ಶಾಸಕ ಹ್ಯಾರೀಸ್ ಗೆ ಸಂಜನಾ ಬೆಂಬಲ…!

Must read

ಯುವಕ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಅವರ ಪುತ್ರ ನಲಪಾಡ್ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿದ್ದಾರೆ.


ಟ್ವೀಟ್ ಮಾಡಿರುವ ಸಂಜನಾ, ಯುಬಿ ಸಿಟಿಯಲ್ಲಿ ನಡೆದಿರುವ ಹಲ್ಲೆ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗಬೇಕು. ನ್ಯಾಯ ಶ್ರೀಮಂತಿರಿಗೆ, ಬಡವರಿಗೆಲ್ಲರಿಗೂ ಒಂದೇ ಎಂದಿದ್ದಾರೆ.


ಮಹಮ್ಮದ್ ಹ್ಯಾರೀಸ್ ಗೆ ನನ್ನ ಸಹಾನುಭೂತಿ ಇದೆ. ಮಗನ‌ ತಪ್ಪಿಗೆ ದಕ್ಷ ನಾಯಕ ಬೆಲೆ‌ ಕಟ್ಟುತ್ತಿದ್ದಾರೆ. ಹಲ್ಲೆ ನಡೆಯುವ ಮೊದಲು , ಈ ಡ್ರಾಮ ನಡೆಯುವ ಮೊದಲು ಹ್ಯಾರಿಸ್ ಸುಮಾರು 2 ದಶಕಗಳಿಂದ ಪ್ರಾಮಾಣಿಕ ನಾಯಕರಾಗಿದ್ದಾರೆ ಎಂದು ಸಂಜನಾ ಟ್ವೀಟ್ ಮಾಡಿದ್ದಾರೆ….! ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article