ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಭಾರಿ ಭೂಕಂಪನಕ್ಕೆ ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ ಎಂದು ತಿಳಿದುಬಂದಿದೆ.
ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಕಂಪನ ಪ್ರಮಾಣ ದಾಖಲಾಗಿದ್ದು, ಕ್ರೈಸ್ಟ್ ಚರ್ಚ್ ನಿಂದ 90 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಪ್ರಬಲ ಭೂಕಂಪನದ ಪರಿಣಾಮ ಕ್ರೈಸ್ಟ್ ಚರ್ಚ್ ನ ಬಹುಮಹಡಿ ಕಟ್ಟಡಗಳು ಜಖಂಗೊಂಡಿದ್ದು, ಸ್ಥಳೀಯ ಕಾಲಮಾನ ಮಧ್ಯರಾತ್ರಿ 12.02ರ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಬಲ ಭೂಕಂಪನದಿಂದಾಗಿ ಕ್ರೈಸ್ಟ್ ಚರ್ಚ್ ಕರಾವಳಿಯಲ್ಲಿ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಕ್ರೈಸ್ಟ್ ಚರ್ಚ್ ಕರಾವಳಿ ತೀರದಲ್ಲಿ ಭಾರಿ ಪ್ರಮಾಣದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಭೂಕಂಪನದ ಬೆನ್ನಲ್ಲೇ ಕರಾವಳಿ ತೀರದಲ್ಲಿ ಸುನಾಮಿ ಎಚ್ಚರಿಕಾ ಕೇಂದ್ರದಿಂದ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ತೀರದ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ನ್ಯೂಜಿಲ್ಯಾಂಡ್‍ನಲ್ಲಿ ರೇಡಿಯೋ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ. 2011 ಫೆಬ್ರವರಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ನ್ಯೂಜಿಲೆಂಡ್ ನಲ್ಲಿ 185 ಮಂದಿ ಸಾವನ್ನಪ್ಪಿದ್ದರು.
Like us on Facebook The New India Times
POPULAR STORIES :
ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾವು..!
2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!