ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲು 22,000 ರೂಪಾಯಿಗಳು..!

1
64

“ನೈಸರ್ಗಿಕ ವಿಪತ್ತಿನಲ್ಲಿ ಹುರುಪಿನ ವ್ಯಾಪಾರ”..! ನೈತಿಕವಾಗಿ ನೋಡಿದ್ರೆ ಇದು ತಪ್ಪೇ..! ಆದ್ರೆ ವಾಸ್ತವದಲ್ಲಿ ಇದು ನಿಜ..! ನೀವು ಯಾವುದೇ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೋಡಿ, ಸಂತ್ರಸ್ತರಿಗೆ ಜನ ಉದಾರವಾಗಿ ಸಹಾಯ ಮಾಡ್ತಾರೆ..! ಆದರೆ ದೊಡ್ಡ ಉದ್ಯಮಗಳು, ವ್ಯಾಪಾರಿಗಳು ಈ ಸಂದರ್ಭವನ್ನು ಬಳಸಿಕೊಂಡು ಹೆಚ್ಚು ಲಾಭಗಳಿಸಿಕೊಳ್ತಾರೆ..!
ಇದಕ್ಕೆ ತಮಿಳುನಾಡಿನ ಇತ್ತೀಚಿನ ಪ್ರವಾಹ ಪರಿಸ್ಥಿತಿ ಮತ್ತೊಂದು ಸಾಕ್ಷಿ ಆಗಿದೆ..! ಅಲ್ಲಿನ ಜನ ಬೇರೆ ಬೇರೆ ಕಡೆಗಳಿಗೆ ಹೋಗೋಕೆ ವಿಮಾನಕ್ಕೆ ದೊಡ್ಡ ಮೊತ್ತದ ಹಣವನ್ನು ಕೊಟ್ಟಿರೋದು ಬೆಳಕಿಗೆ ಬಂದಿದೆ..!
ತಮಿಳುನಾಡಿಂದ ಬೆಂಗಳೂರಿಗೆ ಕರೆದುಕೊಂಡು ಹೋಗೋಕೆ ವಿಮಾನಯಾನ ಸಂಸ್ಥೆಯೊಂದು ಪ್ರತಿಯೊಬ್ಬರ ಬಳಿಯ ಬರೊಬ್ಬರಿ 22 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡಿದೆ..! ಮೊದಲಿಗೆ ಸೀಟ್ ಇಲ್ಲ, ಫುಲ್ ಆಗಿದೆ ಅಂತ ಹೇಳಿ, 22 ಸಾವಿರ ಕೊಟ್ಟೋರಿಗೆ ಆರಾಮಾಗಿ ಹತ್ತಿಸಿಕೊಂಡು ಬೆಂಗಳೂರು ತಲುಪಿಸಿ ತನ್ನ ವ್ಯಾಪಾರಿ ಕುಂತಂತ್ರಗಾರಿಕೆಯನ್ನು ಪ್ರದರ್ಶಿಸಿದೆ..! ಬೆಂಗಳೂರು ಅಲ್ಲದೇ, ದೆಹಲಿ ಮೊದಲಾದ ಕಡೆಗಳಿಗೆ ಹೆಂಗಸರು, ಮಕ್ಕಳು, ವಯಸ್ಸಾದವರು ಹೋಗೋಕೆ ಹೆಣಗಾಡುತ್ತಿರುವಾಗ ವಿಮಾನವೊಂದು ಇಂಥಾ ಹಣಗಳಿಕೆ ದಾರಿಯನ್ನು ಹಿಡಿದಿದೆ..!
ಸೀಟು ಭರ್ತಿಯಾಗದೇ ವಿಮಾನ ಖಾಲಿ ಖಾಲಿಯೇ ಇತ್ತು..!
ಈ ಮಾಹಿತಿಯನ್ನು ಅನುಪಮ್ ಆನಂದ್ ತನ್ನ ಫೇಸ್ ಬುಕ್ ನಲ್ಲಿ ಫೋಟೋ ಸಮೇತ ನೀಡಿದ್ದಾರೆ. ಸ್ವತಃ ಇವರಿಗೂ ಈ ಅನುಭವವಾಗಿದ್ದು, ಈ ವಿಷಯವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಾ ಈ ಬಗ್ಗೆ ಕ್ರಮಕೈಗೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಪ್ರಧಾನಿಗಳಲ್ಲಿ ಮನವಿ ಮಾಡಿದ್ದಾರೆ.

 

 

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here