ನಿಮಗೂ ಅತ್ತೆಮಾವನ್ನ ನೋಡಿದ್ರೆ ಆಗಲ್ವಾ..? ಇದನ್ನು ಓದಿ..! ಪತಿರಾಯರೇ…ನೀವೂ ಓದಿ, ನಿಮ್ಮ ಪತ್ನಿಗೂ ಓದಿಹೇಳಿ..!

Date:

ಅವನ ಅಪ್ಪ ಅಮ್ಮ ಅವನನ್ನು ತುಂಬಾ ಪ್ರೀತಿಯಿಂದ ಸಾಕಿದ್ರು.. ಮಗನ ವಿದ್ಯಾಭ್ಯಾಸ, ಖರ್ಚು, ಯಾವುದಕ್ಕೂ ಹಿಂದೆ ಮುಂದೆ ನೋಡ್ತಿರಲಿಲ್ಲ..! ಅವನು ಅಷ್ಟೆ ಅಪ್ಪಮ್ಮನನ್ನು ತುಂಬಾ ಇಷ್ಟ ಪಡ್ತಿದ್ದ.. ದೊಡ್ಡವನಾದ, ಇಂಜಿನಿಯರ್ ಆದ, ಒಳ್ಳೆಯ ಕಂಪನಿ, ಒಳ್ಲೇಯ ಸಂಬಳ ಎಲ್ಲವೂ ಸಿಕ್ತು..! ಮಗನಿಗೆ 27 ವರ್ಷ ವಯಸ್ಸಾಯ್ತು. ಇರೋದೊಬ್ಬನೇ ಮಗ ಅದ್ಧೂರಿಯಾಗಿ ಮದುವೆ ಮಾಡೋ ಸಿದ್ಧತೆ ಶುರುವಾಯ್ತು. ಒಂದಲ್ಲ ಎರಡಲ್ಲ ಅಂತ ಹತ್ತಾರು ಹುಡುಗಿರನ್ನು ನೋಡಿ ಮಗನಿಗೆ ಸರಿಯಾದ ಜೋಡಿ ಅನ್ನೊ ಹಾಗೆ ಒಂದು ಹುಡುಗಿಯನ್ನು ಫೈನಲ್ ಮಾಡಿದ್ರು..! ಯೆಸ್, ಅವಳೇ ನಮ್ಮನೆ ಸೊಸೆ ಅಂತ ಫಿಕ್ಸ್ ಆದ್ರು..! ಅವಳೂ ತುಂಬಾ ಸಂತೋಷವಾಗಿಯೇ ಗಂಡನ ಮನೆಗೆ ಮದುವೆಯಾಗಿ ಬಂದ್ಲು..! ಆದ್ರೆ ಸಂತೋಷ ಹೆಚ್ಚು ದಿನ ಉಳೀಲಿಲ್ಲ..! ಅವಳು ಮನೆಯ ವಿರೋಧ ಪಕ್ಷದ ನಾಯಕಿ ಸ್ಥಾನದಲ್ಲಿ ಕೂತುಬಿಟ್ಲು.. ಅತ್ತೆ ಮಾವನ ಮೇಲೆ ಎಲ್ಲದಕ್ಕೂ ಸಿಡಿಸಿಡಿ ಮಾಡ್ತಿದ್ಲು. ಗಂಡ ಬಂದ ತಕ್ಷಣ ಇಲ್ಲಸಲ್ಲದ್ದನ್ನು ಅವರ ವಿರುದ್ಧ ಹೇಳ್ತಿದ್ಲು..! ಗಂಡನಾದವನಿಗೆ ಹೆಂಡತಿಯ ಪರ ಮಾತಾಡಕ್ಕೂ ಆಗದೇ, ಅತ್ತ ಮಗನಾಗಿ ಅಪ್ಪ ಅಮ್ಮನ ಪರ ಮಾತಾಡೋಕ್ಕೂ ಆಗದೇ ಫುಟ್ ಬಾಲ್ ಆಗಿದ್ದ…ಅವರೂ ಒದೆಯೋರು, ಇವಳೂ ಒದೆಯೋಳು..! ಇವನಿಗೆ ಏನು ಮಾಡ್ಬೇಕು ಅಂತಾನೇ ಗೊತ್ತಾಗಲಿಲ್ಲ..! ಕೊನೆಗೊಂದು ದಿನ ಮನೆ ಬೇರೆ ಮಾಡೋದು ಅಂತ ನಿರ್ಧಾರ ಆಗಿಹೋಯ್ತು..! ಅವನು ಅವಳು, ಅಪ್ಪ ಅಮ್ಮನ ಬಿಟ್ಟು ಹೊರಟೇಬಿಟ್ರು..! ಅವನಿಗೆ ಅಪ್ಪಅಮ್ಮನನ್ನು ಬಿಟ್ಟು ಹೋಗೋಕೆ ಮನಸೇ ಇರಲಿಲ್ಲ, ಆದ್ರೆ ಮಗನ ಸಂಸಾರವಾದ್ರೂ ಸರಿ ಇರಲಿ ಅಂತ ಅಪ್ಪ ಅಮ್ಮನೇ ಕಳಿಸಿಕೊಟ್ರು..!
 ಹೀಗೇ ವರ್ಷಗಳು ಉರುಳ್ತು. ಈ ಟೈಮಲ್ಲಿ ಅವರಿಬ್ಬರಿಗೆ ಒಂದು ಗಂಡು ಮಗುವೂ ಆಯ್ತು. ಈ ಕಡೆ ಹೆಂಡತಿಗೆ ಗೊತ್ತಾಗದಂತೆ ಅಪ್ಪಮ್ಮನನ್ನು ಕದ್ದುಮುಚ್ಚಿ ನೋಡ್ಕೊಂಡ್ ಬರ್ತಿದ್ದ ಮಗ..! ಹೆಂಡತಿಗೆ ಎ‍‍ಷ್ಟೇ ಹೇಳಿದ್ರು ಅವಳು ಯಾವತ್ತೂ ಅತ್ತೆ ಮಾವನನ್ನು ನೋಡೋಕೆ ಹೋಗಲೇ ಇಲ್ಲ..! ಅಪ್ಪ ಅಮ್ಮನನ್ನು ನೊಡೋಕೆ ನೀವೇನಾದ್ರೂ ಹೋದ್ರೆ ಮಗನನ್ನು ಕರ್ಕೊಂಡು ತವರು ಮನೆಗೆ ಹೋಗ್ತೀನಿ ಅಂತ ಹೆದರಿಸೋಳು..! ಮಗನಿಗೆ 4 ವರ್ಷವಾಯ್ತು, ಸ್ಕೂಲಿಗೆ ಸೇರಿಸಿದ್ರು..! ಹೀಗೇ ದಿನಗಳು ಸಾಗ್ತಾ ಇತ್ತು..! ಆಗಾಗ ಕದ್ದುಮುಚ್ಚಿ ಮೊಮ್ಮಗನನ್ನು ಅಜ್ಜಅಜ್ಜಿ ಹತ್ತಿರ ಕರ್ಕೊಂಡು ಹೋಗಿ ಬರ್ತಿದ್ದ ಅಪ್ಪ..! ಮಗ ಸಣ್ಣವನಾದ್ರೂ ಬುದ್ಧಿವಂತ, ಎಲ್ಲವೂ ಅವನಿಗೆ ಅರ್ಥವಾಗ್ತಿತ್ತು..! ಅಜ್ಜಅಜ್ಜಿಯನ್ನು ಮೀಟ್ ಮಾಡೋಕೆ ಅಮ್ಮ ಬಿಡಲ್ಲ ಅನ್ನೋದು ಅವನಿಗೆ ಗೊತ್ತಾಗಿತ್ತು..! ಅವರ ಬಗ್ಗೆ ಯಾವಾಗಲೂ ನೆಗೆಟಿವ್ ಆಗಿ ಮಾತಾಡ್ತಿದ್ದ ಅಮ್ಮನ ಬಗ್ಗೆ ಅವನಿಗೆ ಬೇಜಾರಿತ್ತು..!ಒಂದು ದಿನ ತನ್ನ ನೆಚ್ಚಿನ ಮಾಸ್ಟರ್ ಬಳಿ ಇದೆಲ್ಲವನ್ನೂ ಅವನು ಹೇಳ್ದ. `ಅಪ್ಪಂಗೆ ಅಜ್ಜ ಅಜ್ಜಿ ಅಂದ್ರೆ ಇಷ್ಟ, ಆದ್ರೆ ನಮ್ಮಮ್ಮ ಬಿಡಲ್ಲ, ನಂಗೂ ನಮ್ಮಜ್ಜ ಅಜ್ಜಿ ಜೊತೆ ಇರಬೇಕು ಅಂತ ಆಸೆ. ಆದ್ರೆ ಅಮ್ಮ ಯಾವಾಗ್ಲೂ ಅವರನ್ನು ಬೈತಾ ಇರ್ತಾಳೆ! ಅಪ್ಪ ಅವರನ್ನು ಮೀಟ್ ಆಗೋದು ಸಹ ನಮ್ಮಮ್ಮನಿಗೆ ಇಷ್ಟ ಇಲ್ಲ..!ಅವರನ್ನು ನೋಡ್ಕೊಳೋಕೂ ಬಿಡಲ್ಲ, ಅವರಿಗೆ ಸಹಾಯ ಮಾಡಿದ್ರೆ ನಿನ್ನ ಬಿಟ್ಟು ಹೋಗ್ತೀನಿ ಅಂತ ಅಪ್ಪನಿಗೆ ಹೆದರಿಸ್ತಾಳೆ’ ಅಂತೆಲ್ಲಾ ಹೇಳ್ಕೊಂಡ..! ಅವರ ಮಾಸ್ಟರ್ ಗೆ ವಿಷಯ ಅರ್ಥ ಆಯ್ತು.. ಸರಿ ನೀನು ಹೋಗು, ಆಟ ಆಡ್ಕೊ ಅಂತ ಕಳಿಸಿ ಮಾಸ್ಟರ್ ಒಂದು ಪ್ಲ್ಯಾನ್ ಮಾಡಿದ್ರು..! ಅದು ಅವರಮ್ಮನಿಗೆ ಫೋನ್ ಮಾಡೋ ಪ್ಲ್ಯಾನ್..!
ಮರುದಿನ ಬೆಳಗ್ಗೆ ಆ ಮಗುವಿನ ಅಮ್ಮನಿಗೆ ಫೋನ್ ಬಂತು.
ಮಾಸ್ಟರ್ : ಮೇಡಂ ನಮಸ್ತೆ, ನಾನು ನಿಮ್ಮ ಮಗ ರಾಹುಲ್ ನ ಸ್ಕೂಲ್ ಮಾಸ್ಟರ್. ಅವನ ಬಗ್ಗೆ ಒಂದಷ್ಟು ಮಾತಾಡ್ಬೋದಾ..? ನೀವು ಫೋನಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತೆ.
ಅಮ್ಮ : ನಮಸ್ತೆ ಸರ್, ಓಕೆ ಹೇಳಿ.
ಮಾಸ್ಟರ್ : ನಿಮ್ಮ ಫ್ಯಾಮಿಲೀಲಿ ಎಷ್ಟು ಜನ ಇದೀರಿ..?
ಅಮ್ಮ : ಮೂರು ಜನ
ಮಾಸ್ಟರ್ : ನಿಮ್ಮ ಮಗ ಮುಂದೆ ಏನಾಗ್ಬೇಕು ಅಂತ ಅನ್ಕೊಂಡಿದೀರಿ..?
ಅಮ್ಮ : ಅವನು ಡಾಕ್ಟರ್ ಆಗಬೇಕು ಅಂತ ನಮ್ಮ ಆಸೆ. ಅವನಿಗೆ ಏನಿಷ್ಟಾನೋ ಗೊತ್ತಿಲ್ಲ..!
ಮಾಸ್ಟರ್ : ನೀವು ಅವನಿಗೆ ಲೈಫಲ್ಲಿ ಏನು ಬೇಕಾದ್ರೂ ಕೊಡೋಕೆ ರೆಡಿ ಇದೀರಾ..?
ಅಮ್ಮ : ಒಬ್ಬನೇ ಮಗ, ಅವನು ಏನು ಕೇಳಿದ್ರೂ ನಾವು ಇಲ್ಲ ಅನ್ನಲ್ಲ..!
ಮಾಸ್ಟರ್ : ನೀವು ನಿಮ್ಮ ಮಗನ್ನು ಎಷ್ಟು ಪ್ರೀತಿಸ್ತೀರಿ..?
ಅಮ್ಮ : ತುಂಬಾ ಪ್ರೀತಿಸ್ತೀನಿ, ನನ್ನ ಮಗನೆ ನನ್ನ ಪ್ರಪಂಚ..!
ಮಾಸ್ಟರ್ : ಮುಂದೆ ಅವನಿಂದ ನೀವು ಏನು ನಿರೀಕ್ಷೆ ಮಾಡ್ತೀರಿ..?
ಅಮ್ಮ : ನಿರೀಕ್ಷೆ ಅಂದ್ರೆ..?
ಮಾಸ್ಟರ್ : ಅಂದ್ರೆ, ಅವನು ಮತ್ತು ನೀವು… ಅಪ್ಪಅಮ್ಮನಿಗೆ ಮಗನಾಗಿ ಏನು ಮಾಡ್ಬೇಕು ಅಂತ..!
ಅಮ್ಮ : ಎಲ್ಲರ ಹಾಗೇ ಅವನು ಚೆನ್ನಾಗಿ ಬೆಳೆದ ಮೇಲೆ ನಮ್ಮನ್ನು ಚೆನ್ನಾಗಿ ನೋಡ್ಕೋಬೇಕು, ಅವನ ಹೆಂಡತಿ ಮಕ್ಕಳ ಜೊತೆ ನಾವೆಲ್ಲಾ ಖುಷಿಯಾಗಿರಬೇಕು, ನಾವು ಅವನನ್ನು ಪ್ರೀತಿಸೋ ಹಾಗೆ ಮುಂದೆ ಅವನೂ ನಮ್ಮನ್ನು ಪ್ರೀತಿಸಬೇಕು..!
ಮಾಸ್ಟರ್ : ಅವನು ಮದುವೆ ಆಗೋದು, ಮಕ್ಕಳಾಗೋದು ಎಲ್ಲಾ ಓಕೆ. ಆದ್ರೆ ನಿಮ್ಮನ್ನು ಚೆನ್ನಾಗಿ ನೋಡ್ಕೊಳೋದು ಸಾಧ್ಯವೇ ಇಲ್ಲ..!
ಅಮ್ಮ : (ಕೋಪದಿಂದ) ಏನು..? ತಮಾಷೆ ಮಾಡ್ತಿದಿರಾ..? ಅವನು ಹೆಂಡತಿ ಮಕ್ಕಳು ನೋಡ್ಕೊಂಡ್ರೆ ನಮ್ಮನ್ಯಾಕೆ ಪ್ರೀತಿಯಿಂದ ನೋಡ್ಕೊಳೋಕೆ ಆಗಲ್ಲ..! ಅವನನ್ನು ಅಷ್ಟು ಕಷ್ಟಪಟ್ಟು ಸಾಕೋದ್ಯಾಕೆ..? ಮಗನಾಗಿ ಅಪ್ಪಅಮ್ಮನನ್ನು ನೋಡ್ಕೊಳೋದು ಅವನ ಕರ್ತವ್ಯ..!
ಮಾಸ್ಟರ್ : ಅದೊಂದು ಸಾಧ್ಯವೇ ಇಲ್ಲ..! ಯವುದೇ ಕಾರಣಕ್ಕೂ ನಿಮ್ಮ ಮಗ, ಅವನ ಅಪ್ಪಅಮ್ಮನನ್ನು ಚೆನ್ನಾಗಿ ನೋಡ್ಕೊಳೋದಿಲ್ಲ.! ಅವನು ಅವನ ಹೆಂಡತಿ ಜೊತೆ ಬೇರೆ ಇತರ್ಾನೆ..! ಹಾಗೇ ನೀವು ಬೇರೆ ಮನೆಯಲ್ಲೇ ಇರಬೇಕು..!
ಅಮ್ಮ : ಶಟ್ ಅಪ್, ನಾನ್ ಸೆನ್ಸ್ ಮಾತಾಡ್ಬೇಡಿ..! ನನ್ನ ಮಗನ ಬಗ್ಗೆ ನಮಗೆ ಗೊತ್ತು..!
ಮಾಸ್ಟರ್ : ಹಾಗಾದ್ರೆ ನಿಮ್ಮ ಪತಿಯ ಅಪ್ಪಅಮ್ಮನಿಗೆ ಅವರ ಮಗನ ಬಗ್ಗೆ ಗೊತ್ತಿರಲಿಲ್ವಾ..? ಅವರೂ ಇಂತದ್ದೇ ನಿರೀಕ್ಷೆಗಳನ್ನು ನಿಮ್ಮ ಪತಿಯಿಂದ ಮಾಡಿರಲ್ವಾ..? ಅವರು ಇವತ್ತು ಇಬ್ಬರೇ ಬೇರೆಯಾಗಿ ಜೀವನ ನಡೆಸ್ತಿರೋದು ಸರೀನಾ..? ಮಗನನ್ನು, ಮೊಮ್ಮಗನನ್ನು ದೂರ ಮಾಡಿರೋ ನೀವು ಇದನ್ನೆಲ್ಲಾ ಹೆಗೆ ನಿರೀಕ್ಷೆ ಮಾಡ್ತೀರಿ…?
ಅಮ್ಮ : ( ಆ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ, ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು ಅವಳು, ತಪ್ಪಿನ ಅರಿವಾಗಿತ್ತು) ನನ್ನಿಂದ ತಪ್ಪಾಗಿದೆ, ಸಾರಿ ಅಂತ ಹೇಳಿ ಫೋನ್ ಇಟ್ಟುಬಿಟ್ಲು..!
ಸಂಜೆ ಮಗ ಸ್ಕೂಲ್ ಮುಗಿಸಿ ಮನೆಗೆ ಬಂದ… ಅಮ್ಮ ಇನ್ನೂ ಕಣ್ಣೀರಲ್ಲೇ ಮುಳುಗಿದ್ಲು..! ಮಗನನ್ನು ನೋಡಿ ಅಪ್ಪಿ ಮುದ್ದಾಡಿದ್ಲು..! ಅಷ್ಟು ಹೊತ್ತಿಗೆ ಗಂಡನೂ ಬಂದ. ಅವನನ್ನು ಅಪ್ಪಿದವಳೇ, ` ಐ ಆಮ್ ರಿಯಲಿ ಸಾರಿ, ಪ್ಲೀಸ್ ಕ್ಷಮಿಸಿಬಿಡಿ. ನಿಮ್ಮ ಅಪ್ಪಅಮ್ಮನನ್ನು ಇಲ್ಲಿಗೇ ಕರ್ಕೊಂಡ್ ಬನ್ನಿ, ಇಲ್ಲ ಅಂದ್ರೆ ನಾವೇ ಅವರಿದ್ದಲ್ಲಿಗೆ ಹೋಗೋಣ. ಇನ್ನು ಮುಂದೆ ಅವರ ಜೊತೆಗೇ ಇರೋಣ..! ನಂಗೆ ನನ್ನ ತಪ್ಪು ಏನು ಅಂತ ಗೊತ್ತಾಗಿದೆ ಅಂತ ಬಿಕ್ಕಿಬಿಕ್ಕಿ ಅತ್ತಳು..!
ಇವತ್ತು ಅಪ್ಪ ಅಮ್ಮ, ಮಗ ಸೊಸೆ, ಮೊಮ್ಮಗ ಎಲ್ಲಾ ಜೊತೆಯಾಗಿದ್ದಾರೆ.. ಖುಷಿಯಾಗಿದ್ದಾರೆ..! ಅದೊಂದು ಹ್ಯಾಪಿ ಫ್ಯಾಮಿಲಿ..! ಅವಳೀಗೆ ಅತ್ತೆಮಾವನನ್ನು ಅಮ್ಮ, ಅಪ್ಪ ಅಂತ ಕರೀತಾಳೆ..!
ಇದು ಎಷ್ಟೋ ಸಂಸಾರದ ಕಥೆ..! ಆದ್ರೆ ಕ್ಲೈಮ್ಯಾಕ್ಸ್ ಹಾಗಿರಲ್ಲ ಅಷ್ಟೆ..! ಇದನ್ನು ಓದಿದ ಮೇಲಾದ್ರೂ ಹಾಗಿರೋ ಸಂಸಾರಗಳು ಹೀಗಾಗ್ಲಿ..! ಒಳ್ಳೆಯ ಸೊಸೆ ಮನೆಯ ಸೌಭಾಗ್ಯಲಕ್ಷ್ಮಿ..! ಅವಳು ಸರಿ ಇದ್ರೆ ಇಡೀ ಸಂಸಾರವೇ ಸೂಪರ್ರೋ ಸೂಪರ್..!
– ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...