ಅವನ ನೆನಪಲ್ಲಿ ಅವಳ ಪತ್ರ ಓದಿದ್ರೆ ಕಣ್ಣೀರಿಡ್ತೀರಿ..!

0
85

ಅವನ ನೆನಪಲ್ಲಿ ಅವಳ ಪತ್ರ ಓದಿದ್ರೆ ಕಣ್ಣೀರಿಡ್ತೀರಿ..!

ಮನದ ಪುಟದಲಿ ಗೀಚಿದ ಆ ನೆನಪುಗಳು ಎಷ್ಟೊಂದು ಮಧುರಾ! ಅಷ್ಟೇ ಅಲ್ಲ ಬದುಕಿನ ಪಯಣದಲಿ ಅದೆಷ್ಟೊಂದು ನೋವು ನಲಿವುಗಳು, ಬದುಕೇ ಹಾಗೆ ನೆರಳು-ಬೆಳಕಿನಾಟ.

ಜೀವನವೆಂಬ ಕುದುರೆ ಮೇಲೆ ಒಂಟಿಯಾಗಿ ಸವಾರಿ ಮಾಡಬೇಕೆಂದಿದ್ದೆ. ಗೆಳೆತಿಯರಿಬ್ಬರ ಪ್ರೇಮದ ಕತೆ ತಿಳಿದಿದ್ದೆ.ಅದು ಕೇವಲ ಕತೆಯಾಗಿರಲಿಲ್ಲ ಜೀವನದ ಯಾತನೆಯಾಗಿತ್ತು. ನನಗೂ ಒಬ್ಬ ಗೆಳೆಯ ಬೇಕೆಂದೆನಿಸಿದರೂ ಮತ್ತದೆ ಗೆಳತಿಯರ ನೋವಿನ ಕತೆ ನನ್ನ ಎಚ್ಚರಿಸುತ್ತಿತ್ತು! ಇಡೀ ಹುಡುಗರ ಜಾತಿಯನ್ನೇ ದ್ವೇಷಿಸಲಾರಂಭಿಸಿದೆ.ಅಷ್ಟರಲ್ಲಿಯೇ ಒಂದು ದಿನ ಹುಡುಗರ ಗುಂಪಿನಲ್ಲೊಬ್ಬ ಧ್ರುವ ನಕ್ಷತ್ರದಂತೆ ಕಂಗೊಳಿಸಿವ ಹುಡುಗನೆಡೆಗೆ ನನ್ನ ಮನವು ಜಾರಿತು.
ಪರಿಚಿತರಾದೆವು ಪ್ರೀತಿಸಲಾರಂಭಿಸಿದೆವು. ಆತ ಪ್ರೀತಿ ಎಂದರೇನೆಂದು ಹೇಳಿಕೊಟ್ಟ. ಹುಡುಗರೆಂದರೆ ಸಿಡುಕುತ್ತಿದ್ದ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿತ್ತು. ಎಲ್ಲಾ ಪ್ರೇಮಕತೆಯಲ್ಲಿ ಸಾಮಾನ್ಯವಾಗಿ ಹುಡುಗರೇ ಮುಂದೆ ಬಂದು ಪ್ರೀತಿಯ ನಿವೇದನೆ ಮಾಡಿಕೊಂಡರೆ ನನ್ನ ಲವ್‍ಸ್ಟೋರಿ ಸ್ವಲ್ಪ ಡಿಫ್ರೆಂಟ್, ಪಾಪ ಅವನ ಪಾಡಿಗೆ ಅವನಿದ್ದ ನಾನೇ ಅವನಿಗೆ ಪ್ರಪೋಸ್‍ಮಾಡಿ ಅವನ ಹೃದಯದಲಿ ತಾಜ್‍ಮಹಾಲ್ ಕಟ್ಟಿಸಿಕೊಂಡೆ! ಪಾಪ ನನಗಾಗಿ ಎಷ್ಟೋ ನೋವನ್ನು ಸಹಿಸಿಕೊಂಡ. ನಾನೇನೆ ಅಂದರು ಕೇಳುತ್ತಿದ್ದ. ತುಂಬು ಕುಟುಂಬ ಅವನದು, ಮನೆಯಲ್ಲಿ ಸ್ವಲ ಕಷ್ಟ ಆದರೂ ನನ್ನ ಮಸ್ಸಿಗೆ ಎಂದು ನೋವು ಮಾಡಿದವನಲ್ಲ.
ಅಂತು ಇಂತು ಕಾಲೇಜು ಜೀವನ ಮುಗಿಯಿತು. ಕಾಕತಾಳಿಯವೆಂಬಂತೆ ಇಬ್ಬರಿಗೂ ಒಂದೆಡೆಯೇ ಉದ್ಯೋಗವೂ ದೊರೆಯಿತು. ನಾವು ಸಿಂಪಲ್ ಆಗಿ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆ ಮಾಡ್ಕೊಂಡು ನಂತರ ನಾಲ್ಕೈದು ಜನರಿಗೆ ಊಟ ಹಾಕೋದು ಅಂತ ತೀರ್ಮಾನ ಮಾಡ್ಕೊಂಡ್ವಿ.
ನಾಳೆ ಮದುವೆ ಅಂತ ಇವತ್ತು ಆತ ನನಗೆ ಬೇಕೆಂದಿದ್ದೆಲ್ಲಾ ಕೊಡಿಸಿದ.ಸರ, ಬಳೆ, ಸೀರೆ, ಹೀಗೆ ಅವನು ಕೊಟ್ಟ ಪ್ರೀತಿಯ ಉಡುಗೊರೆಯನ್ನು ಮನೆಗೆ ತೆಗೆದುಕೊಂಡು ಹೋದೆ. ಸಂತೋಷದಿಂದ ಕುಣಿಯುತ್ತ ಹೋದ ನನಗೆ ಮನೆಯಲ್ಲಿ ಗಲಾಟೆಯ ಸದ್ದು ಕೇಳಿಸುತ್ತಿತ್ತು. ನೋಡಿದರೆ ನಮ್ಮ ಹತ್ತಿರದ ಸಂಬಂಧಿಕರು ಅಪ್ಪ ಅಮ್ಮನ ಮೇಲೆ ರೇಗುತ್ತಿದ್ದರು.ದುಡ್ಡಿನ ಮದದಲ್ಲಿ ತೇಲುತ್ತಿದ್ದ ಅವರಿಗೆ ಈ ಮದುವೆ ಇಷ್ಟ ಇರಲ್ಲಿಲ್ಲ ಅಪ್ಪ ಅಮ್ಮ ಅವರ ಮಾತಿಗೆ ಕೊನೆಗೂ ಮರುಳಾದರು. ನನ್ನ ಕರೆದುಕೊಂಡು ಎತ್ತಲೋ ಪಯಣ ಬೆಳಿಸಿದರು. ಪಾಪ ಆ ನನ್ನ ಗೆಳೆಯ ನನಗಾಗಿ ಮಾರನೇ ದಿನ ಎಷ್ಟು ಕಾದನೋ ಏನೋ? ಅವನು ಹೇಗಿದ್ದಾನೋ ಎಲ್ಲಿದ್ದಾನೋ? ನಾನು ಮಾತ್ರ ಅವನ ನೆನಪಿನಲ್ಲಿ ಬೇರೊಬ್ಬನ ಬಾಳಸಂಗಾತಿಯಾಗಿ ಬಾಳ ಸವೆಸುತಲಿರುವೆ.
ಹುಡುಗರೇ ಹುಡುಗಿಯರಿಗೆ ಮೋಸ ಮಾಡುತ್ತಾರೆ ಅಂತ ಎಲ್ಲಾ ಹುಡುಗರನ್ನೂ ದ್ವೇಷಿಸುತ್ತಿದ್ದ ನಾನು ಆ ಹುಡುಗನಿಗೇ ಮೋಸ ಮಾಡಿದೆ. ಮನಸ್ಸಿನಲ್ಲಿ ವರಿಸದ್ದೇ ಬೇರೆ ಹುಡುಗನನ್ನು.. ಮದುವೆಯಾಗಿ ಬಾಳ್ವೆ ನಡೆಸುತ್ತಿರುವುದೇ ಇನ್ನೊಬ್ಬನ ಜೊತೆ! ಇದು ನನ್ನೊಬ್ಬಳ ಕತೆಯಲ್ಲ, ನನ್ನಂತ ಹಲವು ಹುಡುಗಿಯರ ಕತೆ,ವ್ಯಥೆ!

ಬ್ರೇಕಪ್ ಮಾಡಿಕೊಳ್ಳೋ ಟೈಮ್ ಬಂದಿದೆ ಅನಿಸಿದ್ರೆ ಮಾತ್ರ ಇದನ್ನು ಓದಿ..! 

ನೀವು ಯಾವುದೇ ಸಂಬಂಧ ತೆಗೆದುಕೊಳ್ಳಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ , ಗೌರವ ಅಗತ್ಯ. ‌ಯಾವ ಸಂಬಂಧದಲ್ಲಿ ಇವುಗಳ ಕೊರತೆ ಕಂಡುಬರುತ್ತದೆಯೋ ಅಂಥಾ ಸಂಬಂಧವನ್ನು ಮುರಿದು ಕೊಳ್ಳುವುದೇ ಉತ್ತಮ .

ನೀವು ನಿಮ್ಮ ಸಂಬಂಧ ಮುರಿದುಕೊಳ್ಳಲೇ ಬೇಕಾದ ಅನಿವಾರ್ಯತೆ ನಿಮಗಾಗಿ ಅವಶ್ಯಕ ಎಂದು ಮನಗಾಣುವುದು ಹೇಗೆ? ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆಯಾ? ಅದಕ್ಕೆ ಇಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇವೆ.

 

ಪದೇ ಪದೇ ನಿಂದನೆ : ಯಾವುದೇ ಆರೋಗ್ಯಕಾರಿಯಾದ  ಸಂಬಂಧವೆಂದರೆ ಅಲ್ಲಿ ಪರಸ್ಪರ ಗೌರವ  ಕಾಳಜಿ ಇರಬೇಕು‌. ಪದೇ ಪದೇ ದೈಹಿಕ ಹಿಂಸೆ ಮಾನಸಿಕ ಹಿಂಸೆ ಆಗುತ್ತಿದ್ದರೆ ನಿಮ್ಮನ್ನು ಯಾವಾಗಲೂ ಭಾವನೆಗಳಿಗೆ ನೋವುಂಟಾಗುವ ಹಾಗೆ ಮಾಡ್ತಿದ್ರೆ ಅಂಥಾ ಸಂಬಂಧದಿಂದ ಹೊರಬರುವುದೇ ಉತ್ತಮ.

 

ಮನೆಯಲ್ಲಿ, ಸ್ನೇಹಿತರಿಗೆ ಗೊತ್ತಿರದೆ ರಹಸ್ಯ ಕಾಪಾಡುತ್ತಿದ್ದರೆ : ನಿಮ್ಮವನು ನಿಮ್ಮ ಪರಿಚಯವನ್ನು ಮನೆಯಲ್ಲಿ ಮಾಡಿಕೊಡದೆ, ಸ್ನೇಹಿತರಿಗೂ ಪರಿಚಯ ಮಾಡಿಕೊಡದೆ ರಹಸ್ಯವಾಗಿಯೇ ನಿಮ್ಮೊಡನೆ ಸಂಬಂಧ ಹೊಂದಿದ್ದರೆ ನೀವು ಅವನ ಜೀವನದ ರಹಸ್ಯ ಮಾತ್ರ…! ಅಂಥಾ ಸಂಭಂದ ನಿಮಗೆ ಮುಂದೆ ಮುಳು ಆಗಬಹುದು.

ಕಾರ್ಯಕ್ರಮ ಬದಲಾವಣೆ : ಶಾಪಿಂಗ್, ಮೂವಿ ಅಥವಾ ಯಾವ್ದಾದ್ರು ಕಾರ್ಯಕ್ರಮಕ್ಕೆ ಹೋಗೋ ಪ್ಲ್ಯಾನ್ ಮಾಡಿಕೊಂಡಿರುವಾಗ ಪದೇ ಪದೇ  ಏನಾದರೂ ಕಾರಣ ಹೇಳಿ ನಿಮ್ಮವ ತಪ್ಪಿಸಿಕೊಳ್ಳುತ್ತಿದ್ದರೆ ಅವರಿಗೆ ನಿಮ್ಮನ್ನು ಆಚೆ ಕರೆದುಕೊಂಡು ಹೋಗಲು, ನಿಮಗಾಗಿ ಸಮಯ ಮೀಸಲಿಡಲು ಆಗದಿದ್ದರೆ ಅವರಿಗೆ ನೀವು ಏನೂ ಅಲ್ಲ, ನಿಮ್ ಸಂಬಂಧ ಬೇಡ ಎಂದೇ ಅರ್ಥ… ಇನ್ನು ತೀರ್ಮಾನ ನಿಮ್ಮದು..

ನಂಬಿಕೆಗೆ ಅರ್ಹವಾಗಿರದಿದ್ದರೆ : ಸಂಬಂಧಗಳಲ್ಲಿ ಮುಖ್ಯವಾಗಿ ಬೇಕಾಗುವುದೇ ನಂಬಿಕೆ . ಆ ನಂಬಿಕೆ ಇಲ್ಲದಿದ್ದರೆ ಅಥವಾ ಅವರು ನಿಮ್ಮ ನಂಬಿಕೆಗೆ ಅರ್ಹರಲ್ಲದೆ ಇದ್ದರೆ ನೀವು ಸಂಬಂಧ ಕಡಿದುಕೊಳ್ಳುವುದೇ ಲೇಸು.

ಆಯ್ಕೆಗಳು ವಿಭಿನ್ನ : ನಿಮ್ಮ ಆಯ್ಕೆಗೂ ಅವರ ಆಯ್ಕೆಗಳಿಗೂ ಬಹಳ ವಿಭಿನ್ನತೆ ಇದ್ದರೆ,‌ನಿಮ್ಮ ಯೋಚನೆಗಳಿಗೂ ಅವತ ಯೋಚನೆಗಳಿಗೂ ಬಹಳ ವ್ಯತ್ಯಾಸವಿದ್ದರೆ ನೀವು ದೂರ ಆಗುವುದೇ ಒಳ್ಳೆಯದು ಎಂದು ಅರ್ಥ

 

ಕೆಟ್ಟ ಪದ ಬಳಕೆ ಜಗಳ :

ಜಗಳಗಳು ಕಾಮನ್…ಆದ್ರೆ ಜಗಳ ಆಡುವಾಗ ತೀರ ಕೆಟ್ಟ , ಅಶ್ಲೀಲ ಪದಗಳ ಬಳಕೆ ಮಾಡಿ ನಿಮ್ಮನ್ನು ನಿಂದಸುತ್ತಿದ್ದರೆ, ನಿಮಗೆ ನೋವುಂಟು ಮಾಡುತ್ತಿದ್ದರೆ ಅವರನ್ನು ದೂರವಿಡಿ.

ಹೊಟ್ಟೆಕಿಚ್ಚು , ಸಂಶಯ : ನಿಮ್ಮ ಕಷ್ಟ ಸುಖಕ್ಕೆ ಆಗದೆ , ನಿಮ್ಮ ಶ್ರೇಯಾಭಿವೃದ್ಧಿಯನ್ನು ಸಹಿಸದೆ ಹೊಟ್ಟೆ ಕಿಚ್ಚು ತೋರುತ್ತಿದ್ದರೆ, ನಿಮ್ಮ ಮೇಲೆ ಸಂಶಯ ಪಡುತ್ತಿದ್ದರೆ ದೂರಾಗುವುದೇ ಒಳ್ಳೆಯದೇ…

 

LEAVE A REPLY

Please enter your comment!
Please enter your name here