ಸ್ವಾಮಿ, ಥಿಯೇಟರ್ ಗೆ ನಾವೂ ನೀವು ಸಿನಿಮಾ ನೋಡೋಕೆ ಹೋಗೋದ್ಯಾಕೆ..? ಒಂದೆರೆಡೂವರೆ ಗಂಟೆ ಕಾಲ ಸಖತ್ತಾಗಿ ಎಂಜಾಯ್ ಮಾಡ್ಬೇಕು, ಇರೋಬರೋ ಟೆನ್ಷನ್ ಎಲ್ಲಾ ಮರೆತುಹೋಗ್ಬೇಕು, ಖುಷಿಖುಷಿಯಾಗಿ ಒಂದೊಳ್ಳೇ ಸಿನಿಮಾ ನೋಡುದ್ವಪ್ಪ ಅನ್ಕೊಂಡು ಥಿಯೇಟರಿಂದ ಹೊರಗೆ ಬರಬೇಕು..! ಇಷ್ಟಿದ್ರೆ ಸಿನಿಮಾ ಸೂಪರ್ ಅಂತ ಅರ್ಥ..! ಇತ್ತೀಚೆಗೆ ಕನ್ನಡದದಲ್ಲಿ ಸೂಪರ್ ಸಿನಿಮಾಗಳ ಟ್ರೆಂಡ್ ಶುರು ಆಗಿದೆ.. ಆ ಗ್ಯಾಪಲ್ಲಿ ಮತ್ತೊಂದು ಸೂಪರ್ ಸಿನಿಮಾ ನಿಮ್ಮನ್ನು ನಗಿಸೋಕೆ ರೆಡಿ ಸ್ಟಡಿ ಅಂತ ಬರ್ತಿದೆ..! ಅದೇ ಈ `ತರ್ಲೆ ನನ್ಮಕ್ಳು’..! ಈಗಾಗ್ಲೇ ಟ್ರೇಲರ್ ಮತ್ತು ಸೂರ್ಯವಂಶಿ ಅವರ ಮ್ಯೂಸಿಕ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ..! ಟ್ರೇಲರ್ ನೋಡಿದವರೆಲ್ಲಾ ಏನ್ ಗುರೂ ಹಿಂಗೆ ಡೈರೆಕ್ಟ್ ಡೈರೆಕ್ಟ್ ಢೈಲಾಗೂ ಅಂತ ಮಾತಾಡ್ಕೊತಿದ್ದಾರೆ..! ನಾಗಶೇಖರ್-ಶುಭಾಪೂಂಜಾ, ಹಾಗೂ ಜಗ್ಗೇಶ್ ಪುತ್ರ ಯತಿರಾಜ್ ಹಾಗೂ ಅಂಜನಾ ದೇಶಪಾಂಡೆ ಕಾಂಬಿನೇಶನ್ನು ಹಿಡಿಹಿಡಿ ಕಾಮಿಡಿನ ಪ್ರೇಕ್ಷಕನಿಗೆ ಕೊಡೋಕೆ ರೆಡಿ ಆಗಿದ್ದಾರೆ..! ಇನ್ನೊಂದು ಸಖತ್ ವಿಷ್ಯ ಏನೂ ಅಂದ್ರೆ ನಮ್ ಸಂಜು ಅಂದ್ರೆ ಶ್ರೀನಗರ ಕಿಟ್ಟಿ ಈ ಸಿನಿಮಾದಲ್ಲಿ ಒಂದು ಇಂಪಾರ್ಟೆಂಟ್ ರೋಲಲ್ಲಿ ಕಾಣಿಸ್ಕೊಂಡಿದ್ದಾರೆ..!
ಇನ್ನೊಂದು ವಿಶೇಷ ಏನು ಗೊತ್ತಾ..? ಈ ಸಿನಿಮಾ ಯಾವಾಗ್ಲೋ ರಿಲೀಸ್ ಆಗಬೇಕಿತ್ತು..! ಆದ್ರೆ ಸೆನ್ಸಾರ್ ಕಡೆಯಿಂದ ಈ ಸಿನಿಮಾಕ್ಕೆ ಸಿಕ್ಕಾಪಟ್ಟೆ ಸಮಸ್ಯೆ ಆಯ್ತಂತೆ..! ಅದು ತೆಗೀರಿ, ಇದು ತೆಗೀರಿ, ಇದ್ಯಾಕ್ರಿ, ಅದ್ಯಾಕ್ರಿ ಅಂತ ಕಾಟ ಕೊಟ್ಬುಟ್ರು ಅಂತಾರೆ ನಿರ್ಮಾಪಕ ಹಾಗೂ ನಿರ್ದೇಶಕರು..! ಈಗ ಸೆನ್ಸಾರ್ ಗೆ ಸವಾಲ್ ಹಾಕಿ ಇಲ್ಲಿಂದ ಮುಂಬೈ ತನಕ ಫೈಟ್ ಮಾಡಿ, ತಮ್ಮ ಸಿನಿಮಾನ, ಸಿನಿಮಾದ ಮಜಾನ ಹಾಗೇ ಉಳಿಸಿಕೊಳ್ಳೋದ್ರಲ್ಲಿ ತರ್ಲೆ ನನ್ಮಕ್ಳು ಸಕ್ಸಸ್ ಆಗಿದ್ದಾರೆ..! ಈಗ ಕನ್ನಡಿಗರಿಗೆ ಬಿಸಿಬಿಸಿ ಫುಲ್ ಮೀಲ್ಸ್ ಕೊಡೋಕೆ ತರ್ಲೆಗಳು ರೆಡಿ ಆಗಿದ್ದಾರೆ..! ನಿರ್ದೇಶಕ ರಾಕೇಶ್ ಸಿನಿಮಾನ ಸಖತ್ ಎಂಟರ್ಟೇನರ್ ಆಗಿಸಿದ್ದಾರೆ..! ಒಂದು ನಿಮಿಷಾನೂ ಬೋರ್ ಹೊಡಿಯಲ್ಲ ಸಾರ್, ನೀವ್ ನೋಡಿ ನಿಮಗೇ ಗೊತ್ತಾಗುತ್ತೆ ಅಂತ ಸಖತ್ ಕಾನ್ಫಿಡೆಂಟ್ ಆಗಿ ಹೇಳ್ತಿದ್ದಾರೆ..! ಶ್ರೀರಂಗ ಮೂವೀಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಚ್ಚಿದಾನಂದ ಹಾಗೂ ಎ.ಎಸ್.ಸತೀಶ್ ಕುಮಾರ್ ಅವರು ನಿರ್ಮಾಣ ಮಾಡ್ತಿರೋ ಈ ಸಿನಿಮಾದಲ್ಲಿ ಮನರಂಜನೆಗಂತೂ ಕೊರತೆ ಇಲ್ವಂತೆ..! ಇದೇ ಜನವರಿ 15ನೇ ತಾರೀಕು ರಾಜ್ಯಾದ್ಯಂತ ತರ್ಲೆ ನನ್ಮಕ್ಳು ಹಾವಳಿ ಶುರು ಆಗ್ತಿದೆ..! ಸಂಕ್ರಾಂತಿಗೆ ಎಳ್ಳುಬೆಲ್ಲ ತಿನ್ಕೊಂಡು ಕಾಮಿಡಿ ಬೆಲ್ಲ ಸವಿಯೋಕೆ ರೆಡಿ ಆಗಿ..! ಕನ್ನಡದ ಸ್ವಮೇಕ್ ಸಿನಿಮಾ ನೋಡಿ, ಪ್ರೋತ್ಸಾಹಿಸಿ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!
ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!
ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!