103ವರ್ಷದ ಅಜ್ಜಿಗೆ ಗ್ರಾಮಸ್ಥರಿಂದ ಮನೆ ಉಡುಗೊರೆ….!

0
124

ಗುಡಿಸಲಲ್ಲಿ ವಾಸವಿದ್ದ 103 ವರ್ಷದ ಅಜ್ಜಿಗೆ ಗ್ರಾಮಸ್ಥರೇ ಸೇರಿ ಮನೆ ಕಟ್ಟಿಕೊಟ್ಟಿದ್ದಾರೆ.
ಉಡುಪಿಯ ಬ್ರಹ್ಮಾವರ ಬಳಿಯ ಕರ್ಜೆ ಗ್ರಾಮದಲ್ಲಿ ವಾಸವಿರುವ ಸರಸಜ್ಜಿ ಗೆ ಬಾಲಕೃಷ್ಣ ಶೆಟ್ಟಿ‌ ಮತ್ತು ಗ್ರಾಮಸ್ಥರು ಮನೆ ನಿರ್ಮಿಸಿಕೊಟ್ಟಿದ್ದಾರೆ.

ಮನೆ ನಿರ್ಮಾಣಕ್ಕೆ ಸುಮಾರು 1.5ಲಕ್ಷ ರೂ ಖರ್ಚಾಗಿದೆ.
ಸರಸಜ್ಜಿ ಸರ್ಕಾರದ ಯಾವುದೇ ಸೌಲಭ್ಯವನ್ನೂ ಸಹ ಪಡೆದಿಲ್ಲ. ಜೊತೆಗೆ ಯಾರ ಬಳಿಯೂ ಕೈ ಚಾಚದೆ ಸ್ವಾಭಿಮಾನದ ಬದುಕು ಕಂಡುಕೊಂಡಿದ್ದಾರೆ.

ಬಹುಕಾಲದಿಂದ ಗುಡಿಸಲಲ್ಲಿ ವಾಸವಿದ್ದ ಇವರಿಗೆ ಗ್ರಾಮಸ್ಥರು ಮನೆ ಕಟ್ಟಿ ಕೊಡುತ್ತೇವೆ ಎಂದರು ಕೇಳಲಿಲ್ಲ. ಬೇಡ ನಾನು ಇಲ್ಲೇ ವಾಸವಿರ್ತೀನಿ ಎಂದಿದ್ದಂತೆ. ಎಲ್ಲರೂ ಸೇರಿ ಮನವೊಲಿಸಿ ಮನೆ ಕಟ್ಟಿಕೊಟ್ಟಿದ್ದಾರೆ.
ಆದಾರ್ ಕಾರ್ಡ್ ,‌ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಯಾವುದೂ ಇಲ್ಲದ ಸರಸಜ್ಜಿ ಅವುಗಳು ನನಗೆ ಬೇಡ ಎನ್ನುತ್ತಿದ್ದಾರೆ.
ಸೌಲಭ್ಯ ಬೇಡ…ಸರ್ಕಾರದ ಯಾವುದೇ ಸೌಲಭ್ಯ ಇಲ್ಲದೆ ಇಷ್ಟು ವರ್ಷ ಬದುಕಿಲ್ವಾ? ಎಂದು ಪ್ರಶ್ನಿಸುತ್ತಾರೆ ಸರಸಜ್ಜಿ.

LEAVE A REPLY

Please enter your comment!
Please enter your name here