ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

1
656

ಪರ್ಸ್ ನಲ್ಲಿ ದುಡ್ಡು ಖಾಲಿಯಾದ ಕೂಡಲೇ, ಮನೆಯ ಹಿತ್ತಲಿನಲ್ಲೊಂದು ದುಡ್ಡಿನ ಮರವಿದ್ದಿದ್ದರೆ, ಅದಕ್ಕೆ ದಿನವೂ ಹಣ್ಣುಗಳನ್ನು ಬಿಡುವ ರೀತಿ ಹಣವನ್ನು ಬಿಡುವ ಶಕ್ತಿಯಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಳ್ಳುವ ಎಷ್ಟೋ ಮಂದಿ ಕಾಣಸಿಗುತ್ತಾರೆ. ಆದರೆ ಇಲ್ಲೊಂದು ಮರವಿದೆ. ಅದಕ್ಕೆ ಹಣದ ಮರ ಎನ್ನುತ್ತಾರೆ. ಆದರೆ ಈ ಮರದಲ್ಲಿ ನೋಟುಗಳ ಬದಲು ಕೇವಲ ಚಿಲ್ಲರೆ ಹಣ ಮಾತ್ರ ಇದೆ.
ಈ ಮಾತು ನೂರಕ್ಕೆ ನೂರರಷ್ಟು ಸತ್ಯ..! ಇಂಗ್ಲೆಂಡ್ ದೇಶದ ಸ್ಕಾಟಿಶ್ ದ್ವೀಪದ ಪೀಕ್ ಎಂಬ ಜಿಲ್ಲೆಯಲ್ಲಿ ಈ ಮರವಿದೆ. ಈ ಮರಕ್ಕೆ ವಿಶೇಷ ಶಕ್ತಿಯಿದ್ದು, ನಾಣ್ಯಗಳನ್ನು ಈ ಮರಕ್ಕೆ ಅಂಟಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಮರದಲ್ಲಿ ಹಲವಾರು ವರ್ಷಗಳಿಂದ ನಾಣ್ಯವನ್ನು ಇಡುತ್ತಾ ಬರಲಾಗಿದೆ. ಈ ಮರದಲ್ಲಿ ಲಕ್ಷಕ್ಕೂ ಅಧಿಕ ನಾಣ್ಯಗಳಿವೆ. ತಮ್ಮ ಆಸೆ ಪೂರ್ತಿಯಾಗಬೇಕೆಂಬ ಹಂಬಲದಿಂದ ಬ್ರಿಟನ್ ಜನರು ಈ ಮರದಲ್ಲಿ ನಾಣ್ಯಗಳನ್ನು ಇಡಲು ಆರಂಭಿಸಿದರು.


ಈ ಮರದ ಕತೆ ಆರಂಭವಾಗೋದು 1700 ನೇ ಇಸವಿಯಿಂದ. ಈ ಮರದಲ್ಲಿ ದೇವರು ವಾಸ ಮಾಡುತ್ತಾರೆ ಎಂದು ಎಲ್ಲರ ನಂಬಿಕೆ. ಇಂಗ್ಲೆಂಡ್ ಬಿಟ್ಟು ಅಮೆರಿಕಾದ ಜನ ಸಹ ಈ ಮರದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ತಮ್ಮ ಇಷ್ಟಾರ್ಥಗಳು ಸಿದ್ಧಿಸಬೇಕೆಂಬ ದೃಷ್ಟಿಯಿಂದ ಅಲ್ಲಿನ ಜನರು ಈ ಮರದ ದರ್ಶನ ಪಡೆಯಲು ಬರುತ್ತಿದ್ದರು. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಮರದಲ್ಲಿ ಹಣ ಮರಕ್ಕೆ ಅಂಟಿಸುತ್ತಿದ್ದರು.
ಕ್ರಿಸ್ಮಸ್ ಹಾಗೂ ಬೇರೆ ಹಬ್ಬದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಭೇಟಿ ನೀಡಿ ಖುಷಿಗಾಗಿ ಹಣವನ್ನು ಅಂಟಿಸುತ್ತಿದ್ದರು. ಆದ್ದರಿಂದ ಈ ಮರದಲ್ಲಿ ಬಹಳ ಅಮೂಲ್ಯವಾದ ನಾಣ್ಯಗಳು ಸಹ ದೊರಕಿದೆ. ವಿಶೇಷವೆಂದರೆ ಈ ಮರದ ಮೇಲೆ ವಿವಿಧ ದೇಶಗಳ ನಾಣ್ಯಗಳು ಸಹ ಕಾಣ ಸಿಗುತ್ತದೆ.
ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತಿನಂತೆ ಈ ಮರ ಇದೀಗ ಪ್ರವಾಸಿಗರ ಹಾಟ್ ಫೆವರಿಟ್ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಇಂದಿಗೂ ಹೆಚ್ಚೆಚ್ಚು ಸಂಖ್ಯೆಯ ಜನರು ಆಗಮಿಸಿ ನಾಣ್ಯಗಳನ್ನು ಅಂಟಿಸಿಹೋಗುತ್ತಿದ್ದಾರೆ. ಆದ್ದರಿಂದಲೇ ಈ ಮರ ದುಡ್ಡಿನ ಮರ ಎಂದು ಹೆಸರು ಪಡೆದಿದೆ.

1 COMMENT

LEAVE A REPLY

Please enter your comment!
Please enter your name here