ಮತ್ತೆ ಒಂದಾದ ಡಾಲಿ-ಚಿಟ್ಟೆ.. ಯಾವ ಚಿತ್ರಕ್ಕಾಗಿ ಗೊತ್ತಾ..?

Date:

ಶಿವಣ್ಣ ಅಭಿನಯದ ಟಗರು ಚಿತ್ರದ ಚಿಟ್ಟೆ ಹಾಗೂ ಡಾಲಿ ಜೋಡಿ ಮತ್ತೆ ಒಂದಾಗಿದೆ. ಹೌದು, ಧನಂಜಯ್ ಹಾಗೂ ವಸಿಷ್ಠ ಕಾಂಬಿನೇಷನ್ ನಲ್ಲಿ ಹೊರ ಬರ್ತಿದೆ ಮತ್ತೊಂದು ಚಿತ್ರ. ಟಗರು ನಂತರ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ಪ್ರೇಕ್ಷಕರ ಕೋರಿಕೆಯಾಗಿತ್ತು. ಈಗ ಈ ಜೋಡಿಯನ್ನು ಒಟ್ಟಿಗೆ ತರುವ ಮೂಲಕ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ ನಿರ್ದೇಶಕ ಸಂತೋಷ ಆನಂದ್ ರಾಮ್.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೆ ವಿಲನ್ ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಡಾಲಿ ಹಾಗೂ ಚಿಟ್ಟೆ. ರಾಜಕುಮಾರ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಸಂತೋಷ ಆನಂದ್ ರಾಮ್ ಹಾಗೂ ಪುನೀತ್ ರಾಜ್‍ಕುಮಾರ್. ನಟ ಧನಂಜಯ್ಈ ಚಿತ್ರದಲ್ಲಿ ಖಳನಾಯಕ ಎಂಬುದು ಖಚಿತವಾಗಿದೆ. ಆದರೆ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ ಅವರ ಪಾತ್ರ ಹೇಗಿರಲಿದೆ ಎನ್ನುವ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.ಅಲ್ಲದೆ ಬಹಳ ವರ್ಷಗಳಿಂದ ವಸಿಷ್ಠ ಅವರಿಗೆ ಪವರ್ ಸ್ಟಾರ್ ಜೊತೆ ನಟಿಸುವ ಆಸೆ ಇತ್ತು, ಇದೀಗ ಈ ಚಿತ್ರದ ಮೂಲಕ ವಸಿಷ್ಠ ಅವರ ಅನೇಕ ದಿನಗಳ ಕನಸು ಈಡೇರುತ್ತಿದೆ. ಒಟ್ಟಿನಲ್ಲಿ ಟಗರು ನಂತರ ಒಂದಾದ ಈ ಖಡಕ್ ಜೋಡಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದು ಗಾಂಧಿ ನಗರದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...