ಬೆಂಗಳೂರಿನ ಕನಕಪಾಳ್ಯ ಅಂದ್ರೆ ರೌಡಿಗಳ ತಾಣ ಎಂದೇ ಕುಖ್ಯಾತವಾಗಿತ್ತು. ಅಲ್ಲಿ ಹುಟ್ಟಿದ ತಪ್ಪಿಗೆ ಆ ತಾಪ ವಜ್ರಮುನಿಯವರನ್ನೂ ತಟ್ಟದೇ ಬಿಡಲಿಲ್ಲ. ಆ ಕಾಲಕ್ಕೆ ಪುಟ್ಟಣ್ಣ ಕಣಗಾಲ್ ಅವರ ಅಣ್ಣ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅಂದ್ರೆ ಬಹುದೊಡ್ಡ ಹೆಸ್ರು. ಮದರಾಸಿನಲ್ಲಿದ್ದ ಅವರು ಬೆಂಗಳೂರಿನ ಜಯನಗರದಲ್ಲಿ ಒಂದು ದಿನ ಉಳಿದುಕೊಂಡಿದ್ರು. ಆಗ ವಜ್ರಮುನಿ ಮತ್ತವರ ಸ್ನೇಹಿತರು ಹೋಯ್ಸಳೇಶ್ವರ ಹೆಸರಿನ ನಾಟಕ ರಚಿಸಿದ್ದರು. ಹೇಗಾದ್ರು ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಬೇಕೆಂದು ಅವರ ಬಳಿ ಹೋದರು. ಮನೆಗೆ ಬಂದ ಗುಂಪನ್ನು ನೋಡಿದ ಪ್ರಭಾಕರ್ ಶಾಸ್ತ್ರಿ, `ಯಾವೂರು’ ಅಂತ ಕೇಳಿದ್ರು. `ಇಲ್ಲೇ ಕನಕಪಾಳ್ಯ’ ಅಂದಿದ್ದೇ, ಪ್ರಭಾಕರ್ ಶಾಸ್ತ್ರಿ, `ತೊಲಗ್ರಯ್ಯಾ…’ ಅಂತ ಅವರ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರು. `ಸ್ವಾಮಿ..’ ಕನಕಪಾಳ್ಯದ ಎಲ್ಲಾ ಹುಡುಗ್ರು ರೌಡಿಗಳಲ್ಲ’ ಅಂತ ಅವರನ್ನು ಒಪ್ಪಿಸುವಲ್ಲಿ ಈ ಹುಡುಗ್ರು ಯಶಸ್ವಿಯಾದರು. ಹೋಯ್ಸಳೇಶ್ವರ ನಾಟಕ ನೋಡಿದ ಮೇಲೆ, ಕಣ್ತುಂಬಿಕೊಂಡ ಪ್ರಭಾಕರ್ ಶಾಸ್ತ್ರಿಗಳು, ಹೇಳಿದ್ದು ಒಂದೇ ಮಾತು `ನನ್ನನ್ನು ಕ್ಷಮಿಸಿ’…! ಮುಂದೇ ಅವರ ನಿರ್ದೇಶನದ ನಾಟಕವೊಂದರಲ್ಲಿ ವಜ್ರಮುನಿ ಅಭಿನಯಿಸಿದರು. ಆ ನಾಟಕದ ಹೆಸರು `ಪ್ರಚಂಡ ರಾವಣ’. ಮುಂದೇ ನಡೆದದ್ದೆಲ್ಲಾ ಇತಿಹಾಸ. ಅದೇಕೋ ವಜ್ರಮುನಿ ನೆನಪಾದರು. ಇಷ್ಟು ಬರೆಯಬೇಕಾಯಿತು. ಅವರ ಬಗ್ಗೆ ಸಂಪೂರ್ಣ ಅಂಕಣವನ್ನು ಶೀಘ್ರದಲ್ಲೇ ನಿರೀಕ್ಷಿಸಿ.
- ರಾ ಚಿಂತನ್
POPULAR STORIES :
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?
ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!