No menu items!
12.4 C
Munich
Wednesday, April 29, 2026

ಅಫ್ಘಾನಿಸ್ತಾನ ಆಕ್ರಮಿಸಿಕೊಂಡ ತಾಲಿಬಾನ್‌ಗೆ ಸಾವಿರಾರು ಕೋಟಿ ಡಾಲರ್ ಲಾಸ್!

Must read

ಸೇಡಿಗೆ ಸೇಡು, ರಕ್ತಕ್ಕೆ ರಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ.

ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್ ಅಜ್ಮಲ್ ಅಹ್ಮದಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಗೋಳಾಡಿದ್ದಾರೆ. ಆಂತರಿಕ ಯುದ್ಧ, ಗಲಭೆ, ಅಶಾಂತಿ ಪರಿಣಾಮ ಅಫ್ಘಾನ್‌ನ ಆರ್ಥಿಕ ಸ್ಥಿತಿ ಬೀದಿಗೆ ಬಂದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲೇ ತಾಲಿಬಾನ್ ಅಧಿಕಾರ ಹಿಡಿದಿದೆ. ಆದರೆ ಇಷ್ಟುದಿನ ಪಾಶ್ಚಿಮಾತ್ಯ ರಾಷ್ಟ್ರಗಳ ಮಾತು ಕೇಳುವ ಸರ್ಕಾರ ಅಫ್ಘಾನ್‌ನಲ್ಲಿ ಅಸ್ತಿತ್ವದಲ್ಲಿತ್ತು. ಆಗ ಅಫ್ಘಾನ್‌ಗೆ ಸಾವಿರಾರು ಕೋಟಿ ಹಣವನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ದಾನ ಮಾಡಿದ್ದವು.

ಈಗ ಪಾಶ್ಚಿಮಾತ್ಯರ ಮಾತು ಕೇಳಲು ತಾಲಿಬಾನ್ ಪಡೆಗಳು ಸಿದ್ಧವಿಲ್ಲ. ಇದೇ ಕಾರಣಕ್ಕೆ ಅಫ್ಘಾನಿಸ್ತಾನಕ್ಕೆ ಸೇರಿದ ಭಾರಿ ಪ್ರಮಾಣದ ಹಣವನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article