ಸೈಬರ್ ವಂಚನೆಯಿಂದ ಮಹಿಳೆಯನ್ನು ಕಾಪಾಡಿದ ಬ್ಯಾಂಕ್ ಉದ್ಯೋಗಿ..!

0
89

ಬ್ಯಾಂಕ್ ಉದ್ಯೋಗಿಯೊಬ್ಬರು ಸೈಬರ್ ವಂಚನೆಯಿಂದ ಕಾಪಾಡಿದ ರಿಯಲ್ ಸ್ಟೋರಿ ಇದು..! ಸೈಬರ್ ವಂಚನೆಗಳು ಹೆಚ್ಚಾಗುತ್ತಿರುವ ಈ ಹೊತ್ತಲ್ಲಿ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ಓದಲೇ ಬೇಕು..! ಜನ ಹೇಗೆಲ್ಲಾ ಮೋಸ ಹೋಗಿ ದುಡ್ಡನ್ನು ಕಳೆದುಕೊಳ್ತಾರೆ..! ಪೊಲೀಸ್ ಇಲಾಖೆ ಕೆಲವೊಮ್ಮೆ ಎಷ್ಟೊಂದು ನಿಷ್ಠುರವಾಗಿ ಸೈಬರ್ ವಂಚನೆಯ ಜಾಲವನ್ನು ಹಿಡಿದು ಶಿಕ್ಷಿಸುವಲ್ಲಿ ನಿರ್ಲಕ್ಷಿಸುತ್ತಾರೆ ಎಂಬುದನ್ನು ಈ ಸ್ಟೋರಿ ಸಾರಿ ಸಾರಿ ಹೇಳುತ್ತದೆ..! ಅದೇ ರೀತಿ ಬ್ಯಾಂಕ್ ಉದ್ಯೋಗಿ ಒಬ್ಬರ ಗ್ರಾಹಕ ಪರ ಕಾಳಜಿಯನ್ನೂ ಎತ್ತಿ ತೋರಿಸುತ್ತದೆ..!
ಅವರು “ಅಂಕಿತ್ ಸಿಂಗ್” ಅಲಹಾಬಾದ್ ಬ್ಯಾಂಕ್ ಉದ್ಯೋಗಿ. ಇವರು ಸಧ್ಯ `ಸಾತ್ನ’ ಶಾಖೆಯಲ್ಲಿ ಕೆಲಸ ಮಾಡ್ತಾ ಇದ್ದಾರೆ..! ಇದು ಹಬ್ಬದ ಸಮಯ ಅಲ್ವಾ..? ಹಾಗಾಗಿ ಬಹುತೇಕ ನೌಕರರು ರಜೆಹಾಕಿ ಊರಿಗೆ ಹೋಗಿದ್ದಾರೆ..! ಆದ್ದರಿಂದ ರಜೆ ಹಾಕದೆ ಉಳಿದಿರುವ ನೌಕರರಿಗೆ ಸ್ವಲ್ಪಮಟ್ಟಿಗೆ ಕೆಲಸದ ಒತ್ತಡ ಜಾಸ್ತಿಯೇ ಇರುತ್ತೆ..! ಮೊನ್ನೆ 19ನೇ ತಾರೀಖು ಎಂದಿನಂತೆ ಅಂಕಿತ್ ಸಿಂಗ್ ಬ್ಯಾಂಕಿಗೆ ಬರ್ತಾರೆ..! ಮೊದಲೇ ಹೇಳಿದಂತೆ ಇವರ ಸಹೋದ್ಯೋಗಿಗಳೂ ಕೂಡ ರಜೆ ಹಾಕಿದ್ದರು..! ಆದ್ದರಿಂದ ಅಂಕಿತ್ ಸಿಂಗರೇ ಮುಂದಿನ ಡೆಸ್ಕಿನಲ್ಲಿ ಕೂತು ಎಲ್ಲಾ ಗ್ರಾಹಕರನ್ನೂ ನಿಭಾಯಿಸ್ತಾ ಇದ್ದರು..! ಆ ಸಂದರ್ಭದಲ್ಲಿ “ಮುಮ್ತಾಜ್ ಪರ್ವೀನ್” ಎಂಬ ಮಹಿಳೆ ಬ್ಯಾಂಕಿಗೆ ಬರ್ತಾರೆ..! ಆ ಮಹಿಳೆ ಅಷ್ಟೇನೂ ಚುರುಕಾಗಿರಲಿಲ್ಲ…! ಬ್ಯಾಂಕಿಗೆ ಬರುತ್ತಿದ್ದಂತೆ ಗಡಿಬಿಡಿಯಿಂದ ನೇರವಾಗಿ ಅಂಕಿತರ ಬಳಿ ಬಂದು ನನ್ನ ಫಿಕ್ಸೆಡ್ ಡೆಪಾಸಿಟ್ ಅನ್ನು ಮುರಿದು, ಅದರಿಂದ 25000/-ರೂಪಾಯಿಗಳನ್ನು ತಕ್ಷಣವೇ `ವಿಮಲ್ ಕುಮಾರ್’ ಎಂಬ ಹೆಸರಿನ ಖಾತೆಯನ್ನು ಹೊಂದಿರುವ ತನ್ನ ಸಹೋದರನ ಖಾತೆಗೆ ವರ್ಗಾಯಿಸುವಂತೆ ಹೇಳ್ತಾರೆ..! ವಿಮಲ್ ಕುಮಾರ್ ಖಾತೆ ದೆಹಲಿಯ ಅಲಹಬಾದ್ ಬ್ಯಾಂಕಿನ ವಿಷ್ಣು ಗಾರ್ಡನ್ ಬ್ರಾಂಚ್ ನಲ್ಲಿತ್ತು..
ಅಂಕಿತ್ ಮುಮ್ತಾಜ್ ಮತ್ತು ವಿಮಲ್ ಕುಮಾರ್ ಸೋದರ-ಸೋದರಿಯರೆಂದು ಜಾತಿ ನೆಲೆಗಟ್ಟಿನಲ್ಲಿ ನೋಡಲು ಬಯಸಿರಲಿಲ್ಲ..! ಆದರೆ ಏನೋ ವಂಚೆನೆಯ ಸಾಧ್ಯತೆಯಿದೆ ಎಂದು ಜಾಗೃತರಾದರು..! ಎಲ್ಲರ ಮನಸ್ಸಿನಲ್ಲಿ ಸಹಜವಾಗಿ ಬರುವಂತೆ ಇವರ ಮನಸ್ಸಿನಲ್ಲಿಯೂ ಹಿಂದೂ ಮತ್ತು ಮುಸ್ಲೀಂರು ಸೋದರ-ಸೋದರಿ ಸಂಬಂಧವನ್ನು ಹೊಂದಿರಲಿಕ್ಕೆ ಹೇಗೆ ಸಾಧ್ಯ..?! ಅಂತ ಪ್ರಶ್ನೆ ಮಾಡಿಕೊಳ್ಳುತ್ತಾರೆ..! ಇವರ ಮನಸ್ಸಿನಲ್ಲಿ ಮೂಡಿದ ಸಹಜ ಅನುಮಾನವನ್ನು ಬಿಟ್ಟಾಕಲು ಸಾಧ್ಯವಾಗಲೇ ಇಲ್ಲ..! ತಲೆ ಉಪಯೋಗಿಸಿ, ಏನೋ ಆಗ್ತಾ ಇದೆ ಎಂದು ಆ ಖಾತೆಯ ಟ್ರಾನ್ಸಾಕ್ಷನ್ (ವ್ಯವಹಾರ)ವನ್ನು ಪರಿಶೀಲಿಸಿದರು..! ಆ ಪರಿಶೀಲನೆಯಿಂದ ಆ ಖಾತೆದಾರ ವಿಷ್ಣು ಗಾರ್ಡನ್ ಬ್ರಾಂಚಿನಲ್ಲಿ ಹೊಸದಾದ ಖಾತೆ ತೆರೆದಿರುವುದು ಗೊತ್ತಾಯ್ತು..! ಆ ಖಾತೆಗೆ ದೇಶದ ಬೇರೆ ಬೇರೆ ಕಡೆಗಳಿಂದ ಹಣಬಂದು ಬಿದ್ದಿರೋದು ತಿಳಿಯುತ್ತೆ..! ಖಾತೆಗೆ ಜಮಾವಾಗಿ ಕೇವಲ10-15 ನಿಮಿಷದೊಳಗೆ ಎಟಿಎಂ ಮೂಲಕ ಆ ಖಾತೆದಾರ ಹಣವನ್ನು ಡ್ರಾ ಮಾಡಿಕೊಳ್ತಾ ಇದ್ದುದು ಕೂಡ ತಿಳಿಯುತ್ತದೆ..! ಆಗ ಅಂಕಿತ್ ಸಿಂಗರಿಗೆ ಈ ವಿಮಲ್ ಕುಮಾರ್ ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿ ಪಕ್ಕಾ ಸೈಬರ್ ವಂಚಕನೆಂಬುದು ಗೊತ್ತಾಗಿ ಬಿಡುತ್ತೆ..! ಆಗ ಅವರು ಮುಮ್ತಾಜ್ ಗೆ ವಿಮಲ್ ಕುಮಾರ್ ನಿಮಗೆ ಯಾವರೀತಿಯಲ್ಲಿ ಸಂಬಂಧಿಕರೆಂದು ಪ್ರಶ್ನಿಸುತ್ತಾರೆ..! ಅದಕ್ಕೆ ಮುಮ್ತಾಜರಿಂದ ವಿಮಲ್ ತನ್ನ ಸೋದರನೆಂಬ ಉತ್ತರ ಬರುತ್ತೆ..! ಅಂಕಿತ್ ಸರಿ, ನೀವೇಕೆ ಅವರಿಗೆ ಹಣ ಕಳುಹಿಸುತ್ತಿದ್ದೀರಿ ಎಂದು ಮರುಪ್ರಶ್ನೆ ಮಾಡ್ತಾರೆ..! ಅದಕ್ಕೆ ಆಕೆ ಅವನಿಗೆ (ವಿಮಲ್ ಎಂಬಾತನಿಗೆ) ತುರ್ತಾಗಿ ಹಣಬೇಕಾಗಿದೆ.. ಅದಕ್ಕೇ ನಾನು ಸಹಾಯ ಮಾಡ್ತಾ ಇದ್ದೀನೆಂದು ಹೇಳ್ತಾಳೆ..! ಅಂಕಿತ್ ತಲೆಯಲ್ಲಿ ವಂಚಕನ ಬಗ್ಗೆ ಏನೇನೋ ಆಲೋಚನೆಗಳು ಸುಳಿದಾಡುತ್ತೆ..! ತಕ್ಷಣವೇ ಈ ಎಲ್ಲಾ ವಿಷಯವನ್ನು ಸೀನಿಯರ್ ಮ್ಯಾನೇಜರ್ `ಸಲೀಲ್ ಕಾಂತ್ ಮಿಶ್ರಾರ’ ಗಮನಕ್ಕೆ ತರ್ತಾರೆ..!
ಅದಕ್ಕೆ ಅವರು “ನೇರವಾಗಿ ವಿಮಲ್ ಕುಮಾರ್ ಖಾತೆಗೆ ಹಣವನ್ನು ವರ್ಗಾಯಿಸಬೇಡಿ, ಆ ಮಹಿಳೆ ನಗದು ಹಣವನ್ನು ಆತನ ಖಾತೆಗೆ ಹಾಕುವಂತೆ ಮಾಡಿ” ಎಂದು ಹೇಳ್ತಾರೆ. ಅವರ ಸಲಹೆ ಮೇರೆಗೆ ಅಂಕಿತ್ ಆ ಮಹಿಳೆಯ ಉಳಿತಾಯ ಖಾತೆಯಿಂದ ಹಣವನ್ನು ವಿತ್ ಡ್ರಾಮಾಡಿ ಆ ಹಣವನ್ನು ವಿಮಲ್ ಕುಮಾರ್ ಅವರ ಅಕೌಂಟಿಗೆ ಹಾಕ್ತಾರೆ..! ಹಣ ವರ್ಗಾಯಿಸಿದ ತಕ್ಷಣವೇ ಅದನ್ನು ಹೋಲ್ಡ್ ಮಾಡ್ತಾರೆ..! ವಿಮಲ್ ಕುಮಾರ್ ಎಟಿಎಂ ಸಹಾಯದಿಂದ ಹಣವನ್ನು ವಿತ್ ಡ್ರಾ ಮಾಡಲಿಕ್ಕೆ ಆಗದಂತೆ ನೋಡಿಕೊಳ್ತಾರೆ..!
ವಿಮಲ್ ಕುಮಾರ್ ಎಟಿಂ ಮೂಲಕ ಬ್ಯಾಲೆನ್ಸ್ ಪರಶೀಲಿಸಿ, ವಿತ್ ಡ್ರಾ ಮಾಡಲಿಕ್ಕೆ ಟ್ರೈ ಮಾಡ್ತಾನೆ..! ಆದರೆ ಹಣ ಬರಲ್ಲ..! ತಕ್ಷಣವೇ ವಿಮಲ್ ಕುಮಾರ್ ಆ ಮಹಿಳೆಗೆ ಫೋನ್ ಮಾಡ್ತಾನೆ..! ಹಣ ಖಾತೆಗೆ ಜಮಾ ಆಗಿಲ್ಲ ಅಂತ ಹೇಳ್ತಾನೆ..! ಅಷ್ಟೇ ಅಲ್ಲ ಆಕೆಗೆ ಡೆಪಾಸಿಟ್ಟಿನ ಕೌಂಟರ್ ಸ್ಲಿಪ್ ಅನ್ನು ಸ್ಕ್ಯಾನ್ ಮಾಡಿ ಕಳುಹಿಸುವಂತೆ ಸೂಚನೆಯನ್ನೂ ಕೊಡ್ತಾನೆ..!
ಆ ಮಹಿಳೆ ಅದಕ್ಕೆ ಒಪ್ಪಿಗೆ ನೀಡ್ತಾಳೆ..! ಮಹಿಳೆ ಹೊರ ಹೋದೊಡನೆ ಅಂಕಿತ್ ವಿಷ್ಣು ಗಾರ್ಡನ್ ಶಾಖೆಗೆ ಫೋನ್ ಮಾಡಿ ವಿಮಲ್ ನ ಕೆವೈಸಿ ಮತ್ತು ಟ್ರಾನ್ಸೆಕ್ಷನ್ ಬಗ್ಗೆ ಗಮನವಿಟ್ಟು ಪರೀಕ್ಷಿಸುವಂತೆ ಹೇಳ್ತಾರೆ..!
ಮತ್ತೆ ಇವತ್ತು (23ನೇ ತಾರೀಖು) ಅಂಕಿತ್ ಮತ್ತೆ ಅದೇ ಮುಂಭಾಗದ ಡೆಸ್ಕಿನಲ್ಲಿದ್ದರು. ಅದೇ ಮಹಿಳೆ ಮತ್ತೆ ಬಂದರು..! ಬೇರೆ ಐಪಿ ವಿಳಾಸವಿರುವ ದೆಹಲಿಯ ಬ್ರಾಂಚಿನಲ್ಲಿ ನ ಅನಿಲ್ ಕುಮಾರ್ ಎಂಬ ಹೆಸರಿನ ಖಾತಗೆ 20000 ರೂಪಾಯಿಗಳನ್ನು ಡೆಪಾಸಿಟ್ ಮಾಡ್ಬೇಕು ಎಂದರು..! ಮತ್ತೆ ಅಂಕಿತ್, ಅವನ್ಯಾರು ಎಂದು ಪ್ರಶ್ನಿಸುತ್ತಾರೆ..! ಇವತ್ತೂ ಕೂಡ ಆ ಮಹಿಳೆ ಆತ ನನ್ನ ಸೋದರ ಎಂದು ಮತ್ತದೇ ಹಸಿ ಸುಳ್ಳನ್ನು ಹೇಳಿದ್ರು..!
ಮತ್ತೆ ಅಂಕಿತ್ ಆ ಖಾತೆಯ ಬ್ಯಾಂಕ್ ವ್ಯವಹಾರವನ್ನು ಚೆಕ್ ಮಾಡ್ತಾರೆ..! ಆಗ ಖಾತೆಗೂ ವಿಮಲ್ ಕುಮಾರ್ ಎಂಬ ಹೆಸರಿನ ಖಾತೆಗೂ ಸಾಮ್ಯತೆ ಇರುವುದನ್ನು ಕಂಡುಕೊಳ್ತಾರೆ..!ತಕ್ಷಣವೇ ಆ ವಿಮಲ್ ಮತ್ತ ಅನಿಲ್ ಎಂಬ ಹೆಸರಿನ ಖಾತೆಯನ್ನು ಟ್ರೇಸ್ ಮಾಡಿದರು..! ಆ ಮಹಿಳೆಗೆ “ನಿಮಗೆ ಹಿಂದೂ ಹೇಗೆ ಸೋದರದಾದರು..?! ಎಂದು ಕೇಳ್ತಾರೆ..! ಅದಕ್ಕೆ ಆ ಮಹಿಳೆ ಕಿರುಚಾಡಿ ಬಿಡ್ತಾರೆ..! ನಿಮಗೆ ನಮ್ಮ ಕುಟುಂಬದ ವಿಷಯ ಕಟ್ಕೊಂಡು ಏನ್ ಆಗ್ಬೇಕು..? ಹಿಂದೂ-ಮುಸ್ಲೀಂ ಸೋದರ ಸೋದರಿಯರಾಗ ಬಾರದೇ ಎಂದು ರೇಗಾಡಿ ಬಿಡ್ತಾರೆ..! ಅಂಕಿತ್ ಆ ಮಹಿಳೆಯನ್ನು ಕುಳಿತುಕೊಳ್ಳಲಿಕ್ಕೆ ಹೇಳಿ ನಿಮ್ಮ ಕುಟುಂಬದಲ್ಲಿ ಯಾರನ್ನಾದರೂ ಕಳುಹಿಸಿ ಎಂದು ಹೇಳ್ತಾರೆ..! ಮತ್ತೆ ಆ ಮಹಿಳೆಯ ಕೋಪ ನೆತ್ತಿಗೆ ಏರುತ್ತೆ..! ನಿಮ್ಮ ದೃಷ್ಟಿಯಲ್ಲಿ ಮಹಿಳೆ ಬಂದು ವ್ಯವಹಾರ ಮಾಡಬಾರದ..? ನೀವು ಹೇಳಿದ್ರೀ ಅಂತ ನಮ್ ಕುಟುಂಬದವ್ರು ಬರ್ಬೇಕಾ…? ಅವ್ರಿಗೆ ಕೆಲಸ ಕಾರ್ಯ ಇಲ್ಲ ಅಂತ ಅನ್ಕೊಂಡಿದ್ದೀರಾ..? ಎಂದು ಕೋಪದಲ್ಲಿ ಉತ್ತರ ಕೊಡ್ತಾರೆ..!
ಸರಿ, ನಿಮ್ಮ ಅಕೌಂಟಿನಿಂದ ಹಣ ವಿತ್ ಡ್ರಾ ಮಾಡಿ ಅನಿಲ್ ಕುಮಾರ್ ಖಾತೆಗೆ ಹಾಕಿ ಎಂದು ಅಂಕಿತ್ ಹೇಳ್ತಾರೆ..! ಆಕೆ ಅನಿಲ್ ಖಾತೆಗೆ ಹಣ ಜಮಾ ಮಾಡುತ್ತಿದ್ದಂತೆ ಆ ಖಾತೆಯನ್ನೂ ತಕ್ಷಣ ಹೋಲ್ಡ್ ಮಾಡ್ತಾರೆ..! ವಿಮಲ್ ಕುಮಾರ್ ಖಾತೆಗೆ ಆದ ಗತಿಯೇ ಅನಿಲ್ ಕುಮಾರ್ ಖಾತೆಗೂ ಆಗುತ್ತೆ..! ಅಲ್ಲಿನ ಬ್ರಾಂಚ್ ಮ್ಯಾನೇಜರ್ ಗೆ ವಿಷಯವನ್ನೆಲ್ಲಾ ವಿವರಿಸ್ತಾರೆ..! ಆ ಮ್ಯಾನೇಜರ್ ಕೂಡ ಇವರಿಗೆ ಸಹಕರಿಸಿದ್ದರಿಂದ ತಕ್ಷಣವೇ ಆ ಅಕೌಂಟ್ ಸ್ಥಗಿತಗೊಳ್ಳುತ್ತೆ…! ಅನಿಲ್ ಕುಮಾರ್ ಕೂಡ ವಿತ್ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲ್ಲ..!
ಅದಾದ ಒಂದು ಗಂಟೆ ನಂತರ ಆ ಮಹಿಳೆ ಪುನಃ ಬಂದು ತನ್ನ ಫಿಕ್ಸೆಡ್ ಡಿಪಾಸಿಟ್ ಅನ್ನು ಹಿಂತೆಗೆದು ಅನಿಲ್ ಕುಮಾರ್ ಅಕೌಂಟಿಗೆ ಡೆಪಾಸಿಟ್ ಮಾಡಲಿಕ್ಕೆ ಹೇಳ್ತಾರೆ..! ಆಗ ನೀವು ಪದೇ ಪದೇ ಹೀಗೆ ಮಾಡ್ತಾ ಇರುವುದರಿಂದ ನಾವು ಕೆಳಲೇ ಬೇಕಾಗುತ್ತೆ ಆದ್ದರಿಂದ ಕೇಳ್ತಾ ಇದ್ದೀವಿ ಎಂದು ಅಂಕಿತ್ ಪ್ರಶ್ನೆ ಮಾಡಿದ್ದಕ್ಕೆ, ನೀವು ನಮಗೆ ತೊಂದರೆ ಕೊಡ್ತಾ ಇದ್ದೀರೆಂದು ಆ ಮಹಿಳೆ ಹೇಳ್ತಾರೆ..! ಅದಕ್ಕೆ ಅಂಕಿತ್ ನಮ್ಮ ಕರ್ತವ್ಯ, ಪದೇ ಪದೇ ಆ ಅಕೌಂಟಿಗೆ ಡೆಪಾಸಿಟ್ ಮಾಡ್ತಿದ್ದೀರಿ ಅದಕ್ಕೆ ಕೇಳ್ತಾ ಇದ್ದೀನೆಂದು ಖಡಕ್ ಆಗಿಯೇ ಹೇಳ್ತಾರೆ..!
ಆ ಮಹಿಳೆ ನನ್ನ ದುಡ್ಡನ್ನು ಸುಮ್ಮನೆ ಕೊಡಲಿಕ್ಕೆ ನನಗೇನು ತಲೆ ಕೆಟ್ಟಿದೆಯಾ..? 1 ಲಕ್ಷ ಕೊಟ್ಟರೆ ನಂತರ 25 ಲಕ್ಷ ಕೊಡುತ್ತಾರೆಂದು ಹೇಳ್ತಾಳೆ..! ಆ ಮಹಿಳೆಗೆ ವಂಚನೆ ಆಗ್ತಾ ಇರೋದು ಅಂಕಿತ್ ಗೆ ಕನ್ಫರ್ಮ್ ಆಗುತ್ತೆ..!
ಅಂಕಿತ್ 30 ನಿಮಿಷ ಊಟದ ಸಮಯ, ನಂತರ ನಿಮ್ಮ ಕೆಲಸವನ್ನು ಮಾಡಿಕೊಡ್ತೀನಿ ಎಂದು ಆ ಮಹಿಳೆಗೆ ಹೇಳಿ ಸುಮ್ಮನೇ ಕೂರಿಸ್ತಾರೆ..! ತಕ್ಷಣ ಆ ಮಹಿಳೆಯ ಕುಟುಂಬದ ವಿಳಾಸ ಹುಡುಕಿ ಫೋನ್ ನಂಬರ್ ತೆಗೆದು ಫೋನ್ ಮಾಡ್ತಾರೆ..!
ದೆಹಲಿ ಪೊಲೀಸರಿಗೆ ಫೋನ್ ಮಾಡಿ ನಡೆದ ವಿಷಯಗಳನ್ನೆಲ್ಲಾ ವಿವರಿಸಿ ಎಟಿಎಂ ಲೊಕೇಷನ್ ಕೂಡ ಹೇಳಿದರೂ ದೆಹಲಿ ಪಲೀಸರು ನಿರ್ಲಕ್ಷಿಸಿದ್ದಾರಂತೆ..! ಅಲ್ಲಿನ ಪೊಲೀಸರು ಸಾತ್ನದ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ದಾಖಲಿಸಿ ಎಂದು ಹೇಳಿದ್ದಾರಂತೆ..!
ಇಷ್ಟೆಲ್ಲಾ ಆಗುವಷ್ಟರಲ್ಲಿ ಆ ಮುಮ್ತಾಜ ಸಹೋದರ ಅಂಕಿತ್ ಇದ್ದ ಬ್ರಾಂಚಿಗೆ ಬಂದಿದ್ದಾರೆ..! ಅಂಕಿತ್ ಎಲ್ಲಾ ಘಟನೆಗಳನ್ನು ವಿವರಿಸಿದ್ದಾರೆ..! ತಕ್ಷಣವೇ ಆ ಸೋದರ ಯಾವುದೇ ಟ್ರಾನ್ಸೆಕ್ಷನ್ ಮಾಡಬೇಡಿ ಎಂದು ಅಂಕಿತ್ ಗೆ ಹೇಳಿದ್ದಾರೆ..! ಅಷ್ಟೇ ಅಲ್ಲ ವಿಮಲ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬ ಹೆಸರಿನ ಖಾತೆದಾರರ ಬಗ್ಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ..!

ಅಬ್ಬಾ ದುಡ್ಡಿನ ಆಸಗೆ ಬಿದ್ದು ಜನ ಹೆಂಗೆಲ್ಲಾ ವಂಚನೆಗೆ ಒಳಗಾಗ್ತಾರೆ..! ಒಂದು ವೇಳೆ ಅಂಕಿತ್ ತಮ್ಮ ಪಾಡಿಗೆ ತಾವು ಆ ಮಹಿಳೆ ಹೇಳಿದಷ್ಟು ಕೆಲಸ ಮಾಡಿದ್ದರೆ ಆ ಮಹಿಳೆಗೆ 25 ಲಕ್ಷ ಬರುತ್ತಿರಲಿಲ್ಲ..! ಒಂದು ಲಕ್ಷ ಕಳೆದು ಹೋಗ್ತಾ ಇತ್ತು..! ಅಂಕಿತ್ ಬುದ್ಧಿವಂತಿಕೆಯಿಂದ ಆ ಮಹಿಳೆಯ ದುಡ್ಡು ಉಳಿದಿದೆ..! ಈಗಾಗಲೇ ವಿಮಲ್ ಮತ್ತು ಅನಿಲ್ ಅಕೌಂಟಿಗೆ ಹಾಕಿದ ಹಣದ ಬಗ್ಗೆ ದೂರು ನೀಡಿ, ಆ ಹಣವನ್ನು ವಾಪಸ್ಸು ತರಿಸಿಕೊಡುತ್ತೇವೆಂದು ಅಭಯವನ್ನೂ ನೀಡಿದ್ದಾರೆ..! ಆದರೆ ದೆಹಲಿ ಪೊಲೀಸರು ಮನಸ್ಸು ಮಾಡಿದ್ದರೆ ಆ ಇಷ್ಟೊತ್ತಿಗೆ ವಂಚಕನನ್ನು ಹಿಡಿದು ಬೆಂಡೆತ್ತ ಬಹುದಿತ್ತು..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

.ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!

ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

LEAVE A REPLY

Please enter your comment!
Please enter your name here