No menu items!
15.1 C
Munich
Saturday, June 13, 2026

ಆಟಗಾರನಿಗೆ ಕೆಟ್ಟದಾಗಿ ಶುಭಕೋರಿದ ಬಾಂಗ್ಲಾ!

Must read

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತನ್ನದೇ ತಂಡದ ಮರಣ ಹೊಂದಿರುವ ಕ್ರಿಕೆಟಿಗನೊಬ್ಬನ ಜನ್ಮದಿನದಂದು ಗೌರವ ಸಲ್ಲಿಸಲು ಹೋಗಿ ಎಡವಟ್ಟೊಂದನ್ನು ಮಾಡಿಕೊಂಡಿದೆ. ಮಂಜುರಲ್ ಇಸ್ಲಾಂ ರಾಣಾ ಎಂಬ ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟಿಗ ತನಗೆ 22 ವರ್ಷ ವಯಸ್ಸಾಗಿರುವಾಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು.

2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಂಜುರಲ್ ಇಸ್ಲಾಮ್ ರಾಣಾ ಆಗಿನ ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಅವರ ವಿಕೆಟ್‍ನ್ನು ತಾನು ಎಸೆದ ಮೂರನೇ ಎಸೆತದಲ್ಲಿಯೇ ಪಡೆದಿದ್ದರು. ಹೀಗೆ ಮೊದಲನೇ ಪಂದ್ಯದಲ್ಲಿಯೇ ಆಕರ್ಷಕ ಬೌಲಿಂಗ್ ಮಾಡುವುದರ ಮೂಲಕ ಬೆಳಕಿಗೆ ಬಂದಿದ್ದ ಮಂಜುರಲ್ ಇಸ್ಲಾಂ ರಾಣಾ ತನಗೆ 22 ವರ್ಷ ವಯಸ್ಸಾಗಿರುವಾಗ 2007ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

 

 

ಇದೇ ಮಂಜುರಲ್ ಇಸ್ಲಾಂ ರಾಣಾ ಮೇ 4, 1984ರಲ್ಲಿ ಜನನವನ್ನು ಹೊಂದಿದ್ದರು. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮಂಗಳವಾರ ( ಮೇ 4 ) ಮಂಜುರಲ್ ಜನ್ಮದಿನದ ನೆನಪಿನ ಶುಭಾಶಯವನ್ನು ಕೆಟ್ಟ ರೀತಿಯಲ್ಲಿ ಕೋರಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಅತಿಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟ ಟೆಸ್ಟ್ ಕ್ರಿಕೆಟರ್ ಮಂಜುರಲ್ ಇಸ್ಲಾಂ ರಾಣಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಳ್ಳುವ ಮೂಲಕ ಬಾಂಗ್ಲಾದೇಶ ಕೆಟ್ಟದಾಗಿ ಶುಭಾಶಯವನ್ನು ಕೋರಿತ್ತು. ಬಾಂಗ್ಲಾದೇಶ ಮಾಡಿದ ಈ ಟ್ವೀಟ್ ವಿರುದ್ಧ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ನಂತರ ಅದನ್ನು ತೆರವು ಮಾಡಿ ಸರಿಯಾದ ರೀತಿಯಲ್ಲಿ ಮತ್ತೊಮ್ಮೆ ಶುಭಾಶಯವನ್ನು ಕೋರಿತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article