No menu items!
8.6 C
Munich
Wednesday, April 15, 2026

ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಗರಂ

Must read

ಗುಂಬಜ್ ಮಾದರಿ ಬಸ್ ತಂಗುದಾಣಗಳನ್ನ ತೆರವು ಮಾಡದಿದ್ದರೇ, JCB ತಂದು ಧ್ವಂಸಗೊಳಿಸ್ತೇನೆ ಎಂದು ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಅವರು, ಬಸ್ ತಂಗುದಾಣ ಹೊಡೆದು ಹಾಕಲು ಇವನ್ಯಾವನೋ..? ಬಸ್ ತಂಗುದಾಣ ಕಟ್ಟುವವರೆಗೂ ಇವರು ಏನು ಮಾಡುತ್ತಿದ್ದರು. ಖಾಸಗಿ ಇಂಜಿನಿಯರ್ ಕಟ್ಟಿಲ್ಲ, ಸರ್ಕಾರದ ಇಂಜಿನಿಯರ್ ಕಟ್ಟಿರುವುದು. ರಾಜ್ಯ ಸರ್ಕಾರದ ಹಣದಿಂದ ಬಸ್ ತಂಗುದಾಣಗಳನ್ನು ಕಟ್ಟಲಾಗಿದೆ. ಈಗ ಅವುಗಳನ್ನು ಹೊಡೆದು ಹಾಕಲು ಇವನು ಯಾವನು..? ವಿಧಾನಸಭೆ ಚುನಾವಣೆಗೆ ಮತಗಳ ಧ್ರುವೀಕರಣಕ್ಕೆ ಈ ರೀತಿ ಮಾಡ್ತಿದ್ದಾರೆ. ಭಾವನಾತ್ಮಕ ವಿಚಾರ ಇಟ್ಟುಕೊಂಡು ಮತಗಳ ಧ್ರುವೀಕರಣಕ್ಕೆ ಹೊರಟಿದ್ದಾರೆ. ಮೊಘಲರು 600 ವರ್ಷ ಆಳ್ವಿಕೆ ಮಾಡಿದ್ರಲ್ಲಾ, ಆಗ ಇವರೆಲ್ಲ ಎಲ್ಲಿ ಹೋಗಿದ್ರು. ಸಂಸದ ಪ್ರತಾಪ್ ಸಿಂಹಗೆ ಸಾಮಾನ್ಯ ಜ್ಞಾನವೂ ಇಲ್ಲ. ಬಸ್ ತಂಗುದಾಣ ಹೀಗೆ ಇರಬೇಕು ಎಂಬ ರೂಲ್ಸ್ ಎಲ್ಲಿದೆ. ಗುಂಬಜ್ ರೀತಿ ಇರುವುದನ್ನೆಲ್ಲಾ ಹೊಡೆದು ಬಿಡುತ್ತೀರಾ..? ಬಿಜೆಪಿ ಪಕ್ಷದವರ ಈ ತಂತ್ರ ವರ್ಕ್ ಆಗುವುದಿಲ್ಲ.
ಕರ್ನಾಟಕ ಮತ್ತು ಈ ದೇಶದ ಜನರು ಜಾತ್ಯಾತೀತರು. ಜಾತಿ, ಧರ್ಮದ ವಿಚಾರವನ್ನು ಜನರು ಎಂದಿಗೂ ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ರು. ಬಲವಂತದ ಮತಾಂತರಕ್ಕೆ ನನ್ನ ವಿರೋಧವೂ ಇದೆ. ಯಾರನ್ನೂ ಸಹ ಬಲವಂತವಾಗಿ ಮತಾಂತರ ಮಾಡಕೂಡದು. ಯಾರು ಯಾವ ಧರ್ಮವನ್ನು ಬೇಕಾದರೂ ಪಾಲನೆ ಮಾಡಬಹುದು. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪರ ನಾವು ಸಹ ಇದ್ದೇವೆ ಎಂದು ತಿಳಿಸಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article