ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

0
53

ನಿರ್ಜಲಿಕರಣದ ಸಮಸ್ಯೆಯಿಂದಾಗಿ ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ತಮಿಳುನಾಡು ಸಿಎಂ ಜಯಲಲಿತಾ ಅವರು ಈಗ ಹೇಗಿದ್ದಾರೆ? ಅವರ ಆರೋಗ್ಯದ ಕುರಿತು ಹರಿದಾಡುತ್ತಿರುವ ಊಹಾಪೋಹಗಳು ಎಷ್ಟು ಸತ್ಯ ಎಷ್ಟು ಸುಳ್ಳು? ಇಲ್ಲಿದೆ ನೋಡಿ ನಮ್ಮ ಕಂಪ್ಲೀಟ್ ಅನಾಲಿಸಿಸ್.
1. ಜಯಾಲಲಿತಾ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ?
ಕಾವೇರಿ ನೀರು ಹಂಚಿಕೆಯ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ಭುಗಿಲೆದ್ದಿರುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಅಚಾನ್ನಾಕಾಗಿ ಒಂದು ಸುದ್ದಿ ಬರುತ್ತೆ. ಅದೇ ಜಯಲಲಿತಾ ಅವರ ಆರೋಗ್ಯದ ಕುರಿತು. ಸುದ್ದಿಮೂಲಗಳ ಪ್ರಕಾರ ಜಯಲಲಿತಾ ಅವರು ನಿರ್ಜಲಿಕರಣ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನೋದು.

2. ಅವರ ಆರೋಗ್ಯದ ಕುರಿತಾಗಿ ಇಷ್ಟೊಂದು ಊಹಾಪೂಹಗಳು ಎದ್ದಿರೋಕೆ ಕಾರಣವೇನು?
ಜಯಲಲಿತಾ ಅವರ ಆರೋಗ್ಯದ ಕುರಿತಾಗಿ ಹಬ್ಬುವ ಊಹಾಪೂಹಗಳಿಗೆ ಒಂದು ನಿರ್ದಿಷ್ಟ ಕಾರಣವಿದೆ. ಅದೇನಪ್ಪಾ ಅಂದ್ರೆ ಆಸ್ಪತ್ರೆಗೆ ದಾಖಲಾಗಿದ್ದ ದಿನದಿಂದಲೂ ಪಕ್ಷದ ನಾಯಕರು ಜಯಾ ಆರೋಗ್ಯ ದಿನೇ ದಿನೇ ಸುಧಾರಿಸುತ್ತಿದೆ ಎಂದು ಹೇಳುತ್ತಿದೆಯಾದರೂ ಬಹಿರಂಗವಾಗಿ ಅವರ ಮುಖದರ್ಶನವಾಗಿಲ್ಲ ಹೀಗಾಗಿ ನಿರ್ಜಲಿಕರಣದ ಸಮಸ್ಯೆಯಿಂದ ಬಳಲುತ್ತಿದ್ದೇ ಆಗಿದ್ದಲ್ಲಿ ಒಂದು ವಾರಗಳವರೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗೋ ಅಗ್ಯವಿರಲಿಲ್ಲ.

3. ಅಪೋಲೋ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಬ್ಬಯ್ಯ ವಿಶ್ವನಾಥನ್ ನೀಡಿರೋ ಪ್ರತಿಯಲ್ಲೇನಿದೆ?
ಅಮ್ಮಾ ಅವರ ಆರೋಗ್ಯದ ಕುರಿತು ಗಾಸಿಪ್‍ಗಳು ಎಲ್ಲೆಡೆ ಶುರುವಾಗುತ್ತಿದ್ದಂತೆ ಸಿಎಂ ದಾಖಲಾಗಿರುವ ಅಪೋಲೋ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಬ್ಬಯ್ಯ ವಿಶ್ವನಾಥನ್ ಅವರ ಆರೋಗ್ಯದ ಕುರಿತಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಅವರು ಇದರ ಕುರಿತಾಗಿ ಪ್ರೆಸ್ ಮೀಟ್ ಕೂಡ ಮಾಡಿದ್ದು, ಇದರಲ್ಲಿ ಜಯಲಲಿತಾ ಅವರ ಆರೋಗ್ಯ ಸುಧಾರಿಸುತ್ತಿದೆ, ಅವರಿಗೆ ಕೆಲ ದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಕೆಲ ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಉಲ್ಲೇಖಿಸಿದ್ದಾರೆ.

4. ಡಿಲೀಟ್ ಮಾಡಿದ್ದಾರಾ ಆಸ್ಪತ್ರೆಯ ಸಿಸಿಟಿವಿ ಫೂಟೇಜ್‍ಗಳು?
ಜಯಲಲಿತಾ ಅವರ ಆರೋಗ್ಯದ ಕುರಿತಾಗಿ ಖುದ್ದು ಅಪೋಲೋ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಬ್ಬಯ್ಯ ವಿಶ್ವನಾಥನ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದರೂ ಕೂಡ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಅವರ ಫೋಟೋವನ್ನಾಗಲೀ ಅಥವಾ ವಿಡಿಯೋವನ್ನಾಗಲೀ ಯಾರಿಗೂ ಕೊಡುತ್ತಿಲ್ಲ. ಜತೆಗೆ ವೈದ್ಯರ ಹೇಳಿಕೆ ಬಿಟ್ಟು ಬೇರೇನೂ ಮಾಹಿತಿ ಸಿಗುತ್ತಿಲ್ಲ. ಇವುಗಳನ್ನು ಗಮನಿಸಿದಾಗ ಜಯಲಲಿತಾ ಆರೋಗ್ಯದ ಸಮಸ್ಯೆ ಗಂಭೀರವಾಗಬಹುದು ಎಂಬ ಅನುಮಾನ ಮೂಡಿದೆ. ಇದಲ್ಲದೇ ಅಪೋಲೋ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ ಎಂಬ ಆರೋಪ ಈಗ ಎಲ್ಲೆಡೆ ಕೇಳಿ ಬಂದಿದೆ.

5. ಸಿಂಗಪೂರ ಆಸ್ಪತ್ರೆಗೆ ಅಮ್ಮಾ ಅವರನ್ನು ಯಾಕೆ ಕರೆದೊಯ್ಯಲಿಲ್ಲ?
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಪೂರಕ್ಕೆ ಕರೆದೊಯ್ಯಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ಮರುದಿನ ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ. ಸರಸ್ವತಿ ಅವರು ಜಯಲಲಿತಾ ಅವರನ್ನು ಸಿಂಗಪೂರಕ್ಕೆ ಕರೆದೊಯ್ಯುತ್ತಿಲ್ಲ ಇವುಗಳು ಬರಿ ವದಂತಿಗಳಷ್ಟೇ. ಅವರು ಶೀರ್ಘವೇ ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಆದ್ರೆ ಈ ನಡೆ ಸ್ವಲ್ಪ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

6. ಅಷ್ಟಕ್ಕೂ ಆ ಗೊಂದಲಗಳಿಗೆ ಮುಖ್ಯ ಕಾರಣವಾದರೂ ಏನು?
ನಾವು ಈ ಪ್ರಶ್ನೆಗೆ ಉತ್ತರಿಸೋಕೂ ಮೊದಲು ಒಂದು ವಿಚಾರವನ್ನು ಹೇಳುತ್ತೇವೆ ಕೇಳಿ. ಅಮ್ಮಾ ನಿರ್ಜಲಿಕರಣ ಸಮಸ್ಯೆಯಿಂದ ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸಂಗತಿ ಗೊತ್ತಾಗಿತ್ತು. ವೈದ್ಯಕೀಯ ಟರ್ಮ್‍ನಲ್ಲಿ ನಿರ್ಜಲಿಕರಣ ಅಷ್ಟೊಂದು ದೊಡ್ಡ ಸಮಸ್ಯೆ ಏನಲ್ಲ. ಅಬ್ಬಬ್ಬಾ ಅಂದ್ರೂ ಎರಡೋ ಅಥವಾ ಮೂರು ದಿನಗಳಲ್ಲಿ ವಾಸಿಯಾಗುವಂತಹದ್ದು. ಅಮ್ಮಾ ಇನ್ ಕೇಸ್ ಇದೇ ಸಮಸ್ಯೆಯಿಂದ ಬಳಲುತ್ತಿದ್ದೇ ಆಗಿದ್ದಲ್ಲಿ ಒಂದು ವಾರಕ್ಕೂ ಹೆಚ್ಚಿನ ಅವಧಿಯವರೆಗೆ ಆಸ್ಪತ್ರೆಯಲ್ಲೇ ತಂಗಿರೋದು ಯಾಕೆ? ಮಾಧ್ಯಮ ಪ್ರತಿನಿಧಿಗಳಿಗೆ ಅಥವಾ ಇನ್ಯಾರಿಗೋ ಭೇಟಿ ನೀಡೋಕೆ ಯಾಕೆ ಅವಕಾಶ ನೀಡಲಿಲ್ಲ? ಈ ಎಲ್ಲಾ ಸೂಕ್ಷ್ಮ ವಿಚಾರಗಳು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿವೆ.

7. ಅಮ್ಮನ ಕಿಡ್ನಿಗಳು ಕೆಲಸ ಮಾಡ್ತಾ ಇಲ್ವಾ? ಅವರು ಮಾಡಿಕೊಂಡಿದ್ದಾರಾ ಕಿಡ್ನಿ ಟ್ರ್ಯಾನ್ಸ್‍ಪ್ಲಾಂಟೇಷನ್?
ಸಾಮಾನ್ಯವಾಗಿ ವೈದ್ಯಕೀಯ ಆ್ಯಂಗಲ್‍ನಲ್ಲಿ ನೋಡೋದಾದ್ರೆ ಯಾವುದೇ ವ್ಯಕ್ತಿಯ ಕಿಡ್ನಿಗಳು ಫೇಲ್ ಆಗಿದ್ದಲ್ಲಿ ಹೆಚ್ಚು ದಿನಗಳವರೆಗೆ ಬದುಕೋದು ಕಷ್ಟ. ಅವರು ಬದುಕಬೇಕಾದ್ರೆ ಅವರ ದೇಹಕ್ಕೆ ಒಗ್ಗಿಕೊಳ್ಳೋ ಸೂಕ್ತ ರಕ್ತ ಗುಂಪು ಹೊಂದಿರುವ ಕಿಡ್ನಿ ಅತ್ಯಾವಶ್ಯಕ. ಹಾಗೇ ಅವರು ನಿರಂತರ ವೈದ್ಯಕೀಯ ತಪಾಸಣೆಗೊಳಗಾಗುತ್ತಿರಲೇ ಇರಬೇಕು. ಇಷ್ಟೆಲ್ಲಾ ಎಚ್ಚರಿಕೆ ವಹಿಸಿದ್ರೂ ಕೂಡ ವ್ಯಕ್ತಿಗಳು ಹೆಚ್ಚು ದಿನಗಳವರೆಗೆ ಬದುಕುಳಿಯೋದು ಕಷ್ಟ. ಜಯಾ ಕೂಡ ಕಳೆದ ವರ್ಷವೇ ಕಿಡ್ನಿ ಟ್ರ್ಯಾನ್ಸ್‍ಪ್ಲಾಂಟೇಷನ್‍ಗೆ ಒಳಗಾಗಿದ್ದರು ಎಂಬ ಸುದ್ದಿಯಿದೆ. ಆದ್ರೆ ಇದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.

8. ಇವರು ಜೈಲಿನಲ್ಲಿದ್ದಾಗ ಪ್ರತಿ ಎರಡು ಗಂಟೆಗಳಿಗೊಮ್ಮೆ ಚಿಕಿತ್ಸೆ ನೀಡೋ ಅಗತ್ಯವೇನಿತ್ತು?
ಅಕ್ರಮ ಆಸ್ತಿ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಪಾಲಾಗಿದ್ದ ಜಯಲಲಿತಾ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಗಳ ಕೊಠಡಿಯಲ್ಲೇ ಇಟ್ಟಿದ್ದರೂ ಕೂಡ ಇವರನ್ನು ಪ್ರತಿ 2 ಗಂಟೆಗಳಿಗೊಮ್ಮೆ ನುರಿತ ವೈದ್ಯರಿಂದ ತಪಾಸಣೆಗೊಳಪಡುತ್ತಿದ್ದರು. ಅಮ್ಮನಿಗೆ ಮೊದಲೇ ಬೆನ್ನುನೋವು, ಡಯಾಬಿಟೀಸ್, ರಕ್ತದೊತ್ತಡ ಇರೋ ಕಾರಣ ಅವರು ತೆಗೆದುಕೊಳ್ತಾ ಇದ್ದ ಔಷಧಿಗಳ ಜೊತೆಗೆ ಪರಿಣಿತ ಆಸ್ಪತ್ರೆಯ ತಜ್ಞರು ಇವರನ್ನು ಶುಶ್ರೂಷೆ ಮಾಡ್ತಾ ಇದ್ರು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದ್ರೆ ಅವರಿಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಟ್ರೀಟ್ಮೆಂಟ್ ಕೊಡೋ ಅಗತ್ಯವಾದ್ರೂ ಏನಿತ್ತು? ಇದಕ್ಕೆ ಆನ್ಸರ್ ನಮಗೆ ಸಿಕ್ಕಿಲ್ಲ.

9. ಕಳೆದ ವರ್ಷವೇ ಲೀಕ್ ಆಗಿತ್ತಾ ಅಮ್ಮ ಅನಾರೋಗ್ಯ ವಿಷಯ?
ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದ ಕುರಿತಾಗಿ ಮೊದಲು ವರದಿ ಮಾಡಿದ್ದೇ ಆನ್ಲೈನ್ ಪೋರ್ಟ್‍ಲ್ ರೆಡಿಫ್ ಮೇಲ್ ಡಾಟ್ ಕಾಂ. ಕಳೆದ ವರ್ಷ ಜುಲೈ 10ರಂದು ಈ ಪ್ರಸಿದ್ಧ ಪೋರ್ಟಲ್ ಜಯಾ ಆರೋಗ್ಯದ ಕುರಿತು ಎರಡು ಲೇಖನಗಳನ್ನು ಪ್ರಕಟಿಸಿತ್ತು. ಇದಕ್ಕೆ ಅಮ್ಮಾ ಈ ಪೋರ್ಟಲ್ ವಿರುದ್ಧ ಮಾನನಷ್ಟ ಮೊಕದಮ್ಮೆಯನ್ನೂ ಹೂಡಿದ್ದರು.

10 ರೆಡಿಫ್ ಡಾಟ್ ಕಾಂ ಪ್ರಕಟಿಸಿದ್ದ ಸುದ್ದಿಯಲ್ಲೇನಿತ್ತು?
ಕಳೆದ ವರ್ಷ ರೆಡಿಫ್ ಡಾಟ್‍ಕಾಂ- ಚೆನೈ ಮಾಧ್ಯಮಗಳಿಗೆ ಜಯಲಲಿತಾ ಅವರ ಆರೋಗ್ಯ ಉತ್ತಮವಾಗಿಲ್ಲ ಎಂಬ ಅರಿವಿದೆ. ಆದರೂ ಮೌನಿಯಾಗಿರೋದು ಯಾಕೆ ಎಂಬ ಶೀರ್ಷಿಕೆಯುಳ್ಳ ಮೊದಲ ಪೋಸ್ಟ್ ಪ್ರಕಟಿಸಿದರೆ, ಇನ್ನೊಂದು ಪೋಸ್ಟ್‍ನಲ್ಲಿ ಮುಖ್ಯಮಂತ್ರಿ ಜಯಲಲಿತಾ ತೀರ್ವ ಅಸ್ವಸ್ಥಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಅವರು ಯಾವುದೇ ಸಚಿವಾಲಯದ ಸಭೆ, ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಜಯಲಲಿತಾಗೆ ತೀರ್ವ ಅನಾರೋಗ್ಯ ಕಾಡುತ್ತಿದೆ. ಅವರಿಗೆ ಮೂತ್ರ ಪಿಂಡ ಅಥವಾ ಯಕೃತ್ತಿನ ಕಸಿ ನಡೆಸಬೇಕಂತೆ ಎಂದು ಪ್ರಕಟಿಸಿತ್ತು.

11. ಡಿಎಂಕೆಗೆ ಪ್ರಮುಖ ಅಸ್ತ್ರವಾಗಿತ್ತಾ ಜಯಾ ಅನಾರೋಗ್ಯದ ಸಮಸ್ಯೆ?
ಅಮ್ಮ ಅನಾರೋಗ್ಯದ ಕುರಿತು ವೆಬ್‍ಸೈಟ್‍ನಲ್ಲಿ ಪ್ರಕಟವಾಗ್ತಿದ್ದೇ ತಡ ಡಿಎಂಕೆಗೆ ಇದು ಪ್ರಮುಖ ಅಸ್ತ್ರವಾಗಿ ಪರಿಣಮಿಸಿತು. ಅಮ್ಮ ಅನಾರೋಗ್ಯದ ಕುರಿತು ವೆಬ್‍ಸೈಟ್‍ನಲ್ಲಿ ಪ್ರಕಟವಾದ ಮಾಹಿತಿ ನಿಜವೂ ಆಗಿರಬಹುದು ಯಾಕಂದ್ರೆ ಜಯಲಲಿತಾ ಸಿಎಂಆಗಿದ್ದಾಗಿನಿಂದಲೂ ಹೆಚ್ಚಿಗೆ ಎಲ್ಲೂ ಕಾಣಿಸಿಕೊಳ್ತಾ ಇಲ್ಲ, ಅವರ ಕಚೇರಿಯೂ ಕೂಡ ಈಗ ಮನೆಗೆ ಶಿಫ್ಟ್ ಆಗಿದೆ ಎಂದು ವ್ಯಂಗ್ಯವಾಡಿದಲ್ಲದೇ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಕೂಡ ನಮ್ಮ ಮುಖ್ಯಮಂತ್ರಿಗೆ ಈಗ ಕಂಪ್ಲೀಟ್ ರೆಸ್ಟ್‍ನ ಅಗತ್ಯವಿದೆ ಎಂದು ಕುಹಕ ಮಾತುಗಳನ್ನಾಡಿದ್ದರು.

12. ಕಾವೇರಿ ವಿವಾದ ಭುಗಿಲೆದ್ದಾಗ ತಮಿಳುನಾಡು ಸಿಎಂ ಎಲ್ಲಿದ್ದರು?
ಕಾವೇರಿ ನದಿ ನೀರು ಹಂಚಿಕೆಯ ವಿಚಾರವಾಗಿ ಇತ್ತೀಚಿಗಷ್ಟೇ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಭುಗಿಲೆದ್ದಿದ್ದವು. ಆಗಿನ ಸಮಯದ ಡೆವೆಲಪ್‍ಮೆಂಟ್ಸ್‍ಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದ್ದೇ ಆದಲ್ಲಿ ನಿಮಗೊಂದು ಇಂಪಾರ್ಟೆಂಟ್ ಕ್ಷೆಶ್ಚನ್ ಎದುರಾಗಿರುತ್ತದೆ. ಅದೇ ಜಯಲಲಿತಾ ಯಾಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನೋದು. ಹೌದು. ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನ ಸರ್ಕಾರ ಪದೇ ಪದೇ ಖ್ಯಾತೆ ತೆಗೆದಿದೆ. ಆದ್ರೆ ಇಂತಹ ಸಮಯದಲ್ಲಿ ಖುದ್ದು ಜಯಲಲಿತಾ ಎಂದಿಗೂ ಮಾಧ್ಯಮಗಳ ಮುಂದೆಯಾಗಲೀ ಅಥವಾ ಸಾರ್ವಜನಿಕರ ಮುಂದೆಯಾಗಲೀ ಕಾಣಿಸಿಕೊಂಡಿಲ್ಲ ಎಂಬುದು. ಇಂತಹ ಪರಿಸ್ಥಿತಿಗಳಲ್ಲಿ ಮುಖ್ಯಮಂತ್ರಿಗಳ ಪ್ರೆಸೆನ್ಸ್ ಹೈಲೀ ಇಂಪಾರ್ಟೆಂಟ್ ಆಗಿರುತ್ತೆ. ಆದ್ರೆ ಅಮ್ಮ ಹೋಗಿದ್ದಾದರೂ ಎಲ್ಲಿ?

  • ವಿಶ್ವನಾಥ್ ಶೇರಿಕಾರ್

Like us on Facebook  The New India Times

POPULAR  STORIES :

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

LEAVE A REPLY

Please enter your comment!
Please enter your name here