ಇದು ಪ್ರೇಕ್ಷಕನ ನೆಚ್ಚಿನ ತಿಥಿ…!

Date:

ತಿಥಿಗೆ ಮನೆಯ ದೊಡ್ಡ ಮಕ್ಕಳು ಹೋಗಬಾರದು ಅಂತ ನಮ್ಮಮ್ಮ ಹೇಳ್ತಿರ್ತಾರೆ. ಆದ್ರೂ ಆಗಿದ್ದಾಗ್ಲಿ ಅಂತ ನಾನು ನಿನ್ನೆ ತಿಥಿಗೆ ಹೋಗಿದ್ದೆ. ಹಳ್ಳಿ ಸೊಗಡಿನ ತಿಥಿ ಬಾಡೂಟ ಸಖತ್ತಾಗೇ ಇತ್ತು.

ಇದು ಯಾರೋ ಸತ್ತಾಗ ಮಾಡಿದ ತಿಥಿ ಅಲ್ಲ, ಸೆಂಚುರಿ ಗೌಡನ ಸಿನಿಮಾ ತಿಥಿ..!
ಮೊದಲೇ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ. ಜೊತೆಗೆ ಟ್ರೇಲರ್ ಬೇರೆ ಸಖತ್ ಹಿಟ್ ಆಗಿತ್ತು. ಹಾಗಾಗಿ ಈ ತಿಥಿ ಕಥೆ ಏನು ಅಂತ ನೋಡೋಣ ಅಂತ ಹೋದವರಿಗೆ ತಿಥಿ ಫುಲ್ ಮೀಲ್ಸ್..! ಒಂದು ತಿಥಿಯ ಸುತ್ತ ಸುತ್ತೋ ಕಥೆ ಹಳ್ಳಿಯ ಸೂಕ್ಷ್ಮತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡ್ತಾ ಹೋಗುತ್ತೆ. ಹಳ್ಳಿಯೇ ಥಿಯೇಟರ್ ಒಳ್ಗೆ ಬಂದ ಹಾಗೆ ಭಾಸವಾಗುತ್ತೆ. ಅಲ್ಲಿನ ಒಂದೊಂದು ಪಾತ್ರಗಳು ನಿಜವಾಗಿ ಹಳ್ಳಿ ಯ ಪಾತ್ರಗಳೇ ಅನ್ನುವಂತೆ ಮಾಡುತ್ತೆ. ಸೆಂಚುರಿ ಗೌಡ ಮೂರು ನಿಮಿಷ ಮಾತಾಡಿ ಚಿತ್ರದ ಉದ್ದಕ್ಕೂ ಹೀರೋ ಆಗ್ತಾರೆ, ಗಡ್ಡಪ್ಪ ಒಂದೊಂದು ಪಂಚ್ ನಲ್ಲೂ ತುಂಬಾ ಪ್ರಿಯವೆನ್ನಿಸ್ತಾರೆ. ಇದೆಲ್ಲದರ ಮಧ್ಯೆ ಅಲ್ಲಲ್ಲಿ ಹಳ್ಳಿ ಲವ್ ಸ್ಟೋರಿ, ಹಳ್ಳಿಯ ಪಡ್ಡೆ ಹುಡುಗರ ಪೋಲಿಯಾಟ, ಹಳ್ಳಿಯ ಸಮಸ್ಯೆಗಳ ಅನಾವರಣ, ಒಬ್ಬ ಹಠವಾದಿ ಅಪ್ಪ, ಒಬ್ಬ ಅತಿಯಾಸೆಯ ಮಗ…ಹೀಗೇ ಪ್ರತಿ ಪಾತ್ರಗಳೂ ಅಸಲಿಗೆ ಅಸಲು… ನಿರ್ದೇಶಕರು ಮೂಲತಃ ಹಳ್ಳಿಯವರೇ ಆಗಿರಬೇಕು, ಅಥವಾ ಹಳ್ಳಿಯಲ್ಲೇ ಕನಿಷ್ಟ ಎರಡು ವರ್ಷ ಸೆಟಲ್ ಆಗಿರಬೇಕು. ಹಾಗಿದ್ದರೆ ಮಾತ್ರ ಹಳ್ಳಿಯನ್ನು ಇಷ್ಟು ಅಚ್ಚುಕಟ್ಟಾಗಿ ತೋರಿಸೋಕೆ ಸಾಧ್ಯ..!
ಹಾಸ್ಯವಿದೆ, ಮುಗುಳ್ನಗೆ ತರಿಸುವ ಸನ್ನಿವೇಶವಿದೆ, ಕ್ಯಾಮರಾ ಅದ್ಭುತ ಅನಿಸದಿದ್ರೂ ಸಿನಿಮಾಗೆ ಕೊರತೆ ಅಂತ ಅನಿಸೋದೇ ಇಲ್ಲ, ಸಂಭಾಷಣೆಯೇ ತಿಥಿಯ ಮೇನ್ ಮೆನು. ಲೈಟಾಗಿ ಕಿಕ್ ಹೊಡೆಯೋ ಸಿನಿಮಾ ನಾವು ಸಿಟಿ ಜನ ಅನ್ನೋದು ಮರೆತು ನೋಡಿದ್ರೆ ಹಳ್ಳಿಯ ತಿಥಿಯೊಂದರ ಭರ್ಜರಿ ಬಾಡೂಟ ಮಾಡಿಸೋದ್ರಲ್ಲಿ ಅನುಮಾನವೇ ಇಲ್ಲ..! ಹೋಗ್ರಪ್ಪಾ ಹೋಗ್ರಿ…ತಿಥಿಗೆ ಹೋಗ್ರಿ…

  • ಕೀರ್ತಿ ಶಂಕರಘಟ್ಟ

POPULAR  STORIES :

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?

`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...