No menu items!
16.9 C
Munich
Monday, June 15, 2026

ಆರ್ ಪಿ ಸಿಂಗ್ ತಂದೆ ಕೊರೊನಾಗೆ ಬಲಿ

Must read

ದೇಶದಾದ್ಯಂತ ಕೊರೊನಾವೈರಸ್ ಎರಡನೇ ಅಲೆ ಜೋರಾಗಿದ್ದು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೆಲ ಕ್ರೀಡಾಪಟುಗಳು ಕೊರೊನಾಗೆ ಬಲಿಯಾಗಿದ್ದಾರೆ ಹಾಗೂ ಅನೇಕ ಕ್ರೀಡಾಪಟುಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.

ಇದೀಗ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಅವರ ತಂದೆ ಶಿವ್ ಪ್ರಸಾದ್ ಸಿಂಗ್ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವ್ ಪ್ರಸಾದ್ ಸಿಂಗ್ ಅವರನ್ನು ಲಕ್ನೋ ನಗರದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದನಂತರ ಶಿವ್ ಪ್ರಸಾದ್ ಸಿಂಗ್ ಅವರಿಗೆ ಕೊರೊನಾಸೋಂಕು ದೃಢಪಟ್ಟಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ( ಮೇ 12 ) ಆರ್‌ಪಿ ಸಿಂಗ್ ಅವರ ತಂದೆ ಶಿವ್ ಪ್ರಸಾದ್ ಸಿಂಗ್ ಮೃತಪಟ್ಟಿದ್ದಾರೆ.

 

ಮೊನ್ನೆ ಮೊನ್ನೆಯಷ್ಟೇ ಪಿಯೂಷ್ ಚಾವ್ಲಾ ಅವರ ತಂದೆ ಪ್ರಮೋದ್ ಚಾವ್ಲಾ ಅವರು ಕೊರೊನಾಸೋಂಕಿನಿಂದ ಮೃತಪಟ್ಟಿದ್ದಾಗ ಆರ್‌ಪಿ ಸಿಂಗ್ ಅವರು ಶ್ರದ್ಧಾಂಜಲಿಯನ್ನು ಸಲ್ಲಿಸಿ ಸಂತಾಪ ಸೂಚಿಸಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article