ಅವನು ತಪ್ಪೇ ಮಾಡದೆ ಅತ್ಯಾಚಾರ ಕೇಸ್‍ಗೆ ಒಳಗಾದ, ಆದರೆ ತನ್ನ ಗಂಡನ ಮುಗ್ದತೆಯನ್ನು ಸಾಬಿತು ಪಡಿಸಿದಳು ಪತ್ನಿ..!

1
46

ಪ್ರತೀ ದಿನವೂ ನಾವು ಮಾಧ್ಯಮದಲ್ಲಿ ಅಥವಾ ಪತ್ರಿಕೆಗಳಲ್ಲಿ ಮಹಿಳೆಯ ಬಗ್ಗೇಯೇ ಹೆಚ್ಚು ಸುದ್ದಿಗಳನ್ನ ಓದ್ತಾ ಇರ್ತೇವೆ. ಮಹಿಳೆಯರ ಮೇಲೆ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಎಂಬ ಸುದ್ದಿ ಪ್ರತೀ ದಿನವೂ ಆಗ್ತಾ ಇರೋದನ್ನ ನಾವು ನೋಡ್ತೇವೆ. ಆದ್ರೆ ಪುರುಷರ ಕುರಿತಾದ ಸುದ್ದಿಗಳುನ್ನ ನಾವು ಓದಿರೋದು ಅತೀ ವಿರಳ. ಆದರೆ ನಾವಿಲ್ಲಿ ಹೇಳೋಕೆ ಹೊರಟಿದ್ದು ತಾನು ಮಾಡದೇ ಇರುವ ಅತ್ಯಾಚಾರಕ್ಕಾಗಿ ಕಾನೂನಿನ ಪ್ರಕಾರವಾಗಿ ಶಿಕ್ಷೆ ಅನುಭವಿಸಿದ ಓರ್ವ ಪುರುಷನ ಬಗ್ಗೆ. ಈ ಘಟನೆ ನಡೆದದ್ದು ಪಾಣಿಪತ್‍ನಲ್ಲಿ. ವಿಶೇಷ ಏನಪ್ಪಾ ಅಂದ್ರೆ ತನ್ನ ಗಂಡ ನಿರಪರಾಧಿ ಎಂದು ಕಾನೂನಿನ ಮೂಲಕವಾಗಿಯೇ ಗೆದ್ದ ಓರ್ವ ಪತ್ನಿಯ ಸಾಹಸ ನಿಜಕ್ಕೂ ಶ್ಲಾಘನೀಯ.
ಹೌದು.. ಹೋಮ್‍ಗಾರ್ಡ್ ಅಗಿ ಕಾರ್ಯ ನಿರ್ವಹಿಸುತ್ತಾ ಇದ್ದ ವಿಜೇಂದ್ರ ಎಂಬಾತ ದೆಹಲಿ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿಯಲ್ಲಿ ಶಿಕ್ಷೆ ಅನುಭವಿಸಿದ್ದ. ಆದರೆ ತನ್ನ ಗಂಡ ನಿರಪರಾಧಿ ಎಂದು ಸಾಬೀತು ಪಡಿಸಿದ ಪತ್ನಿ ಕೊನೆಗೂ 6 ತಿಂಗಳ ಬಳಿಕ ತನ್ನ ಗಂಡನನ್ನು ಬಿಡುಗಡೆಗೊಳಿಸಿದ್ದಾಳೆ.
ಪಾಣಿಪತ್‍ನಲ್ಲಿ ಹೋಮ್‍ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜೇಂದ್ರ ಅಕ್ಟೋಬರ್ 16, 2013 ರಂದು ಓರ್ವ ಅಮಾಯಕ ಮಹಿಳೆಯನ್ನು ಕಿಡ್ನಾಪ್ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿ ವಿಜೇಂದ್ರನನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಪ್ರಕರಣ ಕುರಿತಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಆಪಾಧಿತನ ಮೋಬೈಲ್ ಸಿಗ್ನಲ್ ಕೂಡ ಅಂದು ದೆಹಲಿಯಲ್ಲಿಯ ಸರೋಜಿ ನಗರ್‍ನಲ್ಲಿರೋದನ್ನ ತೋರಿಸಿತ್ತು. ಆದರೆ ಅಂದು ವಿಜೇಂದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬರುತ್ತೆ. ಇದರಿಂದಾಗಿ ಪೊಲೀಸರಿಗೆ ವಿಜೇಂದ್ರ ಅತ್ಯಾಚಾರ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಕಂಪ್ಲೆಂಟ್ ಕೊಟ್ಟ ಮಹಿಳೆಯ ಮೇಲೆ ಪೊಲೀಸರಿಗೆ ಸಂಶಯ ವ್ಯಕ್ತವಾಗ ತೊಡಗುತ್ತದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ಬಯಲಾಗಿದ್ದು ಕಂಪ್ಲೆಂಟ್ ಕೊಟ್ಟ ಮಹಿಳೆಯ ವಿರುದ್ದವೇ ಪೊಲೀಸರು ಐ.ಪಿ.ಸಿ ಸೆಕ್ಷನ್ 182ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ವಿಜೇಂದ್ರನ ಮೇಲೆ ಹೂಡಲಾಗಿದ್ದ ಎಲ್ಲಾ ಮೊಕದ್ದಮೆಗಳನ್ನು ವಾಪಾಸ್ಸು ತೆಗೆದುಕೊಂಡ ಪೊಲೀಸರು ಆತ ನಿರಪರಾಧಿ ಎಂದು ಘೋಷಿಸಿದರು.
ಇಲ್ಲಿ ರಿಯಲ್ ಹೀರೋ ವಿಜೇಂದ್ನ ಪತ್ನಿ.. ತನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿದಿದ್ದ ಆತನ ಪತ್ನಿ, ಕಾನೂನು ಹೋರಾಟ ನಡೆಸಿದ್ದಾಳೆ. ಅಷ್ಟೇ ಅಲ್ಲದೇ ಗಂಡನಿಗೆ ಬೆನ್ನೆಲುಬಾಗಿ ನಿಂತಿದ್ದಳು. ಇದೇ ಆರು ತಿಂಗಳ ಹಿಂದೆ ಆಕೆಗೆ ಹಣ ನೀಡುವಂತೆ ಎರಡು ಬಾರಿ ಬ್ಲಾಕ್ ಮೇಲ್ ಬಂದಿವೆ. ಹಣ ನೀಡದಿದ್ದರೆ ಮುಂದಿನ ಪರಿಣಾಮಕ್ಕೆ ನೀವೆ ಹೊಣೆ ಎಂದು ಒಂದೆರಡು ಬಾರಿ ಬೆದರಿಕೆಯೂ ಹಾಕಿದ್ದಾರೆ. ಇದರಿಂದ ತನ್ನ ಗಂಡ ಸಾಕಷ್ಟು ಕುಗ್ಗಿ ಹೋಗಿದ್ದರು. ಹಣ ನೀಡಲು ನಿರಾಕರಿಸದಿದದ್ದಾಗ ಗಂಡನ ಮೇಲೆ ಈ ರೀತಿಯ ಆರೋಪ ಬಂದಿದೆ. ಅವರು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ ಎಂಬ ಸತ್ಯಾ ಸತ್ಯತೆಯನ್ನು ಎಸ್‍ಪಿ ಸತೀಶ್ ಬಾಲನ್ ಬಳಿ ಹೇಳಿಕೊಂಡಾಗ ವಿಜೇಂದ್ರ ತಪ್ಪಿತಸ್ಥ ಅಲ್ಲ ಎಂಬುದು ತಿಳಿದ ಅವರಿಗೆ ಪ್ರಕರಣ ಕುರಿತು ಮತ್ತೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದರು.
ಅದಾದ ಕೆಲವು ದಿನಗಳ ಬಳಿಕ ನ್ಯಾಯಾಲಯದಲ್ಲಿ ವಿಜೇಂದ್ರರ ಪರವಾಗಿ ನ್ಯಾಯ ದೊರಕಿದ್ದು. ವಿಜೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸೀಮಾ ಸಿನ್ಹಾಲ್ ಅವರು ಆದೇಶ ನೀಡಿದ್ದರು. ಅಲ್ಲದೇ ಯಾವುದೇ ತಪ್ಪನ್ನು ಮಾಡದೇ ಪೊಲೀಸರ ಅಸಂಬದ್ದ ತನಿಖೆಯಿಂದ ಸುಮಾರು ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿದ ಈತನಿಗೆ ಪರಿಹಾರವಾಗಿ 5 ಲಕ್ಷ ರೂ. ಹಣವನ್ನು ಪಾವತಿ ಮಾಡಬೇಕೆಂದು ಕೋರ್ಟ್ ಆದೇಶ ಹೊರಡಿಸುತ್ತದೆ.
ಇನ್ನು ತನ್ನ ಗಂಡನನ್ನು ಶಿಕ್ಷೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಪತ್ನಿ ಮಾಡಿದ ಕಾರ್ಯವನ್ನು ಇಡೀ ಪಾಣಿಪತ್‍ನ ಕಲ್ಕಾ ಗ್ರಾಮದ ಜನರೆಲ್ಲರೂ ಆಕೆಯನ್ನು ಹೊಗಳಿದ್ದಾರೆ. ಇದೀಗ ವಿಜೇಂದ್ರ ತನ್ನ ಮಡದಿ, ಮಕ್ಕಳು ಹಾಗೂ ಪೋಷಕರೊಂದಿಗೆ ಸುಖಕರ ಜೀವನ ನಡೆಸುತ್ತಿದ್ದಾನೆ.

Like us on Facebook  The New India Times

POPULAR  STORIES :

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

1 COMMENT

LEAVE A REPLY

Please enter your comment!
Please enter your name here