷೇರ್ ಮಾಡಿಕೊಳ್ಳುವ ಅಫರ್ ಈ ಭರ್ಜರಿ ಹುಡುಗಿಯ ಕೈ ಸೇರಿದೆ.. ಈ ಹಿಂದಿನ ಚಿತ್ರದಲ್ಲಿ ದೊಡ್ಡಮನೆ ಫ್ಯಾಮಿಲಿಯ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಜೊತೆಗೆ ಕಾಣಿಸಿಕೊಂಡಿದ್ದ ಈಕೆ, ಈಗ ಕರುನಾಡ ಚಕ್ರವರ್ತಿ ಸಿನಿಮಾಗೆ ನಾಯಕಿಯಾಗಿದ್ದಾಳೆ..

ಇನ್ನೂ ಈ ಸಿನಿಮಾವನ್ನ ಕೆ.ಎ.ಸುರೇಶ್ ಅವ್ರು ನಿರ್ದೇಶನ ಮಾಡ್ತಿದ್ಧಾರೆ.. ಈ ಸಿನಿಮಾವನ್ನ ಗೋವಿಂದಾಯ ನಮಃ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ಕುಮಾರ್ ನಿರ್ದೇಶಿಸಲಿದ್ದಾರೆ.. ಇನ್ನೂ ರಚಿತಾ ರಾಮ್ ವಿಷ್ಯಕ್ಕೆ ಬರೋದಾದ್ರೆ ಈ ನಟಿ ಸ್ಯಾಂಡಲ್‍ವುಡ್ ಮೋಸ್ಟ್ ಸಕ್ಸಸ್‍ಫುಲ್ ನಾಯಕಿಯಾಗಿದ್ಧಾರೆ.. ಯಾಕಂದ್ರೆ ಈಕೆಯ ಈ ಹಿಂದಿನ ರಥಾವರ ಹಾಗೆ ಚಕ್ರವ್ಯೂಹ ಸಿನಿಮಾಗಳು ಗೆದ್ದಿವೆ..
ಇನ್ನೂ ಈ ಸೆಂಚ್ಯುರಿ ಸ್ಟಾರ್‍ನ ಶಿವಲಿಂಗ ಸಹ ಈಗಾಗ್ಲೇ ಸೆಂಚ್ಯುರಿ ಬಾರಿಸಿಯಾಗಿದೆ… ಸದ್ಯಕ್ಕೆ ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ಈ ಇಬ್ಬರು ಈಗ ಒಂದೇ ಚಿತ್ರಕ್ಕೆ ಮೊದಲ ಬಾರಿಗೆ ಜೊತೆಯಾಗಲಿದ್ಧಾರೆ..
ಸದ್ಯದಲ್ಲೆ ಅಂದ್ರೆ ಇದೇ 19 ತಾರೀಖಿನಂದು ಶಿವಲಿಂಗ ಹಂಡ್ರೆಡ್ ಡೇಸ್‍ನ ಕಾರ್ಯಕ್ರಮ ನಡೆಯಲಿದೆ.. ಇದರಲ್ಲಿ ಸೌತ್‍ನ ಸ್ಟಾರ್ ನಟರು ಪಾಲ್ಗೊಳ್ಳಲಿದ್ಧಾರೆ.. ಅಂದೆ ಈ ಖದರ್ ಚಿತ್ರದ ಥೀಮ್ ಮ್ಯೂಸಿಕ್ ಲಾಂಚ್ ಮಾಡೋಕೆ ಪ್ಲಾನ್ ಮಾಡಿದೆ ಸಿನಿಮಾ ಟೀಮ್.. ಒಟ್ಟಿನಲ್ಲಿ ಈ ಫ್ರೆಶ್ ಪೇರ್ ಖದರ್‍ನಲ್ಲಿ ಮಸ್ತ್ ಕಲಂದರ್ ಜೋಡಿಯಾಗಿ ಕಂಗೊಳಿಸಲಿದೆ..

POPULAR  STORIES :

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article