ಕಳ್ಳನೆಂದು ಆರೋಪಿಸಿ ಸ್ಥಳೀಯರು ಆದಿವಾಸಿ ಯುವಕನನ್ನು ಕೊಂದಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಧು ಎಂಬ ಆದಿವಾಸಿ ಯುವಕ ಸ್ಥಳೀಯರ ಥಳಿತಕ್ಕೆ ಬಲಿಯಾದವ.
ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ,ಸ್ಥಳೀಯ ಅಂಗಡಿಗಳಿಂದ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರು ಯುವಕನ ಲುಂಗಿ ಬಿಚ್ಚಿ ಹೊಡೆದು ಹಿಂಸಿಸಿ ಕೊಂದಿದ್ದಾರೆ. ಹಲ್ಲೆಗೂ ಮುನ್ನೆ ಕೆಲವರು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.