ವಾಕಿಂಗ್, ಜಾಗಿಂಗ್ಗೆ ಸೂಕ್ತ ಸಮಯ ಯಾವುದು? ಚಳಿಗಾಲದಲ್ಲಿ ಈ ತಪ್ಪು ಬೇಡ!
ಚಳಿಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಿಮ್ಮ ವಾಕಿಂಗ್ ಟೈಮಿಂಗ್ಸ್ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಇನ್ನೂ ಉತ್ತಮ.
ಚಳಿಗಾಲದಲ್ಲೂ ಹೆಚ್ಚು ಕಾಲ ನಡೆಯಬೇಕು. ಅದಕ್ಕೆ ಒಳ್ಳೆಯ ಸಮಯವೆಂದರೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ. ಈ ವೇಳೆ ತಾಪಮಾನವು ಬೆಚ್ಚಗಿರುತ್ತದೆ ಮತ್ತು ಸಾಕಷ್ಟು ಹಗಲು ಬೆಳಕು ಇರುತ್ತದೆ. ಹಗಲಿನಲ್ಲಿ ನಡೆಯುವುದರಿಂದ ಅಗತ್ಯವಾದ ವಿಟಮಿನ್ ಡಿ ಸಿಗುತ್ತದೆ. ಚಳಿಗಾಲದ ಅವಧಿಯಲ್ಲಿ ಅನೇಕರು ವಿಟಮಿನ್ ಡಿ ಕೊರತೆ ಎದುರಿಸುತ್ತಾರೆ ಎನ್ನುತ್ತಾರೆ.
ಚಳಿಗಾಲದಲ್ಲಿ ನಡೆಯುವಾಗ ಪದರಗಳ ಬಟ್ಟೆಗಳೊಂದಿಗೆ ಕೈಗವಸುಗಳು ಮತ್ತು ಟೋಪಿಗಳಂತಹ ಬೆಚ್ಚಗಿನ ವಸ್ತುಗಳನ್ನು ಧರಿಸಬೇಕು. ಶೀತವು ಕೆಲವೊಮ್ಮೆ ನಮ್ಮ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.
ತೀವ್ರ ಚಳಿ, ಮಂಜು ಅಥವಾ ಮಂಜುಗಡ್ಡೆಯ ಪರಿಸ್ಥಿತಿಗಳಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಬಾರದು. ಈ ಅವಧಿಯಲ್ಲಿ ಜಾರಿ ಬೀಳುವ ಅಪಾಯ ಹೆಚ್ಚಿರುತ್ತದೆ. ಜೊತೆಗೆ ಉಸಿರಾಟದ ತೊಂದರೆ ಕೂಡ ಹೆಚ್ಚಿರುತ್ತದೆ. ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಹೊಂದಿರೋರು ಜಾಗರೂಕರಾಗಿರಬೇಕು.
ತಂಪಾದ ಗಾಳಿಯು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದರೆ ಒಳಾಂಗಣದಲ್ಲಿ ವ್ಯಾಯಾಮ ಮಾಡುವುದು ಉತ್ತಮ. ಚಳಿಗಾಲದಲ್ಲಿ ಎಚ್ಚರಿಕೆಯಿಂದ ವಾಕಿಂಗ್ ಮಾಡಿದಾಗ ರಿಫ್ರೆಶ್ ಮತ್ತು ಆರೋಗ್ಯಕರ ಚಟುವಟಿಕೆ ನಿಮ್ಮದಾಗಲಿದೆ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮತ್ತು ಸರಿಯಾದ ಸಮಯ ಆರಿಸಿಕೊಳ್ಳುವ ಮೂಲಕ ಚಳಿಗಾಲದಲ್ಲಿ ಆನಂದವನ್ನು ಪಡೆಯಬಹುದು.