ಇಂಜಿನಿಯರಿಂಗ್ ಹುಡುಗರು ಈಗ ಡೆಲಿವರಿ ಬಾಯ್ಸ್..! ಇಂಜಿನಿಯರಿಂಗ್ ಪದವಿ ಪಡೆದು ಡೆಲಿವರಿ ಬಾಯ್ಸ್ ಆಗಿದ್ದೇಕೆ..?!

Date:

ಕೆಲಸದಲ್ಲಿ ಮೇಲು-ಕೀಳು ಅಂತೇನೂ ಇಲ್ಲ..! ಎಲ್ಲಾ ಕೆಲಸವೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ತನ್ನದೇ ಆದ ಘನತೆ ಪ್ರತಿಯೊಂದೂ ಕೆಲಸಕ್ಕೂ ಇದೆ..! ಈಗ ಹೆಚ್ಚು ಹೆಚ್ಚು ವಿದ್ಯಾರ್ಹತೆಯನ್ನು ಪಡೆದವರಲ್ಲಿ ಕೆಲವರು ತಮ್ಮ ವಿದ್ಯಾರ್ಹತೆಗೆ ತಕ್ಕದಾದ ಕೆಲಸವೇ ಬೇಕೆಂದು ಹುಡುಕಾಡುತ್ತಾರೆ..! ಸಣ್ಣಪುಟ್ಟ ಕೆಲಸ ಸಿಕ್ಕರೆ ಜಪ್ಪಯ್ಯ ಅಂದ್ರೂ ಹೋಗಲ್ಲ..! ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ವಿದ್ಯಾರ್ಹತೆಗೆ ಬೇಕಾದ ಕೆಲಸವೇ ಬೇಕೆಂದು ಹಠ ಹಿಡಿದರೆ ಆಗಲ್ಲ..! ಇವತ್ತು ಪದವಿ, ಸ್ನಾತಕೋತ್ತರ ಪದವಿ ಪಡೆದವರೂ ಕೆಲಸ ಇಲ್ಲದೇ ಓತ್ಲಾ ಹೊಡ್ಕೊಂಡು ಇದ್ದಾರೆ…! ಸಣ್ಣ ಪುಟ್ಟ ಕೆಲಸವನ್ನು ಮಾಡೋ ಮನಸ್ಸು ಅವರಿಗಿಲ್ಲ..! ಇಂಥವರ ನಡುವೆ ವಿದ್ಯಾರ್ಹತೆಗೆ ತಕ್ಕದಾದ ಕೆಲಸ ಸಿಕ್ಕಿದ್ದರೂ ಸಂಬಳ ಕಡಿಮೆ ಅನ್ನೋ ಕಾರಣಕ್ಕೋ ಇನ್ಯಾವುದೋ ಕಾರಣಕ್ಕೋ ಕೆಲಸ ಬಿಟ್ಟು ತಮ್ಮ ವಿದ್ಯಾರ್ಹತೆಗೆ ಸಂಬಂಧ ಪಡದೇ ಇರೋ ಕೆಲಸವನ್ನೂ ಮಾಡ್ತಾರೆ..! ಕೆಲಸ ಮಾಡೋ ಮನಸ್ಸಿದ್ದರೆ ಸಾಕು, ಒಳ್ಳೆಯ ದುಡಿಮೆ ಇಂದ ಕುಟುಂಬವನ್ನು ನಿರ್ವಹಣೆ ಮಾಡುವಂತಾದರೆ ಸಾಕು, ಓತ್ಲಾ ಹೊಡೆಯುವುದಕ್ಕಿಂತ, ತಲೆ ಹೊಡೆದು ದುಡ್ಡು ಮಾಡೋದಕ್ಕಿಂತ ಕೆಲಸ ಮಾಡಿ ದುಡಿದು ತಿನ್ನೋರಿಗೆ ಯಾವ ಕೆಲಸವಾದರೇನು..? ಎಂಬ ಮನೋಭಾವನೆಯಿಂದ ಕೆಲಸ ಮಾಡೋ ವಿದ್ಯಾವಂತ, ಪದವೀಧರರೂ ಓದದೇ ಇರೋರು, ಪದವಿ ಪಡೆಯದೇ ಇರೋರು ಮಾಡೋ ಕೆಲಸವನ್ನು ಮಾಡ್ತಾ ಇದ್ದಾರೆ..!
ಇಂಥವರಲ್ಲಿ ದಿತಿಲ್ ಡಿ ಕುಮಾರ್ ಕೂಡ ಒಬ್ಬರು. 2014ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ದಿತಿಲ್ ಡಿ ಕುಮಾರ್ ಕೆಲಸಕ್ಕೆ ಸೇರ್ತಾರೆ..! ಆಗತಾನೆ ಪದವಿ ಮುಗಿಸಿದ್ದ ಅವರಿಗೆ ಸಿಗ್ತಾ ಇದ್ದಿದ್ದು 12000 ರೂಪಾಯಿ ಸಂಬಳ. ಆರಂಭದ ತಿಂಗಳು ಅಕೌಂಟ್ ಗೆ ಬಂದ ಸಂಬಳ 9000ರೂಪಾಯಿಗಳು. ಈ ಸಂಬಳ ಬಾಡಿಗೆ ಮತ್ತು ತಿಂಗಳ ಅವಶ್ಯಕತೆಗೇ ಸರಿ ಹೋಗುತ್ತೆ..! ಇದರಿಂದ ಲೈಫ್ ಲೀಡ್ ಮಾಡೋದು ತುಂಬಾ ಕಷ್ಟ ಎಂದು ಮನಗಂಡ ದಿತಿಲ್ ಕೆಲಸ ಬಿಡ್ತಾರೆ..! ಕೆಲಸ ಬಿಟ್ಟವರು `ಪೆಟೊ.ಇನ್’ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರ್ತಾರೆ..! ತಿಂಗಳಿ 20,000 ಸಂಬಳದ ಜೊತೆಗೆ ಪೆಟ್ರೋಲ್ ಭತ್ಯೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚು ಹಣ ಎಲ್ಲವೂ ಸಿಗ್ತು..! ದಿನಕ್ಕೆ ಎಂಟು ಗಂಟೆ ಕೆಲಸ ಇಷ್ಟೆಲ್ಲಾ ಸೌಲಭ್ಯ.
ಈ ಪೆಟೋ.ಇನ್ ಲಿ ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆಗಳಲ್ಲಿ ಒಟ್ಟಾರೆಯಾಗಿ 50 ಡೆಲಿವರಿ ಬಾಯ್ ಗಳಿದ್ದಾರೆ. ಅವರಲ್ಲಿ ದಿತಿಲ್ ಕೂಡ ಒಬ್ಬರಾಗಿದ್ದು, ಇಲ್ಲಿನ ಡೆಲಿವರಿ ಬಾಯ್ ಗಳಲ್ಲಿ ಶೇಕಡ 40ರಷ್ಟು ಇಂಜಿನಿಯರ್ ಗಳು, 40ರಷ್ಟು ಪದವಿಧರರಿದ್ದಾರೆ..! ಪದವಿಗೂ ಕಡಿಮೆ ಶಿಕ್ಷಣ ಪಡೆದವರು ಕೇವಲ 20%..!
ಇದು ಪೆಟೊ.ಇನ್ ನಲ್ಲಿ ಸೇವೆ ಮಾಡ್ತಾ ಇರೋರ ಕಥೆ ಮಾತ್ರವಲ್ಲ..! ಅನೇಕ ಕಡೆಗಳಲ್ಲಿ ಇಂಥಹದ್ದೇ ಸ್ಥಿತಿ ನಿರ್ಮಾಣವಾಗಿದೆ..! ಇದರಿಂದ
* ವಿದ್ಯಾರ್ಹತೆಗೂ ಮಾಡೋ ಕೆಲಸಕ್ಕೂ ಸಂಬಂಧ ಇರಬೇಕೆಂದಿಲ್ಲ..!
* ವೇಗವಾಗಿ ಬೆಳೆಯುತ್ತಿರುವ ಔಧ್ಯಮಿಕ ಜಗತ್ತಲ್ಲಿ ಎಲ್ಲಾ ಕೆಲಸಕ್ಕೂ ಹೊಂದಿಕೊಳ್ಳಬೇಕು..!
* ಮೊದಲೇ ಹೇಳಿದಂತೆ ಯಾವ ಕೆಲಸವೂ ಹೆಚ್ಚಲ್ಲ, ಯಾವುದೂ ಕಡಿಮೆ ಅಲ್ಲ..! ಯಾವ ಕೆಲಸವನ್ನಾದರೂ ಮಾಡಲು ತಯಾರಿರಬೇಕು..!
* ಪದವಿ ವಿದ್ಯಾ ಸಂಪಾದನೆಗೆ, ಕೆಲಸ ಬದುಕಿಗೆ..! ಹೀಗೆ ಕೆಲವೊಂದು ವಿಷಯಗಳು ಸೂಕ್ಷ್ಮವಾಗಿ ಅರ್ಥವಾಗ್ತಾ ಹೋಗುತ್ತವೆ.

  • ಶಶಿಧರ ಡಿ. ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...