ಮೆಂತ್ಯ ಹೊಟ್ಟೆಯ ಸಾಕಷ್ಟು ತೊಂದರೆಗಳನ್ನ ನಿವಾರಿಸುತ್ತೆ . ನಮ್ಮ ಹೊಟ್ಟೆ ಒಳಗಡೆ ಶುದ್ದೀಕರಣ ತುಂಬಾ ಮುಖ್ಯ .
ಅಜೀರ್ಣ , ಗ್ಯಾಸ್ಟ್ರಿಕ್ ನಂತಹ ಹಲವು ಸಮಸ್ಯೆಗಳು ಬಂದಾಗ ನಾವು ಪಟ್ ಅಂತಾ ಮೊರೆ ಹೋಗೊದೆ ಈ ಮೆಂತ್ಯ ಕಾಳಿಗೆ .
ಮೊಳಕೆ ಬರಿಸಿದ ಮಂತ್ಯ ಹೇಗೆ ಪ್ರಯೋಜನಕಾರಿ ?
ಹೌದು , ಮೊಳಕೆ ಕಾಳುಗಳು ದೇಹಕ್ಕೆ ತುಂಬಾ ಉತ್ತಮ . ಅದರಲ್ಲೂ ಮೊಳಕೆ ಮಂತ್ಯ ನಮ್ಮ ದೇಹದ ತೂಕವನ್ನ ಶೀಘ್ರವಾಗಿ ಇಳಿಸಲು ಸಹಾಯ ಮಾಡುತ್ತೆ .
ಅಧ್ಯಯನದ ಪ್ರಕಾರ ಮೊಳಕೆವಡೆದ ಮಂತ್ಯ ಕಾಳುಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಇರುತ್ತವೆ .
ಹೀಗಾಗಿ ಬೆಳಗಿನ ಜಾವ ಮೊಳಕೆವಡೆದ ಮೆಂತ್ಯ ಸೇವನೆಯಿಂದ ನಿಮ್ಮ ತೂಕವನ್ನ ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಆರೋಗ್ಯವಾಗಿಯು ಇರಬಹುದು .