No menu items!
18.1 C
Munich
Tuesday, May 5, 2026

ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ?

Must read

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಸುದ್ದಿ ಹುಸಿ ಎಂಬುದು ಸ್ಪಷ್ಟವಾಗಿದೆ. ಬಾಂಬ್ ಸ್ಫೋಟವೇನು ಆಗಿಲ್ಲ. ಇಂತಹ ಕರೆಗಳು ಬರುತ್ತವೆ. ಬಾಂಬ್ ಕರೆ ಹುಸಿ ಎಂದ ಬಳಿಕವೂ ಆ ವಿಷಯವನ್ನೇ ಹಿಡಿದು ಜಗ್ಗಾಡುವುದು ಯಾಕೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನು ಆಗಿಲ್ಲ ಅಂತಾ ನಿನ್ನೆಯೇ ಸ್ಪಷ್ಟವಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ? ಅದಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಇದೆ. ಅದನ್ನು ತನಿಖೆ ಮಾಡಿಯೇ ಮಾಡುತ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿವೆ.
ಇಂತಹ ವಿಷಯಗಳ ಬಗ್ಗೆ ಅನಗತ್ಯ ಭೀತಿ ಹುಟ್ಟಿಸಿದರೆ ಜನ ಗೊಂದಲಕ್ಕೆ ಸಿಲುಕುತ್ತಾರೆ ಎಂದರು.ಲೋಕಸಭಾ ಚುನಾವಣೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಮ್ಮ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕಳುಹಿಸಿದ ನಂತರ ಅದನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ ಎಂದರು.

- Advertisement -spot_img

More articles

- Advertisement -spot_img

Latest article